ಪಿಎಚ್ಎಚ್ ಕಾರ್ಡುಗಳಿಗೆ ಜನರಿಂದ ಹೆಚ್ಚಿದ ಬೇಡಿಕೆ!

| Published : Jan 31 2024, 02:16 AM IST

ಸಾರಾಂಶ

ರಾಮನಗರ: ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆ ಜಾರಿಗೊಳಿಸಿದ ಬಳಿಕ ಪಿಎಚ್ ಎಚ್ (ಪ್ರಿಯಾರಿಟಿ ಹೌಸ್ ಹೋಲ್ಡ್ - ಆದ್ಯತೆಯ ಕುಟುಂಬ) ಕಾರ್ಡ್ ಗಳಿಗೆ ಬೇಡಿಕೆ ಹೆಚ್ಚಾಗಿದೆ.

ರಾಮನಗರ: ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆ ಜಾರಿಗೊಳಿಸಿದ ಬಳಿಕ ಪಿಎಚ್ ಎಚ್ (ಪ್ರಿಯಾರಿಟಿ ಹೌಸ್ ಹೋಲ್ಡ್ - ಆದ್ಯತೆಯ ಕುಟುಂಬ) ಕಾರ್ಡ್ ಗಳಿಗೆ ಬೇಡಿಕೆ ಹೆಚ್ಚಾಗಿದೆ.

ಆಹಾರ ಇಲಾಖೆ, ಗ್ರಾಮ ಒನ್ ಹಾಗೂ ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ಪಿಎಚ್ ಎಚ್ (ಪಿಬಿಎಲ್ ) ಕಾರ್ಡ್ ಮಾಡಿಸಲು ಜನರು ಎಡತಾಕುತ್ತಿದ್ದು, ಸರ್ಕಾರದ ವಿವಿಧ ಯೋಜನೆಗಳ ಬಳಕೆ ಸೇರಿದಂತೆ ಮಾಸಿಕ ಪಡಿತರಕ್ಕಾಗಿ ಬಿಪಿಎಲ್ ಕುಟುಂಬಗಳು, ತೀವ್ರ ಸಮಸ್ಯೆ ಎದುರಿಸುತ್ತಿವೆ.

ತುರ್ತು ಆರೋಗ್ಯ ಸಂಬಂಧ ನೀಡುವ ಪಡಿತರ ಕಾರ್ಡ್‌ಗಳನ್ನು ಹೊರತುಪಡಿಸಿ ಕಾರ್ಡ್ ವಿತರಣೆ ಸ್ಥಗಿತಗೊಳಿಸಲಾಗಿದೆ. ಹೀಗಾಗಿ ಬಿಪಿಎಲ್ ಕಾರ್ಡ್‌ಗೆಂದು ಸಲ್ಲಿಸಿದ ಅರ್ಜಿಗಳ ಸಂಖ್ಯೆ ಜಿಲ್ಲೆಯಲ್ಲಿ ದೊಡ್ಡ ಪ್ರಮಾಣದಲ್ಲಿದೆ.

11673 ಅರ್ಜಿಗಳು ಸಲ್ಲಿಕೆ:

2021-22ನೇ ಸಾಲಿನ ಬಳಿಕ ಈವರೆಗೆ ಜಿಲ್ಲೆಯಲ್ಲಿ ಬಿಪಿಎಲ್ ಕಾರ್ಡ್‌ಗಾಗಿ ಬರೋಬ್ಬರಿ 11,673 ಜನರು ಅರ್ಜಿ ಸಲ್ಲಿಸಿದ್ದಾರೆ. ಇದರಲ್ಲಿ 4983 ಅರ್ಜಿಗಳನ್ನು ಅನುಮೋದಿಸಲಾಗಿದ್ದರೆ, 3325 ಅರ್ಜಿಗಳು ತಿರಸ್ಕೃತಗೊಂಡಿವೆ. 3365 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿಲ್ಲ. ಹೀಗಾಗಿ ಬಾಕಿಯಿರುವ ಅರ್ಜಿಗಳ ಅರ್ಹ ಫಲಾನುಭವಿಗಳು ಕಾರ್ಡ್‌ಗಾಗಿ ಎದುರು ನೋಡುತ್ತಿದ್ದಾರೆ.

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಕೆ.ಎಚ್. ಮುನಿಯಪ್ಪ ಅವರು ಒಂದು ತಿಂಗಳೊಳಗೆ ಹೊಸ ಪಡಿತರ ಚೀಟಿಗಳನ್ನು ವಿತರಣೆ ಮಾಡುವುದಾಗಿ ಭರವಸೆ ನೀಡಿದ್ದರು. ಇದರಿಂದ ಕಾರ್ಡ್‌ಗೆಂದು ಅರ್ಜಿ ಸಲ್ಲಿಸಿದ್ದ ಫಲಾನುಭವಿಗಳು ಸಂತಸಗೊಂಡಿದ್ದರು. ಆದರೆ, ಸರ್ಕಾರ ನಾನಾ ಕಾರಣಗೊಳನ್ನೊಡ್ಡಿ ಪಡಿತರ ಚೀಟಿ ವಿತರಣೆಯನ್ನು ವಿಳಂಬ ಮಾಡುತ್ತಲೇ ಬಂದಿದೆ. ಸರ್ಕಾರ ಯಾವಾಗ ಪಡಿತರ ಚೀಟಿ ವಿತರಿಸುತ್ತದೆ ಎಂಬುದು ಇಲಾಖೆ ಅಧಿಕಾರಿಗಳಿಗೂ ಗೊತ್ತಿಲ್ಲ. ಹೀಗಾಗಿ ಕಾರ್ಡ್ ಕೇಳಿಕೊಂಡು ನಿತ್ಯ ಇಲಾಖೆಗೆ ಬರುವ ಜನರಿಗೆ ಖಚಿತ ಮಾಹಿತಿ ಇಲ್ಲದೆ ತೊಳಲಾಟ ಅನುಭವಿಸುವಂತಾಗಿದೆ.

ಜಿಲ್ಲೆಯಲ್ಲಿ 559 ನ್ಯಾಯಬೆಲೆ ಅಂಗಡಿಗಳಿದ್ದು, ಅಂತ್ಯೋದಯ (ಎಎವೈ) - 18,970, ಆದ್ಯತಾ ಕುಟುಂಬ (ಪಿಎಚ್ ಎಚ್) - 2,75,951 ಹಾಗೂ ಆದ್ಯತೇತರ ಕುಟುಂಬ (ಎನ್ ಪಿಎಚ್ ಎಚ್) - 17,847 ಸೇರಿ ಒಟ್ಟು 3,12,768 ಚೀಟಿಗಳಿವೆ.

ಹೊಸದಾಗಿ ಆದ್ಯತಾ ಕುಟುಂಬ ಚೀಟಿ ಕೋರಿ ಸಲ್ಲಿಕೆಯಾಗಿರುವ 3365 ಅರ್ಜಿಗಳ ಪರಿಶೀಲನೆ ಬಾಕಿ ಇದೆ ಎಂದು ಆಹಾರ ನಾಗರೀಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ಅಧಿಕಾರಿ `ಕನ್ನಡಪ್ರಭ`ಕ್ಕೆ ಪ್ರತಿಕ್ರಿಯೆ ನೀಡಿದರು.ಬಾಕ್ಸ್...............

ಬಿಪಿಎಲ್ ಕಾರ್ಡ್ ದಾರರಿಗೆ ಸಿಗುವ ಸೌಲಭ್ಯಗಳೇನು?

ನಿರ್ದಿಷ್ಟ ಆದಾಯ ಮಿತಿಗಿಂತ ಕೆಳಗಿರುವ ಕುಟುಂಬಗಳಿಗೆ ಸರ್ಕಾರ ನೀಡುವ ಗುರುತಿನ ಚೀಟಿಯೇ ಬಿಪಿಎಲ್. ಬಿಪಿಎಲ್ ಕಾರ್ಡ್ ಹೊಂದಿದ ಕುಟುಂಬ ಪ್ರತಿ ಸದಸ್ಯನಿಗೆ 5 ಕೆಜಿ ಅಕ್ಕಿ ನೀಡಲಾಗುತ್ತದೆ. ಅದರಂತೆ ಕಾರ್ಡ್ ಇರುವ ಕುಟುಂಬ ಎಲ್ಲ ಸದಸ್ಯರಿಗೆ ಅಕ್ಕಿ ಹಾಗೂ ಕೆಜಿಗೆ 34 ರು. ದೊರೆಯುತ್ತದೆ. (ಕುಟುಂಬದ ಒಟ್ಟು ಅಕ್ಕಿಯ ಪ್ರಮಾಣದ ಅರ್ಧದಷ್ಟು ಹಣ ಪಾವತಿಯಾಗುತ್ತದೆ) ಇನ್ನು ಭಾಗ್ಯಲಕ್ಷ್ಮಿ, ಗೃಹಲಕ್ಷ್ಮಿ, ಉಜ್ವಲ ಯೋಜನೆಯಡಿ ಉಚಿತ ಗ್ಯಾಸ್ ಸಂಪರ್ಕ, ಆರೋಗ್ಯ ಕಾರ್ಡ್ (ಆಯುಷ್ಮಾನ್ ಕಾರ್ಡ್ ಬಳಸಿ 5 ಲಕ್ಷದವರೆಗೆ ನಗದು ರಹಿತ ಚಿಕಿತ್ಸೆ ಪಡೆಯಬಹುದು).

ಬಾಕ್ಸ್ .............

ಪಿಎಚ್ಎಚ್ (ಬಿಪಿಎಲ್ )ಪಡಿತರ ಚೀಟಿ ಪಡೆಯಲು ಇರುವ ಮಾನದಂಡಗಳು

1. ವೇತನವನ್ನು ಗಣನೆಗೆ ತೆಗೆದುಕೊಳ್ಳದೇ ಎಲ್ಲ ಕಾಯಂ ನೌಕರರು ಅಂದರೆ ಸರ್ಕಾರದ ಅಥವಾ ಸರ್ಕಾರದಿಂದ ಅನುದಾನವನ್ನು ಪಡೆಯುತ್ತಿರುವ ಸಂಸ್ಥೆಗಳು ಅಥವಾ ಸರ್ಕಾರಿ ಪ್ರಾಯೋಜಿತ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು/ಮಂಡಳಿಗಳು/ನಿಗಮಗಳು/ಸ್ವಾಯತ್ತ ಸಂಸ್ಥೆಗಳು ಇತ್ಯಾದಿ. ಒಳಗೊಂಡಂತೆ ಆದಾಯ ತೆರಿಗೆ/ಸೇವಾ ತೆರಿಗೆ/ವ್ಯಾಟ್ /ವೃತ್ತಿ ತೆರಿಗೆ ಪಾವತಿಸುವ ಎಲ್ಲಾ ಕುಟುಂಬಗಳನ್ನು ಹೊರತು ಪಡಿಸಿ

2. ಗ್ರಾಮೀಣ ಪ್ರದೇಶದಲ್ಲಿ ೩ ಹೆಕ್ಟೇರ್ ಒಣಭೂಮಿ ಅಥವಾ ತತ್ಸಮಾನ ನೀರಾವರಿ ಭೂಮಿ ಹೊಂದಿರುವ ಕುಟುಂಬಗಳು ಅಥವಾ ಗ್ರಾಮೀಣ ಪ್ರದೇಶವನ್ನು ಹೊರತು ಪಡಿಸಿ ನಗರ ಪ್ರದೇಶಗಳಲ್ಲಿ 1 ಸಾವಿರ ಚದರ ಅಡಿಗಿಂತಲೂ ಹೆಚ್ಚಿನ ನಿಸ್ತೀರ್ಣದ ಪಕ್ಕಾ ಮನೆಯನ್ನು ಸ್ವಂತವಾಗಿ ಹೊಂದಿರುವ ಎಲ್ಲಾ ಕುಟುಂಬಗಳನ್ನು ಹೊರತು ಪಡಿಸಿ

3. ಜೀವನೋಪಾಯಕ್ಕಾಗಿ ಸ್ವತಃ ಓಡಿಸುವ ಒಂದು ವಾಣಿಜ್ಯ ವಾಹನವನ್ನು ಅಂದರೆ ಟ್ರ್ಯಾಕ್ಟರ್ , ಮ್ಯಾಕ್ಸಿಕ್ಯಾಬ್ , ಟ್ಯಾಕ್ಸಿ ಇತ್ಯಾದಿಗಳನ್ನು ಹೊಂದಿದ ಕುಟುಂಬವನ್ನು ಹೊರತು ಪಡಿಸಿ ನಾಲ್ಕು ಚಕ್ರದ ವಾಹನಗಳನ್ನು ಹೊಂದಿರುವ ಎಲ್ಲಾ ಕುಟುಂಬಗಳನ್ನು ಹೊರತು ಪಡಿಸಿ

4. ಕುಟುಂಬ ವಾರ್ಷಿಕ ಆದಾಯವು 1.20 ಲಕ್ಷಗಳಿಗಿಂತಲೂ ಹೆಚ್ಚು ಇರುವ ಎಲ್ಲಾ ಕುಟುಂಬಗಳನ್ನು ಹೊರತು ಪಡಿಸಿಬಾಕ್ಸ್‌...........

ತಾಲೂಕು ಬಿಪಿಎಲ್ ಕಾರ್ಡ್ ಕೋರಿ ಸಲ್ಲಿಕೆಯಾದ ಅರ್ಜಿಗಳು

ಚನ್ನಪಟ್ಟ.

455

ಕನಕಪುರ.

944

ಮಾಗಡ.

814

ರಾಮನಗ.

1152

----------------------------------------------------------

ಒಟ್ಟ.

3365

-----------------------------------------------------------

30ಕೆಆರ್ ಎಂಎನ್ 2.ಜೆಪಿಜಿ

ಸಾಂದರ್ಭಿಕ ಚಿತ್ರ.