ಚಿಕ್ಕಮಗಳೂರುಶ್ರೀ ಸುಬ್ರಹ್ಮಣ್ಯ ಭಾರತಿ ಅವರು ತಮಿಳು ಭಾಷೆಯ ದೊಡ್ಡ ಲೇಖಕರು ಮತ್ತು ಕವಿಗಳು. ಅಲ್ಲದೇ ಸ್ವಾತಂತ್ರ್ಯ ಕಾರ್ಯ ಕರ್ತರು, ಸಮಾಜ ಸುಧಾರಕರು ಹಾಗೂ ಬಹುಭಾಷಾ ಪಂಡಿತರು ಎಂದು ಶ್ರೀ ಸುಬ್ರಹ್ಮಣ್ಯ ಭಾರತಿ ಮಹಾಸಭಾ ತಮಿಳು ಸಂಘದ ಅಧ್ಯಕ್ಷ ಜಿ.ರಘು ಹೇಳಿದರು.

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಶ್ರೀ ಸುಬ್ರಹ್ಮಣ್ಯ ಭಾರತಿ ಅವರು ತಮಿಳು ಭಾಷೆಯ ದೊಡ್ಡ ಲೇಖಕರು ಮತ್ತು ಕವಿಗಳು. ಅಲ್ಲದೇ ಸ್ವಾತಂತ್ರ್ಯ ಕಾರ್ಯ ಕರ್ತರು, ಸಮಾಜ ಸುಧಾರಕರು ಹಾಗೂ ಬಹುಭಾಷಾ ಪಂಡಿತರು ಎಂದು ಶ್ರೀ ಸುಬ್ರಹ್ಮಣ್ಯ ಭಾರತಿ ಮಹಾಸಭಾ ತಮಿಳು ಸಂಘದ ಅಧ್ಯಕ್ಷ ಜಿ.ರಘು ಹೇಳಿದರು.ನಗರದ ಚಂದ್ರಶೇಖರ್ ಆಜಾದ್‌ಪಾರ್ಕ್ ವೃತ್ತ ಸಮೀಪದ ತಮಿಳು ಶಾಲೆಯಲ್ಲಿ ಶ್ರೀ ಸುಬ್ರಹ್ಮಣ್ಯ ಭಾರತಿ ಮಹಾಸಭಾ ತಮಿಳು ಸಂಘದಿಂದ ಆಯೋಜಿಸಿದ್ಧ ಮಹಾಕವಿ ಶ್ರೀ ಸುಬ್ರಹ್ಮಣ್ಯ ಭಾರತಿ ಅವರ ಜನ್ಮದಿನದ ಪ್ರಯುಕ್ತ ಭಾವಚಿತ್ರಕ್ಕೆ ಪುಷ್ಪಾ ರ್ಚನೆ ಸಲ್ಲಿಸಿ ಹಾಗೂ ವಿದ್ಯಾರ್ಥಿಗಳಿಗೆ ಟ್ರ್ಯಾಕ್‌ಸೂಟ್ ವಿತರಿಸಿ ಮಾತನಾಡಿದರು.೧೮೮೨ರಲ್ಲಿ ಜನಿಸಿದ ಶ್ರೀ ಸುಬ್ರಹ್ಮಣ್ಯ ಭಾರತೀಯರು ಆಧುನಿಕ ತಮಿಳು ಕಾವ್ಯದ ಪ್ರವರ್ತಕರಾಗಿ ಕಾರ್ಯನಿರ್ವಹಿಸಿದಕ್ಕೆ ಭಾರತಿ ಎಂಬ ಬಿರುದು ನೀಡಲಾಯಿತು. ಅಲ್ಲದೇ ಮಹಿಳೆಯರ ವಿಮೋಚನೆ ಕ್ಷೇತ್ರದ ಅವರ ಕೃತಿಗಳು, ಬಾಲ್ಯವಿವಾಹದ ವಿರುದ್ಧ ನಿಲುವು ಬಹಳಷ್ಟು ಶಕ್ತಿ ಹೊಂದಿದ್ದವು ಎಂದು ತಿಳಿಸಿದರು.ಭಾರತಕ್ಕಾಗಿ ದೇಶ ಭಕ್ತಿ ಕಲ್ಪನೆ, ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧದ ಸ್ವಾತಂತ್ರ್ಯ ಚಳವಳಿಯನ್ನು ಸುತ್ತು ವರಿದಿರುವ ಅವರ ಅತ್ಯು ತ್ತಮ ಸಾಹಿತ್ಯ ಕೃತಿಗಳಿಗೆ ಹೆಸರುವಾಸಿಯಾಗಿವೆ. ಚಿಕ್ಕ ವಯಸ್ಸಿನಿಂದಲೇ ಭಾರತಿ ಯರು ಸಂಗೀತದಲ್ಲಿ ಪರಿಣೀತರಾಗಿದ್ದರು. ಮತ್ತು ಸಂಸ್ಕೃತ, ಇಂಗ್ಲಿಷ್, ಹಿಂದಿ, ತೆಲುಗು ಸೇರಿದಂತೆ ಅನೇಕ ಭಾಷೆಗಳಲ್ಲಿ ಪರಿಣಿತಿ ಹೊಂದಿದ್ದರು ಎಂದರು.ಹಲವಾರು ವರ್ಷಗಳ ಕಾಲ ಜೀವನದಲ್ಲಿ ಬಡತನ ಮತ್ತು ಕಷ್ಟಗಳನ್ನು ಸಹಿಸಿ ದೇಶಕ್ಕಾಗಿ ಮುಡಿಪಾದ ಧೀರ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ತನ್ನ ಲೇಖನಿಯಿಂದಲೇ ಬ್ರಿಟಿಷ್ ಸರ್ಕಾರದ ಗಮನ ಸೆಳೆದ ಪತ್ರಿಕೋದ್ಯಮಿ. ಕವಿಯಾಗಿ ಕಂಡ ಕನಸು ನನಸಾಗಿ ಮಾಡಲು ಹೋರಾಡಿದ ದಿಟ್ಟ ಸಾಹಸಮಯ ವ್ಯಕ್ತಿ ಎಂದು ಬಣ್ಣಿಸಿದರು.ಸಂಘದ ಎಸ್‌ಡಿಎಂ ಮಂಜು, ಸಲಹಾ ಸಮಿತಿ ಅಧ್ಯಕ್ಷ ವಿಜಯ್‌ಕುಮಾರ್ ಮಾತನಾಡಿ ಸುಬ್ರಮಣಿ ಯ ಭಾರತಿಯವರ ಬರಹ ಗಳು ಜನರಲ್ಲಿ ದೇಶಭಕ್ತಿ ತುಂಬಿದವು, ಭಾರತೀಯ ಸಂಸ್ಕೃತಿ ಮತ್ತು ದೇಶದ ಆಧ್ಯಾತ್ಮಿಕ ಪರಂಪರೆ ಸಾರವನ್ನು ಜನ ಸಾಮಾನ್ಯರಿಗೆ ಅರ್ಥವಾಗುವ ಭಾಷೆಯಲ್ಲಿ ತಲುಪಿವೆ ಎಂದು ಹೇಳಿದರು.ಇದೇ ವೇಳೆ ವಿವಿಧ ಸ್ಪರ್ಧೆಗಳಲ್ಲಿ ವಿಜೇತ ಮಕ್ಕಳಿಗೆ ಯುವಘಟಕದ ಪ್ರಧಾನ ಕಾರ್ಯದರ್ಶಿ ಜಿ.ಕೆ. ಕಾರ್ತೀಕ್ ಬಹುಮಾನ ವಿತರಿಸಲಾಯಿತು. ಈ ಸಂದರ್ಭದಲ್ಲಿ ಸಂಘದ ಜಿಲ್ಲಾ ಉಪಾಧ್ಯಕ್ಷ ಕೃಷ್ಣ, ಯುವಘಟಕದ ಅಧ್ಯಕ್ಷ ಕೆ.ಕುಮಾರ್, ಸಹ ಕಾರ್ಯದರ್ಶಿಗಳಾದ ಗೋಪಿ, ದಕ್ಷಿಣಮೂರ್ತಿ, ಚಿನ್ನಪ್ಪ, ಎಸ್‌ಡಿಎಂ ಮಂಜು, ಸಲಹಾ ಸಮಿತಿ ಅಧ್ಯಕ್ಷ ವಿಜಯ್‌ಕುಮಾರ್, ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.