ಜಿನ ಧರ್ಮಸಭೆಯ ಪ್ರಭಾವನೆಯಲ್ಲಿ ಎಲ್ಲರೂ ಅನುಶಾಸನ ಪಾಲನೆ ಮಾಡಿದರೆ ಮಾತ್ರ ಜೀವನದಲ್ಲಿ ಯಶಸ್ಸು ಸಿಗುತ್ತದೆ ಎಂದು ಚರ್ಯಾಶಿರೋಮಣಿ ಮುನಿಶ್ರೀ 108 ವಿದಿತಸಾಗರ ಮಹಾರಾಜರು ಹೇಳಿದರು.

ಹಾವೇರಿ:ಜಿನ ಧರ್ಮಸಭೆಯ ಪ್ರಭಾವನೆಯಲ್ಲಿ ಎಲ್ಲರೂ ಅನುಶಾಸನ ಪಾಲನೆ ಮಾಡಿದರೆ ಮಾತ್ರ ಜೀವನದಲ್ಲಿ ಯಶಸ್ಸು ಸಿಗುತ್ತದೆ ಎಂದು ಚರ್ಯಾಶಿರೋಮಣಿ ಮುನಿಶ್ರೀ 108 ವಿದಿತಸಾಗರ ಮಹಾರಾಜರು ಹೇಳಿದರು.ನಗರದ ರಜನಿ ಸಭಾಂಗಣದಲ್ಲಿ ಶುಕ್ರವಾರ ಸಂಜೆ ನಡೆದ ಬೃಹತ್ ಸಿದ್ಧಚಕ್ರ ಮಹಾಮಂಡಲ ವಿಧಾನ ಮಹೋತ್ಸವದ ಮೊದಲ ದಿನದ ಜಿನ ಧರ್ಮಸಭೆಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.ಜೀನ ಧರ್ಮದ ಪ್ರಭಾವನೆಯಲ್ಲಿ ಶ್ರಾವಕ, ಶ್ರಾವಕಿಯರೆಲ್ಲರಿಗೂ ಭಕ್ತಿ ಮತ್ತು ಶ್ರದ್ಧೆ ಇದೆ. ಮಹಾರಾಜರು ಇಲ್ಲಿ ನಿಮಿತ್ತ ಮಾತ್ರ ಇದ್ದು, ತಾವೆಲ್ಲರು ಬಹಳ ಅಚ್ಚುಕಟ್ಟಾಗಿ ಅನುಶಾಸನ ಮಾಡುತ್ತಿದ್ದೀರಿ. ಇದರ ಜತೆಗೆ ಧರ್ಮದ ಪಾಲನೆ ಮತ್ತು ಸಮಯದ ಪಾಲನೆ ಮಾಡಬೇಕು ಎಂದರು. ಧರ್ಮಸಭೆಯನ್ನು ಉದ್ಘಾಟಿಸಿದ ದಿಗಂಬರ ಜೈನ ಸಮಾಜದ ಜಿಲ್ಲಾಧ್ಯಕ್ಷ ಮಂಜುನಾಥ ತಡಸದ ಮಾತನಾಡಿ, ಮುನಿಶ್ರೀ 108 ವಿದಿತಸಾಗರ ಮಹಾರಾಜರ ಸಾನ್ನಿಧ್ಯದಲ್ಲಿ ಸಿದ್ಧಚಕ್ರ ಆರಾಧನಾ ಮಹೋತ್ಸವ ನಡೆಯುತ್ತಿರುವುದು ಹಾವೇರಿ ಜನರ ಸೌಭಾಗ್ಯ. ಮಹಾರಾಜರು ಲೋಪದಲ್ಲಿ ಹೊಂದಾಣಿಕೆಯಾಗುವ ಮಾತೆ ಇಲ್ಲ. ನೇರ, ನಿಷ್ಠುರವಾಗಿ ನಡೆದುಕೊಳ್ಳುವ ಸರಳ, ಸಜ್ಜನಿಕೆಯವರಾಗಿದ್ದಾರೆ. ಮುಂಬರುವ ಜೀವನದಲ್ಲಿ ಇಂತಹ ಮಹಾರಾಜರು ಸಿಗುವುದು ಕಷ್ಟ. ಶ್ರಾವಕರು ತಿಳಿಯದೇ ಮಾಡಿದ ತಪ್ಪನ್ನು ಮನ್ನಿಸಿ ನಮ್ಮ ಗ್ರಾಮಕ್ಕೂ ಬಂದು ಹರಸಿ ಹಾರೈಸಬೇಕು ಎಂದು ಕೋರಿದರು.ಉದ್ಯಮಿ ರಾಹುಲ್ ನಾಯಕ್ ಮಾತನಾಡಿ, ಮಹಾರಾಜರ ಸಾನ್ನಿಧ್ಯ ಸಿಕ್ಕಿರುವುದು ಹಾವೇರಿ ಜನರ ಪುಣ್ಯ. ಈ ಮೊದಲು ಹಾಸನದಲ್ಲಿ ಇದ್ದರು, ಅಲ್ಲಿಂದ ತೆರದಾಳಕ್ಕೆ ಕರೆತರಲು ಪ್ರಯತ್ನ ಮಾಡಿದ್ದೆವು. ಆದರೆ ಸಫಲತೆ ಕಾಣಲಿಲ್ಲ. ಮರಳಿ ಹಾವೇರಿಗೆ ಬಂದು ಚಾತುರ್ಮಾಸ ಕಾರ್ಯಕ್ರಮ, ಜಿನ ಧರ್ಮ ಸಂಸ್ಕಾರ ಶಿಬಿರ, ಸಿದ್ಧಚಕ್ರ ಆರಾಧನಾ ಮಹೋತ್ಸವ, ಪಿಂಛಿ ಕಾರ್ಯಕ್ರಮ ಹೀಗೆ ನಡೆಸಿಕೊಂಡು ಹೋಗುತ್ತಿರುವುದು ವಿಶೇಷವಾಗಿದೆ. ಬೆಳಗಾವಿಯಲ್ಲಿ ಸಾವಿರಾರು ಮನೆಗಳು ಮಾಡದ ಕೆಲಸವನ್ನು, ಹಾವೇರಿಯಲ್ಲಿ 104 ಮನೆಗಳು ಮಾಡುತ್ತಿರುವುದು ಶ್ಲಾಘನೀಯ. ಜಿನ ಧರ್ಮ ಉತ್ತುಂಗಕ್ಕೇರಬೇಕೆಂದು ತಿಳಿಸಿದರು.ಇದೇ ವೇಳೆ ಸಚಿವ ಡಿ.ಸುಧಾಕರ ಅವರ ಆಪ್ತಕಾರ್ಯದರ್ಶಿ ನಮಿತ್ ಪಿ.ಜೈನ್ ಅವರು ಸಚಿವರೊಂದಿಗೆ ಚರ್ಚಿಸಿ ಸಿದ್ಧಚಕ್ರ ಆರಾಧನಾ ಮಹೋತ್ಸವ ಯಶಸ್ಸಿಗೆ 2ಲಕ್ಷ ರು. ಕೊಡಿಸುವುದಾಗಿ ವಾಗ್ದಾನ ಮಾಡಿದರು.ಸಿದ್ದಚಕ್ರ ಆರಾಧನಾ ಮಹೋತ್ಸವ ಸಮಿತಿ ಅಧ್ಯಕ್ಷ ಸುಭಾಷ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಎಂ.ಡಿ. ಜಿನದತ್ತ ಜೈನ್, ಚಂದ್ರನಾಥ ಕಳಸೂರ, ನಾಗರಾಜ ಬಬ್ಬಿಗೆಸಾಗರ, ಮಿಥುನ್ ಚಳ್ಳಕೇರಿ, ಮಾಣಿಕಚಂದ ಲಾಡರ, ಪದ್ಮನಾಥ ಕಳಸೂರ, ಮಂಜುನಾಥ ಲಂಗೂಟಿ, ಬಿ.ಜೆ. ವೀರೇಂದ್ರಕುಮಾರ, ನವೀನ ಜಗಶೆಟ್ಟಿ, ಮಂಜುನಾಥಜೈನ್ ಹೊಂಬರಡಿ, ಸಂಜೀವ ಇಂಡಿ, ಬ್ರಹ್ಮಕುಮಾರ ವರಸೂರ ಸೇರಿ ಪ್ರತಿಮಾಧಾರಿಗಳು, ಬ್ರಹ್ಮಚಾರಿಗಳು ಎಲ್ಲಾ ಶ್ರಾವಕ, ಶ್ರಾವಕಿಯರು ಪಾಲ್ಗೊಂಡಿದ್ದರು. ಕಾರ್ಯದರ್ಶಿ ಎಸ್.ಎ ವಜ್ರಕುಮಾರ ಸ್ವಾಗತಿಸಿದರು.