ಒಬ್ಬ ಗೃಹಿಣಿಯಾಗಿ ಮನೆಯ ಎಲ್ಲ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಿದ್ದಲ್ಲದೇ ಸಮಾಜಕ್ಕೂ ಮಾದರಿಯಾಗಬಲ್ಲ ಕೆಲಸ ಮಾಡಿದ ಕೀರ್ತಿ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಅವರಿಗೆ ಸಲ್ಲುತ್ತದೆ ಎಂದು ತಾಲೂಕು ಗ್ಯಾರಂಟಿ ಸಮಿತಿಯ ಅಧ್ಯಕ್ಷ ಮಾರುತಿ ಪ್ರಸಾದ್ ರೆಡ್ಡಿ ತಿಳಿಸಿದರು.
ಸಿರುಗುಪ್ಪ: ಒಬ್ಬ ಗೃಹಿಣಿಯಾಗಿ ಮನೆಯ ಎಲ್ಲ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಿದ್ದಲ್ಲದೇ ಸಮಾಜಕ್ಕೂ ಮಾದರಿಯಾಗಬಲ್ಲ ಕೆಲಸ ಮಾಡಿದ ಕೀರ್ತಿ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಅವರಿಗೆ ಸಲ್ಲುತ್ತದೆ ಎಂದು ತಾಲೂಕು ಗ್ಯಾರಂಟಿ ಸಮಿತಿಯ ಅಧ್ಯಕ್ಷ ಮಾರುತಿ ಪ್ರಸಾದ್ ರೆಡ್ಡಿ ತಿಳಿಸಿದರು.
ನಗರದ ಸಿಡಿಪಿಒ ಕಚೇರಿ ಸಭಾಂಗಣದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ನಗರಸಭೆ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಆಶ್ರಯದಲ್ಲಿ ನಡೆದ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿಯಲ್ಲಿ ಮಾತನಾಡಿದರು.ಶಿವಶರಣೆ ಮಲ್ಲಮ್ಮ ಅವರ ಸುತ್ತ ಸಾಕಷ್ಟು ಪವಾಡಗಳಿದ್ದರೂ ಅವರು ನಡೆದುಕೊಂಡ ಜೀವನ ಸಾಮಾನ್ಯವೇ ಆಗಿದೆ. ಸಮಾಜದ ಏಳ್ಗೆಗೆ ನಿರಂತರ ಶ್ರಮಿಸಿದ್ದ ಅವರ ವಿಚಾರಗಳು ಭವಿಷ್ಯದ ಪೀಳಿಗೆಗೆ ಸಿಗುವ ಅಗತ್ಯವಿದೆ ಎಂದರು.
ತಾವು ಸಾರಿದ ಮೌಲ್ಯ ಮತ್ತು ತತ್ವಗಳಿಗೆ ಬದ್ಧವಾಗಿ ನಡೆದುಕೊಂಡ ಹೇಮರೆಡ್ಡಿ ಮಲ್ಲಮ್ಮನವರು ಪ್ರಸಕ್ತ ಸಮಾಜದ ಎಲ್ಲ ಮಹಿಳೆಯರಿಗೂ ಆದರ್ಶಪ್ರಾಯರು. ಸಂಸಾರದ ಎಲ್ಲ ನೋವು-ನಲಿವುಗಳನ್ನು ಅನುಭವಿಸಿದ ಇವರು ಭಿನ್ನವಾಗಿ ನಿಲ್ಲಲು ಇವರೊಳಗಿನ ಆಧ್ಯಾತ್ಮಿಕ ಶಕ್ತಿಯೇ ಕಾರಣ ಎಂದು ತಿಳಿಸಿದರು.ಇತಿಹಾಸದಲ್ಲಿ ಸ್ಥಾನ ಸಿಗದಿದ್ದರೂ ಜಾನಪದದಲ್ಲಿ ಅವರನ್ನು ಗುರುತಿಸುವ ಕೆಲಸವಾಗಿದೆ. ಜಾನಪದ ಸಾಹಿತ್ಯ, ಕಲೆಗಳ ಮೂಲಕ ಇನ್ನೂ ಜೀವಂತವಾಗಿರಲು ಅವರ ವ್ಯಕ್ತಿತ್ವದಲ್ಲಿನ ಗಟ್ಟಿತನವೇ ಕಾರಣ. ಒಂದುವೇಳೆ, ಇಂದಿನ ಮಹಿಳೆಯರು ಆಧ್ಯಾತ್ಮಿಕ ನೆಲೆಯಲ್ಲಿ ಆತ್ಮವಿಶ್ವಾಸದಿಂದ ಮುನ್ನಡೆದರೆ ಖಂಡಿತ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ಕೆ ಮಲ್ಲಿಕಾರ್ಜುನ ಮಾತನಾಡಿದರು. ಮುಖಂಡರಾದ ಮಂಜುನಾಥಗೌಡ,ಪ್ರಭಾಕರ ರೆಡ್ಡಿ, ರುದ್ರಗೌಡ, ಕೊಡ್ಲಿ ಮಲ್ಲಿಕಾರ್ಜುನ, ಸತ್ಯನಾರಾಯಣ, ಶಿಕ್ಷಕ ರಂಗಾರೆಡ್ಡಿ, ಗಾಳಿ ಸುಂಕಪ್ಪ ಮತ್ತು ರೆಡ್ಡಿ, ಲಿಂಗಾಯತ ಸಮಾಜದವರು ಇದ್ದರು.ಹೇಮರೆಡ್ಡಿ ಮಲ್ಲಮ್ಮ ತಾಳ್ಮೆ, ಧೈರ್ಯ, ಸೇವಾ ಮನೋಭಾವದ ಪ್ರತಿರೂಪಕಂಪ್ಲಿ: ಪಟ್ಟಣದ ತಹಸೀಲ್ದಾರ್ ಸಭಾಂಗಣದಲ್ಲಿ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಅವರ ಜಯಂತ್ಯುತ್ಸವವನ್ನು ಭಾನುವಾರ ಭಕ್ತಿಭಾವ ಹಾಗೂ ಗೌರವಪೂರ್ವಕವಾಗಿ ಆಚರಿಸಲಾಯಿತು.ಪುರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಟಿ.ವಿ. ಸುದರ್ಶನರೆಡ್ಡಿ ಮಾತನಾಡಿ, ಶಿವಶರಣೆ ಹೇಮರೆಡ್ಡಿ ಮಲ್ಲಮ್ಮನವರು ತಾಳ್ಮೆ, ಧೈರ್ಯ ಮತ್ತು ಸೇವಾ ಮನೋಭಾವದ ಪ್ರತಿರೂಪವಾಗಿದ್ದರು. ಅವರ ಜೀವನ ಚರಿತ್ರೆ ಇಂದಿನ ಮಹಿಳೆಯರಿಗೆ ಆದರ್ಶಪ್ರಾಯವಾಗಿದೆ. ಬದುಕಿನಲ್ಲಿ ಎದುರಾಗುವ ಸಂಕಷ್ಟಗಳು ಮತ್ತು ಸವಾಲುಗಳಿಗೆ ಹೆದರದೇ ಆತ್ಮವಿಶ್ವಾಸದಿಂದ ಮುನ್ನಡೆಯಬೇಕೆಂಬ ಸಂದೇಶ ನೀಡುತ್ತದೆ. ಸಮಾಜದಲ್ಲಿ ಮಹಿಳೆಯರು ಆತ್ಮಸ್ಥೈರ್ಯದಿಂದ ಬದುಕಲು ಹೇಮರೆಡ್ಡಿ ಮಲ್ಲಮ್ಮನವರ ಬದುಕು ದಾರಿದೀಪವಾಗಿದೆ ಎಂದರು.ಹೇಮ ವೇಮ ರೆಡ್ಡಿ ಜನ ಸಂಘದ ಪದಾಧಿಕಾರಿಗಳಾದ ಆನಂದರೆಡ್ಡಿ ಹಾಗೂ ಎಚ್. ಗಂಗಾಧರ ಮಾತನಾಡಿ, ಪಟ್ಟಣದ ಪ್ರಮುಖ ರಸ್ತೆ ಹಾಗೂ ವೃತ್ತಗಳಿಗೆ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮನವರ ಹೆಸರಿಡುವ ಮೂಲಕ ಅವರ ಸ್ಮರಣೆಯನ್ನು ಶಾಶ್ವತಗೊಳಿಸಬೇಕು. ಜೊತೆಗೆ, ರೆಡ್ಡಿಜನ ಸಂಘದ ಚಟುವಟಿಕೆಗೆ ಅನುಕೂಲವಾಗುವಂತೆ ಶಾಶ್ವತ ಕಟ್ಟಡ ನಿರ್ಮಾಣಕ್ಕಾಗಿ ಸರ್ಕಾರ ನಿವೇಶನ ಒದಗಿಸಬೇಕು ಎಂದು ಮನವಿ ಮಾಡಿದರು.ಕಾರ್ಯಕ್ರಮದಲ್ಲಿ ಶಿರಸ್ತೆದಾರ್ ಜಿ. ಪಂಪಾಪತಿ ಭಾಗವಹಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಹೇಮ ವೇಮ ರೆಡ್ಡಿ ಜನ ಸಂಘದ ತಾಲೂಕು ಪದಾಧಿಕಾರಿಗಳಾದ ರಾಜಶೇಖರರೆಡ್ಡಿ, ಡಾ. ಕೆ. ಶ್ರೀನಿವಾಸರೆಡ್ಡಿ, ಪವನಕುಮಾರ್‌ರೆಡ್ಡಿ, ಕಾಮರೆಡ್ಡಿ ಲಕ್ಷ್ಮಣರೆಡ್ಡಿ, ಡಿ. ಜಡೇಶರೆಡ್ಡಿ, ಟಿ. ಸುರೇಶರೆಡ್ಡಿ, ವೆಂಕಟರೆಡ್ಡಿ, ರಮೇಶರೆಡ್ಡಿ, ಮಾಧವರೆಡ್ಡಿ, ಸಂದೀಪ್‌ರೆಡ್ಡಿ, ಹರೀಶ್‌ರೆಡ್ಡಿ, ತಿಪ್ಪಾರೆಡ್ಡಿ, ಎನ್. ಜಗದೀಶ್ ಮೆಟ್ರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಇನ್ನೊಂದೆಡೆ, ಪಟ್ಟಣದ ವೀರಶೈವ ಸಂಘದ ಆವರಣದಲ್ಲಿಯೂ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮನವರ ಜಯಂತಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಪ್ರಮುಖರಾದ ಹೊಸಕೋಟೆ ಜಗದೀಶ್, ಎಸ್.ಡಿ. ಬಸವರಾಜ, ಶಿವಪುತ್ರಪ್ಪ ಹೊನ್ನಳ್ಳಿ, ಕೆ.ಎಂ. ವಾಗೀಶ್, ಮಂಜುನಾಥರೆಡ್ಡಿ, ಹೊನ್ನಳ್ಳಿ ಗಂಗಾಧರ ಸೇರಿದಂತೆ ಹಲವರು ಭಾಗವಹಿಸಿ ಮಲ್ಲಮ್ಮನವರ ತತ್ವಾದರ್ಶಗಳನ್ನು ಸ್ಮರಿಸಿದರು.