ಸಾರಾಂಶ
ಕನ್ನಡಪ್ರಭ ವಾರ್ತೆ ಇಂಡಿ
ವಿದ್ಯಾರ್ಥಿಗಳು ಸ್ಪರ್ಧಾ ಮನೋಭಾವ ಬೆಳೆಸಿಕೊಳ್ಳಬೇಕು. ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ ಹಾಗೂ ಯಶವಂತರಾಯಗೌಡ ಪಾಟೀಲ ಫೌಂಡೇಷನ್ ಏರ್ಪಡಿಸಿದ ಸ್ಪರ್ಧಾತ್ಮಕ ಪರೀಕ್ಷೆ ಕಾರ್ಯಾಗಾರದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳು ಈ ಕಾರ್ಯಗಾರವನ್ನು ಸ್ಪೂರ್ತಿಯಾಗಿ ಇಟ್ಟುಕೊಂಡು ಪರೀಕ್ಷೆ ಎದುರಿಸಬೇಕು ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.ಪಟ್ಟಣದ ಗುರುಭವನದಲ್ಲಿ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ ಇಂಡಿ ಘಟಕ ಹಾಗೂ ಯಶವಂತರಾಯಗೌಡ ಪಾಟೀಲ ಫೌಂಡೇಷನ್ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಸ್ಪರ್ಧಾತ್ಮಕ ಪರೀಕ್ಷೆ ಮತ್ತು ಒಂದು ದಿನದ ಉಚಿತ ಕಾರ್ಯಾಗಾರದ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪರೀಕ್ಷೆ ಕಾರ್ಯಾಗಾರದಲ್ಲಿ ಪಾಲ್ಗೊಂಡು ರ್‍ಯಾಂಕ್ ಪಡೆದ ವಿದ್ಯಾರ್ಥಿಗಳನ್ನು ಸ್ಪೂರ್ತಿಯಾಗಿ ಇಟ್ಟುಕೊಂಡು ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಹೇಳಿದರು.ಇನ್ನೊಬ್ಬರಿಗೆ ಪ್ರೇರಣೆಯಾಗಲು ಜೀವನದಲ್ಲಿ ಯಶಸ್ಸು ಪಡೆಯಲು ಶ್ರದ್ಧೆ, ಕಠಿಣ ಪರಿಶ್ರಮ, ಸಾಧಿಸುವ ಛಲ ಅಗತ್ಯ. ಇವುಗಳನ್ನು ಜೀವನದಲ್ಲಿ ರೂಢಿಸಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು. ಪ್ರತಿದಿನದ ಸಣ್ಣ ಸಣ್ಣ ಪ್ರಯತ್ನಗಳ ಪ್ರತಿಫಲಗಳಿಂದ ಬದುಕಿನಲ್ಲಿ ಯಶಸ್ಸು ದೊರೆಯುತ್ತದೆ. ಯಶಸ್ಸಿನೆಡೆಗೆ ಪ್ರಯತ್ನವನ್ನು ನಿಲ್ಲಿಸಬೇಡಿ. ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಯಾದರೂ ಸಮರ್ಥವಾಗಿ ಎದುರಿಸಲು ಹಾಗೂ ಯಶಸ್ಸು ಸಾಧಿಸಲು ಪ್ರಮುಖ ಮೂರು ಸೂತ್ರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ ಎಂದು ಕಿವಿಮಾತು ಹೇಳಿದರು.ಉಪವಿಗಾಭಾಧಿಕಾರಿ ಅನುರಾಧಾ ವಸ್ತ್ರದ ಮಾತನಾಡಿ, ಯಾವುದೇ ಕೆಲಸವಿದ್ದರೂ ಮಾಡುವ ಆಸಕ್ತಿ ಇದ್ದರೆ ಗುರಿ ಮುಟ್ಟಲು ಸಾಧ್ಯ. ಇಚ್ಛಾಶಕ್ತಿಯಿಂದ ಕೆಲಸ ಮಾಡಿದರೆ ಗುರಿ ತಲುಪಲು ಸಾಧ್ಯವಾಗುತ್ತದೆ. ಅವಕಾಶಗಳು ಬಂದಾಗ ಎದುರಿಸುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.ಕ್ಷೇತ್ರ ಸಮನ್ವಯಾಧಿಕಾರಿ ಎಸ್.ಆರ್.ನಡಗಡ್ಡಿ ಪ್ರಾಸ್ತಾವಿಕವಾಗಿ, ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ ತಾಲೂಕು ಅಧ್ಯಕ್ಷ ಸುನೀಲಕುಮಾರ ಅತನೂರ ಮಾತನಾಡಿದರು. ಎನ್‌ಎಸ್‌ಯುಐ ರಾಜ್ಯಾಧ್ಯಕ್ಷ ಕೀರ್ತಿ ಗಣೇಶ, ಸದ್ದಾಂ ಕುಂಟೋಜಿ, ನೀಲಕಂಠಗೌಡ ಪಾಟೀಲ, ಶಿವಯೋಗೆಪ್ಪ ಚನಗೊಂಡ, ಶರಣಯ್ಯ ಬಂಡಾರಿಮಠ, ಇಲಿಯಾಸ ಬೊರಾಮಣಿ, ಲಿಂಬಾಜಿ ರಾಠೋಡ, ಪ್ರಕಾಶ ಪ್ಯಾಟಿ, ಜಾವೀದ ಮೋಮಿನ, ಮಲ್ಲು ಅತನೂರ, ಪಂಡಿತ ಇಮ್ಮನದವರ, ಅವಿನಾಶ ಬಗಲಿ, ನಿರ್ಮಲಾ ತಳಕೇರಿ, ಸತೀಶ ಹತ್ತಿ, ರಾಜುಗೌಡ ರೋಡಗಿ, ಶಿವಮೂರ್ತಿ ಯಳಮೇಲಿ, ಯಲ್ಲಪ್ಪ ಬಂಡೆವರ, ಮೆಂಡೆಗಾರ, ಮಹೇಶ ಬೇನೂರ, ಪ್ರಶಾಂತ ಅಲಗೊಂಡ, ಸುರೇಶ ಹತ್ತರಕಿ, ಗಂಗಾಧರ ಅವಟಿ, ರಾಹುಲ್ ಮಡ್ಡಿಮನಿ, ಪ್ರಕಾಶ ರವಳಿ, ಸಚೀನ ಹೊಸಮನಿ, ಸಂತೋಷ ರವಳಿ, ಅಕ್ಬರ್ ಕಾಣಿ, ಈಶ್ವರ ಸಜ್ಜನ, ರಮೇಶ ಮಾವಿನಹಳ್ಳಿ, ಸುದೀಪ ಕಿತ್ತಲಿ, ಅಬ್ರರ ಮಕಂದಾರ, ರಾಹುಲ ಸುಲಾಖೆ, ಶರಣಗೌಡ ಡೋಣೂರ, ಆನಂದ ಆಲಮೇಲ, ರಸೀದ ತಾಂಬೋಳಿ, ರಫೀಕ ತಾಂಬೋಳಿ, ಅಭಿಷೇಕ ಏಳಗಿ ಮೊದಲಾದವರು ಪಾಲ್ಗೊಂಡಿದ್ದರು.ಶಿಕ್ಷಕ ಬಸವರಾಜ ಗೊರನಾಳ ನಿರೂಪಿಸಿ, ವಂದಿಸಿದರು. ಪರೀಕ್ಷೆ ಕಾರ್ಯಾಗಾರದಲ್ಲಿ 750 ವಿದ್ಯಾರ್ಥಿಗಳು ಹೆಸರು ನೋಂದಾಯಿಸಿದ್ದು, 636 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ರ್‍ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ಪ್ರಶಸ್ತಿ ಪತ್ರ ನೀಡಲಾಯಿತು.
------ಕೋಟ್‌ಆತ್ಮವಿಶ್ವಾಸ, ಪರೀಕ್ಷೆಗೆ ಅಗತ್ಯವಿರುವ ಪುಸ್ತಕಗಳನ್ನು ಸಂಗ್ರಹಿಸಿ ಶ್ರದ್ಧೆಯಿಂದ ಅಧ್ಯಯನ ಮತ್ತು ನಿಗದಿತ ಕಾಲಾವಧಿಯಲ್ಲಿ ಎಲ್ಲ ಪ್ರಶ್ನೆಗಳಿಗೆ ಉತ್ತರಿಸುವ ಕೌಶಲ್ಯ ಗಳಿಸಿಕೊಳ್ಳುವುದು ಯಶಸ್ಸಿಗೆ ಪ್ರಮುಖ ಮೂರು ಸೂತ್ರಗಳು. ನಿರಂತರ ಪ್ರಯತ್ನ, ಛಲದಿಂದ ಪರೀಕ್ಷೆ ಎದುರಿಸಬೇಕು. ಶಿಸ್ತು, ಆಸಕ್ತಿ, ಸೂಕ್ತ ಮಾರ್ಗದರ್ಶನ, ತಯಾರಿಯಿಂದ ಪರೀಕ್ಷೆ ಯಶಸ್ಸು ಗಳಿಸಬಹುದು. ಸಂವಿಧಾನದ ಸೂಕ್ಷ್ಮ ಪರಿಚಯ ಮಾಡಿಕೊಳ್ಳಬೇಕು. ಬಡ ಪ್ರತಿಭಾವಂತ ವಿದ್ಯಾರ್ಥಿಗಳ ಕಷ್ಟ ಏನೆಂಬುದನ್ನು ನಾನು ನೋಡಿದ್ದೇನೆ. ಶ್ರೀ ಯಶವಂತರಾಯಗೌಡ ಪಾಟೀಲ ಫೌಂಡೇಶನ್, ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ ಜಿಲ್ಲೆಯ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವ ಕುರಿತು ಕಾರ್ಯಾಗಾರ ಹಮ್ಮಿಕೊಂಡಿದ್ದು ಶ್ಲಾಘನೀಯ.ಮೇಜರ್ ಸಿದ್ದಲಿಂಗಯ್ಯ ಹಿರೇಮಠ, ಧಾರವಾಡದ ಡಿಮ್ಹಾನ್ಸ್ ಮುಖ್ಯ ಆಡಳಿತಾಧಿಕಾರ