ಜೀವನದಲ್ಲಿ ನಿರ್ದಿಷ್ಟ ಗುರಿ ಹೊಂದಿದ್ದರೆ ಮಾತ್ರ ಯಶಸ್ಸು: ಅಂಜಿನಪ್ಪ

| Published : Jan 31 2024, 02:16 AM IST

ಜೀವನದಲ್ಲಿ ನಿರ್ದಿಷ್ಟ ಗುರಿ ಹೊಂದಿದ್ದರೆ ಮಾತ್ರ ಯಶಸ್ಸು: ಅಂಜಿನಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಮನುಷ್ಯನಿಗೆ ಆತ್ಮವಿಶ್ವಾಸ ಬಹಳ ಮುಖ್ಯ. ಎಂತಹ ಕಠಿಣ ಕೆಲಸವಾದರೂ ಮಾಡಬಲ್ಲೆ ಎಂಬ ನಂಬಿಕೆ ಬರಬೇಕು. ಈ ನಿಟ್ಟಿನಲ್ಲಿ ಸಾಗಿದರೆ ಮಾತ್ರ ಗುರಿ ತಲುಪಬಹುದು.

ಹರಪನಹಳ್ಳಿ: ಜೀವನದಲ್ಲಿ ಗುರಿ ಹೊಂದಿದ್ದರೆ ಮಾತ್ರ ಬದುಕಿನಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದು ಹರಪನಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವಿ. ಅಂಜಿನಪ್ಪ ತಿಳಿಸಿದರು.

ಪಟ್ಟಣದ ಹೇಮರಡ್ಡಿ ಮಲ್ಲಮ್ಮ ಐಟಿಐ ಕಾಲೇಜು ಆವರಣದಲ್ಲಿ ನಿಸರ್ಗ ಪದವಿಪೂರ್ವ ಕಾಲೇಜು, ಎನ್‌ಎಸ್‌ಎಸ್ ಘಟಕ ಹಾಗೂ ಬುದ್ಧ ಬಸವ ಅಂಬೇಡ್ಕರ್ ವಿಶ್ವ ಕಲ್ಯಾಣ ಸಂಸ್ಥೆಯ ಆಶ್ರಯದಲ್ಲಿ ನಡೆದ 2023- 24ನೇ ಸಾಲಿನ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಮನುಷ್ಯನಿಗೆ ಆತ್ಮವಿಶ್ವಾಸ ಬಹಳ ಮುಖ್ಯ. ಎಂತಹ ಕಠಿಣ ಕೆಲಸವಾದರೂ ಮಾಡಬಲ್ಲೆ ಎಂಬ ನಂಬಿಕೆ ಬರಬೇಕು. ಈ ನಿಟ್ಟಿನಲ್ಲಿ ಸಾಗಿದರೆ ಮಾತ್ರ ಗುರಿ ತಲುಪಬಹುದು ಎಂದರು.

ನೀಲಗುಂದ ಗುಡ್ಡದ ವಿರಕ್ತಮಠದ ಚನ್ನಬಸವ ಶಿವಯೋಗಿ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಸತತ ಪರಿಶ್ರಮದಿಂದ ಮುಂದೆ ಬರಬೇಕು ಎಂದರು.

ಶ್ರೀ ಶರಣ ಬಸವ ಬುದ್ಧ ಭೀಮಜೀ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಗುಂಡಗತ್ತಿ ಕೊಟ್ರಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಶಿಸ್ತು ಮುಖ್ಯ. ಜತೆಗೆ ಹೆಚ್ಚು ಜ್ಞಾನ ಸಂಪಾದಿಸುವ ಕಾರ್ಯದಲ್ಲಿ ತೊಡಗಿಸಿಕೊಡರೆ ಉತ್ತಮ ಪ್ರಜೆಯಾಗಿ ಹೊರಹೊಮ್ಮಬಹುದು ಎಂದರು.

ಹರಪನಹಳ್ಳಿ ಸಾರಿಗೆ ಡಿಪೋ ವ್ಯವಸ್ಥಾಪಕಿ ಎಂ. ಮಂಜುಳಾ, ಸಾಹಿತಿ ಡಿ. ರಾಮನಮಲಿ, ಪುರಸಭೆ ಸದಸ್ಯ ಡಿ. ಅಬ್ದುಲ್ ರಹಿಮಾನ್ ಸಾಹೇಬ್ ಮಾತನಾಡಿದರು.

ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ಕೆ.ಆರ್. ಸುದೀಪ್ ಹಾಗೂ ಪೊಲೀಸ್ ಇಲಾಖೆಯ ಅಪರಾಧ ತನಿಖಾಧಿಕಾರಿ ಡಾ. ಕೆ. ಯರಿಸ್ವಾಮಿ ಮತ್ತು ಹೈನುಗಾರಿಕೆಯಲ್ಲಿ ಸಾಧನೆ ಮಾಡಿದ ರಾಜು ಎಲಿಗಾರ್‌ ಅವರನ್ನು ಸನ್ಮಾನಿಸಲಾಯಿತು.

ಪುರಸಭೆ ಸದಸ್ಯರಾದ ಟಿ. ವೆಂಕಟೇಶ, ಗೊಂಗಡಿ ನಾಗರಾಜ, ಲಾಟಿ ದಾದಪೀರ್, ಚಿಕ್ಕೇರಿ ಬಸಪ್ಪ, ಸಾಹಿತಿ ಇಸ್ಮಾಯಿಲ್ ಎಲಿಗಾರ್, ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿ ಕೊಟ್ರಪ್ಪ, ಪ್ರಾಚಾರ್ಯ ಆರ್.ಎಚ್. ಕಲ್ಯಾಣ್ ಉಪನ್ಯಾಸಕರಾದ ಶಾಂತಕುಮಾರ್, ಮಂಜುನಾಥ, ಜಿ. ವೆಂಕಟೇಶ, ಎಚ್. ಮೊಹನ್, ಸಾಗರ್, ವಿ. ಸಣ್ಣಅಜ್ಜಯ್ಯ ಸೇರಿದಂತೆ ಇತರರು ಇದ್ದರು.