ಸಾರಾಂಶ
ರಾಣಿಬೆನ್ನೂರು: ಸರ್ಕಾರದಿಂದ ಬರುವ ಅನೇಕ ಯೋಜನೆಗಳ ಸಹಾಯಧನವನ್ನು ಫಲಾನುಭವಿಗಳಿಗೆ ತಲುಪಿಸದೆ ಹಾಗೂ ಖಾತೆ ಲಾಕ್ ಮಾಡಿಕೊಂಡು ಸಾಲಕ್ಕೆ ವಜಾ ಮಾಡಿಕೊಳ್ಳುತ್ತಿರುವ ಕಾರ್ಯವನ್ನು ತಾಲೂಕಿನಲ್ಲಿ ಬ್ಯಾಂಕ್‌ಗಳು ಮಾಡುತ್ತಿದೆ. ಈ ಕುರಿತು ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ರಾಜ್ಯ ಉಪಾಧ್ಯಕ್ಷ ಎಸ್.ಆರ್. ಪಾಟೀಲ ಅವರಿಗೆ ರೈತ ಸಂಘದಿಂದ ಮನವಿ ಸಲ್ಲಿಸಲಾಯಿತು.ಈ ಸಮಯದಲ್ಲಿ ಮಾತನಾಡಿದ ರೈತ ಮುಖಂಡ ರವೀಂದ್ರಗೌಡ ಪಾಟೀಲ, ರಾಜ್ಯ ಸರಕಾರದ ಗೃಹಲಕ್ಷ್ಮಿ, ಸಂಧ್ಯಾ ಸುರಕ್ಷಾ, ವೃದ್ಧಾಪ್ಯವೇತನ, ವಿಧವಾ ವೇತನ ಹಾಗೂ ಅಂಗವಿಕಲ ವೇತನದಂತಹ ಯೋಜನೆಗಳಿಂದ ಬಡ ಜನರಿಗೆ ಸಿಗುವ ಪಿಂಚಣಿ ಹಣವನ್ನು ಈ ಬ್ಯಾಂಕಿನವರು ಅವರವರ ಸಾಲದ ಖಾತೆಗೆ ಜಮಾ ಮಾಡಿಕೊಂಡು ಫಲಾನುಭವಿಗಳು ತಮ್ಮ ಹೆಸರಿಗೆ ಸರ್ಕಾರದಿಂದ ಬಂದ ಹಣವನ್ನು ಡ್ರಾ ಮಾಡಿಕೊಳ್ಳದಂತೆ ಲಾಕ್ ಮಾಡಿಕೊಳ್ಳುತ್ತಿರುವ ಕಾರ್ಯ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಸೇರಿದಂತೆ ಎಲ್ಲಾ ಬ್ಯಾಂಕಿನಲ್ಲಿ ನಡೆಯುತ್ತಿದೆ. ಈ ಕುರಿತು ಲೀಡ್ ಬ್ಯಾಂಕಿನವರಿಗೆ ನಾವು ಈಗಾಗಲೇ ಈ ಬಗ್ಗೆ ದೂರು ನೀಡಿದ್ದು ಜಿಲ್ಲೆಯಲ್ಲಿ ಲೀಡ್ ಬ್ಯಾಂಕ್ ವ್ಯವಸ್ಥಾಪಕರ ಮಾತನ್ನು ಈ ಬ್ಯಾಂಕಿನವರು ಕೇಳುತ್ತಿಲ್ಲ. ಅವರೂ ಕೂಡ ಸೀರಿಯಸ್ ಆಗಿಲ್ಲ. ಹೀಗಾಗಿ ಬ್ಯಾಂಕಿನವರ ಆಡಿದ್ದೇ ಆಟವಾಗಿದೆ. ಜಿಲ್ಲೆಯ ಬಡಜನರ, ನಿರ್ಗತಿಕರ, ವಯೋವೃದ್ಧರಿಗೆ ಇಂತಹ ಪಿಂಚಣಿ ಯೋಜನೆಗಳು ಬದುಕಿಗೆ ಆಸರೆಯಾಗಿವೆ. ಈ ಹಣವನ್ನು ಆಸ್ಪತ್ರೆಗೆ, ಔಷಧಿ, ಮಾತ್ರೆ, ಮಕ್ಕಳ ವಿದ್ಯಾಭ್ಯಾಸಕ್ಕೆ ಅವರವರ ಅಗತ್ಯಕ್ಕೆ ತಕ್ಕಂತೆ ಉಪಯೋಗಿಸಿಕೊಳ್ಳುತ್ತಾರೆ. ಸರಕಾರ ಬಡವರಿಗೆ ಅನುಕೂಲವಾಗಲೆಂದೇ ಸದುದ್ದೇಶದಿಂದ ಇಂತಹ ಯೋಜನೆಯನ್ನು ಜಾರಿಗೆ ತಂದಿರುತ್ತದೆ. ಆದರೆ ಕೆಲವು ಅಧಿಕಾರಿಗಳು, ಬ್ಯಾಂಕಿನವರ ಸರಕಾರದ ಈ ಯೋಜನೆಗೆ ಈ ರೀತಿ ಎಳ್ಳುನೀರು ಬಿಡುತ್ತಿದ್ದಾರೆ. ಇದನ್ನು ಗಮನಿಸಬೇಕಾದ ಜಿಲ್ಲಾ ಉಸ್ತುವಾರಿ ಸಚಿವರಿಗೆ, ಜಿಲ್ಲಾಧಿಕಾರಿಗಳಿಗೆ ಬಡವರ ಕಾರ್ಯಕ್ರಮದ ಬಗ್ಗೆ ಗಮನ ಹರಿಸುವುದಕ್ಕೆ ಸಮಯವೇ ಇಲ್ಲದಂತಾಗಿದೆ. ಕೂಡಲೇ ಲಾಕ್ ಆಗಿರುವ ಖಾತೆಗಳನ್ನು ಓಪನ್ ಮಾಡಿಸಲು ಕಟ್ಟುನಿಟ್ಟಿನ ಆದೇಶ ಮಾಡಿ ಸ್ವಲ್ಪವೂ ಸಾಮಾನ್ಯ ಜ್ಞಾನ ಇಲ್ಲದಂತೆ ವರ್ತಿಸುತ್ತಿರುವ ಪಿಂಚಣಿ ಹಣವನ್ನು ಮುಟ್ಟುಗೋಲು ಹಾಕಿಕೊಂಡಿರುವ ಬ್ಯಾಂಕುಗಳ ಮೇಲೆ ಶಿಸ್ತು ಕಾನೂನು ಕ್ರಮ ಜರುಗಿಸದಿದ್ದರೆ ಮುಂದಿನ ವಾರ ಎಲ್ಲಾ ಬ್ಯಾಂಕುಗಳ ಮುಂದೆ ಪಿಂಚಣಿದಾರರಿಂದ ಪ್ರತಿಭಟನೆ ನಡೆಸಲಾಗುವುದೆಂದು ಎಂದರು. ಮನವಿ ಸ್ವೀಕರಿಸಿ ಮಾತನಾಡಿದ ಎಸ್.ಆರ್. ಪಾಟೀಲರು ಇದೊಂದು ಅಘಾತಕಾರಿ ಸುದ್ದಿಯನ್ನು ನಾನು ಕೇಳಿದಂತಾಯಿತು. ಎಂಥದೆ ಪರಿಸ್ಥಿತಿ ಇದ್ದರೂ ಈ ಪಿಂಚಣಿ ಹಣವನ್ನು ಈ ಬ್ಯಾಂಕಿನವರು ಸಾಲದ ಖಾತೆಗೆ ಜಮಾ ಮಾಡಿಕೊಳ್ಳುವಂತಿಲ್ಲ. ಬಡವರ ಸಂಕಷ್ಟಕ್ಕೇ ಅನುಕೂಲವಾಗಲೆಂದೆ ಕಾಂಗ್ರೆಸ್ ಸರಕಾರ ಈ ಯೋಜನೆಗಳನ್ನು ಜಾರಿಗೆ ತಂದಿದೆ. ಈ ಕೂಡಲೇ ಸಂಬಂಧಿಸಿದ ಲೀಡ್ ಬ್ಯಾಂಕ್ ವ್ಯವಸ್ಥಾಪಕರಿಗೆ ನೋಟಿಸ್ ಜಾರಿ ಮಾಡಿ ತುರ್ತುಕ್ರಮ ಜರುಗಿಸುತ್ತೇನೆ ಮತ್ತು ಸರಕಾರಕ್ಕೆ ಈ ಬಗ್ಗೆ ಮಾಹಿತಿ ನೀಡುತ್ತೇನೆ ಎಂದರು.
ಶಾಂತನಗೌಡ ಪಾಟೀಲ, ಮೃತ್ಯುಂಜಯಪ್ಪ ಮರಡೂರು, ಕರೇಗೌಡ ಬಾಗೂರ, ರವಿ ಗುತ್ತಲ, ಹರಿಹರಗೌಡ ಪಾಟೀಲ, ವೀರುಪಾಕ್ಷಗೌಡ ಪಾಟೀಲ, ನಾಗಪ್ಪ ಮಾಳಗೇರ, ಕರಿಯಪ್ಪ ಜೊಗೇರ, ಕರಬಸಪ್ಪ ಕೂಲೇರ, ಶಾಂತವ್ವ ಅಜ್ಜೇರ, ನೀಲವ್ವ ಮಾಳದೇರ, ಗೌರವ್ವ ಕೆಂಚನಾಯ್ಕರ ಮುಂತಾದವರು ಇದ್ದರು.;Resize=(128,128))
;Resize=(128,128))
;Resize=(128,128))