ಸಾರಾಂಶ
ಕನ್ನಡಪ್ರಭ ವಾರ್ತೆ ಭಾರತೀನಗರ
ಜಗತ್ತಿನ ಪ್ರಾಚೀನ ಭಾಷೆಗಳಲ್ಲಿ ಒಂದಾಗಿರುವ ಕನ್ನಡದ ಹಿರಿಮೆ, ಗರಿಮೆ ಬಗ್ಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಸಂಶೋಧಕರು ಸಾಹಿತ್ಯ ವಲಯದಲ್ಲಿ ತಮ್ಮ ಆಯ್ಕೆ ಕ್ಷೇತ್ರದಲ್ಲಿ ಸುದೀರ್ಘ ಅಧ್ಯಯನ ಮೂಲಕ ಯಶಸ್ಸು ಸಾಧಿಸುವಂತೆ ಭಾರತೀ ಎಜುಕೇಷನ್ ಟ್ರಸ್ಟ್‌ನ ಕಾರ್ಯದರ್ಶಿ ಬಿ.ಎಂ.ನಂಜೇಗೌಡ ಸಲಹೆ ನೀಡಿದರು.ಭಾರತೀ ಕಾಲೇಜು(ಸ್ವಾಯತ್ತ) ಸ್ನಾತಕೋತ್ತರ ಮತ್ತು ಸಂಶೋಧನಾ ಕೇಂದ್ರದಲ್ಲಿ ಕನ್ನಡ ವಿಭಾಗ, ಸ್ನಾತಕ, ಸ್ನಾತಕೋತ್ತರ ಮತ್ತು ಸಂಶೋಧನಾ ಕೇಂದ್ರ ಹಾಗೂ ಐಕ್ಯೂಎಸಿ ಸಹಯೋಗದೊಂದಿಗೆ ಎರಡು ದಿನದ ರಾಷ್ಟ್ರಮಟ್ಟದ ಸಂಶೋಧನಾ ಅಂತರ್ಜಾಲ ಸಮ್ಮೇಳನ ಕನ್ನಡ ಸಾಹಿತ್ಯ -ಸಂಸ್ಕೃತಿ ಸಂಶೋಧನೆ ವಿಧಾನ ಮತ್ತು ಹೊಸ ಸಾಧ್ಯತೆಗಳು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಸಂಶೋಧನ ವಿದ್ಯಾರ್ಥಿಗಳಲ್ಲಿ ಸಂಕಲ್ಪ ಮನೋಭಾವ ಇರಬೇಕು. ವರ್ಕ್ ಅಂಡ್ ಹಾರ್ಡ್ ಇದ್ದರೆ ಮುಟ್ಟಲು ಸಾಧ್ಯಎಂದರು.
ಪ್ರಾಧ್ಯಾಪಕ ಹಾಗೂ ಡೀನ್ ಕಲಾನಿಕಾಯ ಮೈಸೂರು ವಿವಿ ಪ್ರೊ.ಎಂ.ಜಿ ಮಂಜುನಾಥ್ ಮಾತನಾಡಿ, ಎರಡು ದಿನದ ವಿಚಾರ ಸಂಕಿರಣ ಆಯೋಜಿಸಿ ವಿಶ್ವವಿದ್ಯಾಲಯವು ಮಾಡುವ ಕೆಲಸವನ್ನು ಭಾರತಿ ಶಿಕ್ಷಣ ಸಂಸ್ಥೆ ಮಾಡುತ್ತಿದೆ. ಇದನ್ನು ಎಲ್ಲ ಸಂಶೋಧಕರು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.ನಿರ್ದೇಶಕ ಮತ್ತು ಡೀನ್ ಸ್ನಾತಕೋತ್ತರ ಮತ್ತು ಸಂಶೋಧನಾ ಕೇಂದ್ರದ ಪ್ರೊ.ಎಸ್.ನಾಗರಾಜ್ ಮಾತನಾಡಿ, ಸಂಶೋಧನಾ ವಿದ್ಯಾರ್ಥಿಗಳಿಗೆ ವಿವಿಧ ಆಯಾಯಗಳಲ್ಲಿ ಹೇಗೆ ಅಧ್ಯಯನ ಮಾಡಬೇಕು ಎಂಬುದನ್ನು ಐದು ಗೋಷ್ಠಿಗಳಲ್ಲೂ ಮಹಾನ್ ವಿದ್ವಾಂಸರು ವಿವರಿಸಲಿದ್ದಾರೆ ಎಂದರು.
ಇದೇ ವೇಳೆ ವಿದ್ವಾಂಸರಾದ ಪ್ರೊ.ಎಂ.ಜಿ.ಮಂಜುನಾಥ ಸಂಶೋಧನೆಯ ಸ್ವರೂಪ, ಪ್ರೊ.ರಹಮತ್ ತರೀಕೆರೆ ಸಂಶೋಧನೆಯಲ್ಲಿ ತಾತ್ವಿಕರಣದ ಮಹತ್ವ ಪ್ರೊ. ರಾಧಾಕೃಷ್ಣ ಎನ್. ಬೆಳ್ಳೂರು ಅವರು ಭಾಷೆ ಸಂಶೋಧನೆ ಉದ್ದೇಶ ಮತ್ತು ವಿನ್ಯಾಸ, ಪ್ರೊ. ಟಿ.ಎಸ್ ಸತ್ಯನಾಥ್ ಸಂಶೋಧನೆ ಕ್ರಮ ಮತ್ತು ಮಾಹಿತಿ, ಪ್ರೊ.ಪುರುಷೋತ್ತಮ ಬಿಳಿಮಲೆ ಅವರು ಸಂಶೋಧಕರ ಮುಂದಿನ ಸವಾಲುಗಳು ಕುರಿತು ವಿಷಯ ಮಂಡನೆ ಮಾಡಿದರು.72 ಸಂಶೋಧನಾ ವಿದ್ಯಾರ್ಥಿಗಳು ತಮ್ಮ ತಮ್ಮ ಸಂಶೋಧನಾ ವಿಷಯ ಕುರಿತು ಪ್ರಬಂಧ ಮಂಡಿಸಿದರು. ಸಂಶೋಧಕರ ಪ್ರಬಂಧ ಮಂಡನೆ ಅಧ್ಯಕ್ಷತೆಯನ್ನು ಡಾ.ಆರ್.ಸಿ.ದೇವರಾಜ್, ಡಾ.ರಾಮಕೃಷ್ಣ, ಡಾ.ಎಚ್.ಎಂ. ನಾಗೇಶ ನಿರ್ವಹಿಸಿದರು. ಇದೇ ವೇಳೆ ಕನ್ನಡ ಸಾಹಿತ್ಯ - ಸಂಸ್ಕೃತಿ ಸಂಶೋಧನೆಯ ವಿಧಾನ ಮತ್ತು ಹೊಸ ಸಾಧ್ಯತೆಗಳು (ಸಂಶೋಧನಾ ಲೇಖನಗಳು) ಪುಸ್ತಕವನ್ನು ಪ್ರೊ. ಎಂ.ಜಿ ಮಂಜುನಾಥ ಬಿಡುಗಡೆ ಮಾಡಿದರು.
ಭಾರತೀ ಕಾಲೇಜು ಪ್ರಾಂಶುಪಾಲ ಡಾ.ಎಂ.ಎಸ್.ಮಹದೇವಸ್ವಾಮಿ ಸಂಶೋಧನಾ ವಿದ್ಯಾರ್ಥಿಗಳ ಕುರಿತು ಮಾತನಾಡಿದರು.ಮುಖ್ಯಸ್ಥರು ಕನ್ನಡ ವಿಭಾಗ ಪ್ರಧಾನ ಸಂಚಾಲಕ ಸಂಘಟನಾ ಕಾರ್ಯದರ್ಶಿ ಡಾ.ಎಚ್.ಎಂ.ನಾಗೇಶ, ಡಾ. ಸಿ.ಮರಯ್ಯ, ತಾಂತ್ರಿಕ ಸಮಿತಿಯ ಮುಖ್ಯಸ್ಥರಾದ ಡಾ.ಗಣೇಶ್, ಕೆ.ಟಿ.ಡಾ.ತೇಜೇಶ್, ಎಂ.ಪಿ.ಕುಮಾರ್, ಎಂ.ಶ್ರೀಕಾಂತ್, ಡಾ.ಎ.ಸಿ.ನೂತನ್, ಕೃಷ್ಣ, ಸಂಚಾಲರಾದ ಎಂ.ಮಮತ, ಡಾ.ಜಿ.ಎ೦.ಲಕ್ಷ್ಮಿ, ಡಿ.ಎಲ್.ಸರಿತಾ, ಬಿ.ಡಿ.ಮಹೇಶ್, ವಿದ್ಯಾರ್ಥಿಗಳು ಅಧ್ಯಾಪಕರು ಮತ್ತು ಅಧ್ಯಾಪಕ ಕೇತರು ಹಾಜರಿದ್ದರು.