ಬಿ.ಕಾಂ ಬಿಎಫ್ಎಸ್ಐ ವಿಭಾಗದ ಸಂಚಾಲಕಿ ಡಾ.ಲೀಲಾವತಿ ಎಚ್ ಮಾತನಾಡಿ, ವಿದ್ಯಾರ್ಥಿಗಳು ಗುರಿ ಸಾಧಿಸಲು ಸಮಯ ನಿರ್ವಹಣೆ, ನಿರಂತರ ಅಧ್ಯಯನ, ಪ್ರಾಯೋಗಿಕ ಜ್ಞಾನ, ಇಂಟರ್ನ್‌ಶಿಪ್, ಪ್ರಮಾಣಪತ್ರ ಕೋರ್ಸ್‌ಗಳು ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆಗೆ ಆದ್ಯತೆ ನೀಡಬೇಕು ಎಂದರು.
ಕನ್ನಡಪ್ರಭ ವಾರ್ತೆ ಮಧುಗಿರಿ
ವಿದ್ಯಾರ್ಥಿಗಳು ಪದವಿ ಶಿಕ್ಷಣದ ಅವಧಿಯಲ್ಲಿಯೇ ತಮ್ಮ ಆಸಕ್ತಿ, ಸಾಮರ್ಥ್ಯ, ಕೌಶಲ್ಯ ಮತ್ತು ವೃತ್ತಿ ಗುರಿ ಗುರುತಿಸಿಕೊಂಡು ಭವಿಷ್ಯಕ್ಕೆ ಸೂಕ್ತ ಯೋಜನೆ ರೂಪಿಸಿಕೊಳ್ಳಬೇಕು ಎಂದು ಪ್ರೊ.ಜೆ.ರಾಮು ಕರೆ ನೀಡಿದರು.ಇಲ್ಲಿನ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗ ಹಾಗೂ ಐಕ್ಯೂಎಸಿ ಘಟಕದ ವತಿಯಿಂದ ಬಿ.ಕಾಂ ಹಾಗೂ ಬಿ.ಕಾಂ (ಬಿಎಫ್‌ಎಸ್ಐ) ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿ, ಬಿ.ಕಾಂ ವಿದ್ಯಾರ್ಥಿಗಳು ಚಾರ್ಟೆಡ್ ಅಕೌಂಟೆಂಟ್, ಸಿಎಂಎ, ಕಂಪನಿ ಕಾರ್ಯದರ್ಶಿ, ಎಂ.ಕಾಂ, ಎಂ.ಬಿ.ಎ, ಬ್ಯಾಂಕಿಂಗ್, ಸರ್ಕಾರಿ ಉದ್ಯೋಗ, ಸ್ಪರ್ಧಾತ್ಮಕ ಪರೀಕ್ಷೆಗಳು, ಹಣಕಾಸು ಕ್ಷೇತ್ರ , ವಿಮೆ ಹಾಗೂ ಉದ್ಯಮಶೀಲತೆ ಸೇರಿದಂತೆ ವಿವಿಧ ವೃತ್ತಿ ಅವಕಾಶಗಳು, ಹಣಕಾಸು ಸಂಸ್ಥೆಗಳು, ಫಿನ್ ಟೆಕ್ ಹಾಗೂ ಡಿಜಿಟಲ್ ಬ್ಯಾಂಕಿಂಗ್ ಕ್ಷೇತ್ರಗಳಲ್ಲಿ ಲಭ್ಯವಿರುವ ಉತ್ತಮ ಅವಕಾಶಗಳನ್ನು ಪರಿಣಾಮಕಾರಿ ಬಳಸಿಕೊಳ್ಳಬೇಕು ಎಂದು ತಿಳಿಸಿದರು.ಪ್ರಾಸ್ತಾವಿಕವಾಗಿ ಮಾತನಾಡಿದ ವಾಣಿಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ.ರಂಜಿತ ಬಿ.ಆರ್, ಇಂದಿನ ಸ್ಪರ್ಧಾತ್ಮಕ ಉದ್ಯೋಗ ಮಾರುಕಟ್ಟೆಯಲ್ಲಿ ಪದವಿ ಜತೆ ಸಂವಹನ, ಕಂಪ್ಯೂಟರ್ ಜ್ಞಾನ, ಡಿಜಿಟಲ್ ಕೌಶಲ್ಯ, ಡೇಟಾ ವಿಶ್ಲೇಷಣೆ, ಹಣಕಾಸು ಜ್ಞಾನ, ಸಮಸ್ಯೆ ಪರಿಹಾರ ಸಾಮರ್ಥ್ಯ ಮತ್ತು ಆತ್ಮವಿಶ್ವಾಸ ಕೌಶಲ್ಯ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.
ಬಿ.ಕಾಂ ಬಿಎಫ್ಎಸ್ಐ ವಿಭಾಗದ ಸಂಚಾಲಕಿ ಡಾ.ಲೀಲಾವತಿ ಎಚ್ ಮಾತನಾಡಿ, ವಿದ್ಯಾರ್ಥಿಗಳು ಗುರಿ ಸಾಧಿಸಲು ಸಮಯ ನಿರ್ವಹಣೆ, ನಿರಂತರ ಅಧ್ಯಯನ, ಪ್ರಾಯೋಗಿಕ ಜ್ಞಾನ, ಇಂಟರ್ನ್‌ಶಿಪ್, ಪ್ರಮಾಣಪತ್ರ ಕೋರ್ಸ್‌ಗಳು ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆಗೆ ಆದ್ಯತೆ ನೀಡಬೇಕು ಎಂದರು.ಕನ್ನಡ ವಿಭಾಗದ ಮುಖ್ಯಸ್ಥ ಡಾ.ಗೋವಿಂದರಾಯ ಎಂ, ಐಕ್ಯೂಎಸಿ ಸಂಚಾಲಕಿ ಪ್ರೊ.ವೇದಲಕ್ಷ್ಮೀ ಜಿ ಮಾತನಾಡಿದರು.
ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿ ಮಂಜುನಾಥ್ ಬಿ, ಪತ್ರಾಂಕಿತ ವ್ಯವಸ್ಥಾಪಕಿ ಚಂದ್ರಕಲಾ, ಪ್ರಾಧ್ಯಾಪಕರಾದ ಡಾ.ದುರ್ಗಪ್ಪ, ರಾಮಮೂರ್ತಿ, ನಟರಾಜು, ಡಾ. ನಂದಿನಿ, ಭಾರ್ಗವಿ, ಡಾ.ಮಂಜುನಾಥ್ ಬುಡಸನಹಳ್ಳಿ, ಮುರುಳಿಧರ್, ಆನಂದ್, ನಾಗೇಂದ್ರ, ಗಿರೀಶ್, ಮಿಸ್ಬಾ ಜಹೇರಾ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.