ಅನ್ನಪೂರ್ಣೇಶ್ವರಿ ರಥ ಎಳೆದು ಸಂಭ್ರಮಿಸಿ ಮಹಿಳೆಯರು

| Published : Jan 31 2024, 02:16 AM IST

ಸಾರಾಂಶ

ಅನ್ನಪೂರ್ಣೇಶ್ವರಿ ರಥ ಎಳೆದು ಸಂಭ್ರಮಿಸಿ ಮಹಿಳೆಯರು

ಕನ್ನಡಪ್ರಭ ವಾರ್ತೆ ಬೈಲಹೊಂಗಲ

ಪಟ್ಟಣದ ಬಸವ ನಗರದ ಮಾತಾ ಅನ್ನಪೂರ್ಣೇಶ್ವರಿ ದೇವಸ್ಥಾನದ 12ನೇ ವರ್ಷದ ಜಾತ್ರಾ ಮಹೋತ್ಸವ ನಿಮಿತ್ತ ಬಳ್ಳಾರಿ ಅಜ್ಜನವರ ಮಾರ್ಗದರ್ಶನದಲ್ಲಿ ರಥೋತ್ಸವ ಅದ್ಧೂರಿಯಾಗಿ ನಡೆಯಿತು.

ವೇ.ಮೂ. ತುರಮರಿ ಮಹಾಂತಶಾಸ್ರೀ, ವೇ.ಮೂ. ಮೃತ್ಯುಂಜಯ ಯರಗುದ್ರಿಮಠ, ದೇವಸ್ಥಾನ ಕಮಿಟಿ ಅಧ್ಯಕ್ಷ ಮಹಾಂತೇಶ ಮೊರಬದ ನೇತೃತ್ವದಲ್ಲಿ ರಥಕ್ಕೆ ಪೂಜೆ ಸಲ್ಲಿಸಿ, ಚಾಲನೆ ನೀಡಲಾಯಿತು. ದೇವಸ್ಥಾನದ ಅಂಗಳದಿಂದ ಬೀದಿಯ ಕೊನೆವರೆಗೂ ರಥೋತ್ಸವ ನಡೆದು ತೆರಳಿ ಮರಳಿ ರಥವನ್ನು ದೇವಸ್ಥಾನಕ್ಕೆ ತಲುಪಿಸಲಾಯಿತು. ಅಪಾರ ಭಕ್ತರು ಉತ್ಸಾಹದಿಂದ ಜಾತ್ರೆಯಲ್ಲಿ ಪಾಲ್ಗೊಂಡು ರಥವನ್ನು ಎಳೆಯುತ್ತಾ ಜಯಘೋಷ ಹಾಕಿದರು. ಹೂ, ಮಾಲೆ, ಕಾರಿಕ, ಬಾಳೆಹಣ್ಣು ರಥಕ್ಕೆ ಅರ್ಪಿಸಿ ಭಕ್ತಿಭಾವ ಮೆರೆದರು. ಮಾತಾ ಅನ್ನಪೂರ್ಣೇಶ್ವರಿ ಮಾತಾ ಕೀ ಜೈ ಎಂಬ ಘೋಷಣೆಗಳು ಮೊಳಗಿದವು. ಮಹಿಳೆಯರು ರಥವನ್ನು ಎಳೆದಿದ್ದು ವಿಶೇಷವಾಗಿತ್ತು.

ವೇ.ಮೂ. ತುರಮರಿ ಮಹಾಂತಶಾಸ್ರೀ ಅವರ ತಂಡದಿಂದ ಗಣ, ನವದುರ್ಗೆ ಹೋಮ, ಸುಮಂಗಲೆಯರಿಂದ ಗಂಗಾ ಪೂಜೆ, ಕಳಸಾಭಿಷೇಕ, ಅಮ್ಮನವರಿಗೆ ರುದ್ರಾಭಿಷೇಕ, ಕುಂಕುಮಾರ್ಚನೆ, ಆಲಂಕಾರ, ದೇವಿಗೆ ಉಡಿ ತುಂಬುವ ಕಾರ್ಯಕ್ರಮ ಜರುಗಿದವು. ಭಕ್ತರು ದೇವಿಯ ಪೂಜೆಗೈದು ತಮ್ಮ ಇಷ್ಟಾರ್ಥ ಸಿದ್ದಿಗಾಗಿ ಪ್ರಾರ್ಥಿಸಿದರು. ಮಹಾಪ್ರಸಾದ ಸವಿದು ಪುನೀತರಾದರು.

ಈ ವೇಳೆ ಮಹಾಂತೇಶ ಮೊರಬದ, ವಿರುಪಾಕ್ಷ ವಾಲಿ, ಶಂಕರ ಮಾಡಲಗಿ, ಕಾಶಿನಾಥ ಬಿರಾದಾರ, ಸಿದ್ದರಾಮ ಲಿಂಗಶೆಟ್ಟಿ, ಎಸ್.ಬಿ.ಹುಡೇದ, ರುದ್ರಪ್ಪ ಹುಡೇದ, ಶಿವಾನಂದ ಬೆಟಗೇರಿ, ಎಂ.ಜೆ.ಕೆ. ಹಿರೇಮಠ,ಅಜೀತ ಕೊಟಗಿ, ಎನ್.ಪಿ.ಮರಲಿಂಗನ್ನವರ, ಎಸ್.ಜಿ.ಬೂದಯ್ಯನವರಮಠ, ಈರಪ್ಪ ಸಿಂಗಾರಿ, ಉದಯ ಶೆಟ್ಟಿ, ಈರಪ್ಪ ಚಳಕೊಪ್ಪ, ಮಡಿವಾಳಪ್ಪ ಸಂಗನ್ನವರ, ಸಂಗಮೇಶ ಸವದತ್ತಿಮಠ, ವಿಜಯ ಆರಾದ್ರಿಮಠ, ಅನೀಲ ಚಡಿಚಾಳ, ಸಂತೋಷ ರಾಯರ, ಎನ್.ಎಂ. ಗುಂಡಗಂವಿ, ಕುಮಾರ ಅಂಗಡಿ, ಸುರೇಶ ಹಿರೇಮಠ, ಎಸ್.ಎಸ್.ಬನೆನ್ನವರ, ಎಸ್.ವಿ.ತಳವಾರ, ಮಾರುತಿ ನಾಯ್ಕ, ಬಿ.ವೈ. ತೋಟಗಿ, ವಿಜಯ ಆರಾದ್ರಿಮಠ, ಎಸ್.ಎ. ಇಂಚಲ, ಮುರುಗೇಶ ಕುಂಬಾರ, ಎಸ್.ಬಿ. ಪೂಜೇರ, ಮಂಜುನಾಥ ಪಾಟೀಲ, ಗುರುಪುತ್ರಮ ಮೂಗಬಸವ, ಮಹಾಂತೇಶ ಅರಳಿಕಟ್ಟಿ, ಶಂಕರಪ್ಪ ಬೋವಿ, ಎನ್.ಪಿ.ಕೋಳಿ ಹಾಗೂ ಅನ್ನಪೂರ್ಣೇಶ್ವರ ದೇವಸ್ಥಾನದ ಕಮಿಟಿಯ ಸದಸ್ಯರು ನೂರಾರು ಭಕ್ತರು ಇದ್ದರು.