ಸಾರಾಂಶ
ಪಾಲೂರು ಮಹಾಲಿಂಗೇಶ್ವರ ದೇವಾಲಯದಲ್ಲಿ ಷಷ್ಠಿ ಹಬ್ಬ ನಾಗ ಪೂಜೆಯೊಂದಿಗೆ ಶ್ರದ್ಧಾ ಭಕ್ತಿಯಿಂದ ಜರುಗಿತು.
ಕನ್ನಡಪ್ರಭ ವಾರ್ತೆ ನಾಪೋಕ್ಲು
ಸಮೀಪದ ಪಾಲೂರು ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ಶನಿವಾರ ಷಷ್ಠಿ ಹಬ್ಬ ನಾಗ ಪೂಜೆಯೊಂದಿಗೆ ಶ್ರದ್ಧಾ ಭಕ್ತಿಯಿಂದ ಜರುಗಿತು.ನಾಗನಕಟ್ಟೆಯಲ್ಲಿ ನಾಗನ ಪ್ರತಿಕೃತಿಗಳಿಗೆ ಹಾಲು, ಎಳೆನೀರು ಅಭಿಷೇಕದೊಂದಿಗೆ ವಿಶೇಷ ಪೂಜೆ ನೆರವೇರಿಸಲಾಯಿತು. ಆ ಬಳಿಕ ದೇವಾಲಯದಲ್ಲಿ ಮಹಾಪೂಜೆ ತೀರ್ಥ ಪ್ರಸಾದ ವಿತರಣೆಯ ನಂತರ ಭಕ್ತಾದಿಗಳಿಗೆ ಅನ್ನದಾನ ನೆರವೇರಿತು.
ಪೂಜಾ ವಿಧಿ ವಿಧಾನವನ್ನು ದೇವಾಲಯದ ಮುಖ್ಯ ಅರ್ಚಕ ದೇವಿ ಪ್ರಸಾದ ನೆರವೇರಿಸಿದರು. ಈ ಸಂದರ್ಭ ದೇವಾಲಯದ ಪಾರುಪತ್ತೆಗಾರ ಮನು ಟಿ.ಕೆ ಹಾಗೂ ಗಗನ್ ಮುತ್ತಪ್ಪ, ನಿರನ್ ಸೇರಿದಂತೆ ಊರ ಮತ್ತು ಪರ ಊರಿನ ಭಕ್ತಾದಿಗಳುಅಧಿಕ ಸಂಖ್ಯೆಯಲ್ಲಿ ಭಾಗವಹಿಸಿ ವಿವಿಧ ಪೂಜಾ ಕಾರ್ಯಗಳನ್ನು ನೆರವೇರಿಸಿ ಹರಕೆ ಕಾಣಿಕೆ ಒಪ್ಪಿಸಿ ಭಕ್ತಿ ಪರವಶಾರಾದರು.