ನಿರಂತರ ಸಾಧನೆಯಿಂದ ಯಶಸ್ಸುಸಾಧ್ಯ

| Published : Nov 11 2025, 01:30 AM IST

ಸಾರಾಂಶ

ಕೊಪ್ಪ ಸಾಧನೆ ನಿರಂತರವಾಗಿ ಇದ್ದಲ್ಲಿ ಯಶಸ್ಸು ಸಿಗುತ್ತದೆ. ಪ್ರತಿನಿತ್ಯ ನಾವು ಸಾಧನೆಗೆ ಪ್ರಯತ್ನ ನಡೆಸಬೇಕು ವಿದ್ಯಾರ್ಥಿಗಳು ಈ ದೆಸೆಯಲ್ಲಿ ಸದಾ ಪ್ರಯತ್ನಶೀಲರಾಗಿರಬೇಕು ಸೋಲು ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸಬೇಕು ಎಂದು ಭಂಡಿಗಡಿ ಗ್ರಾ.ಪಂ. ಸದಸ್ಯರು ಬಿ.ಎನ್. ಬಿಷೇಜ ಹೇಳಿದರು.

- ಕನಕದಾಸರ ಜಯಂತಿ ಪ್ರಯುಕ್ತ ಗೀತ ಗಾಯನ

ಕನ್ನಡಪ್ರಭ ವಾರ್ತೆ, ಕೊಪ್ಪ

ಸಾಧನೆ ನಿರಂತರವಾಗಿ ಇದ್ದಲ್ಲಿ ಯಶಸ್ಸು ಸಿಗುತ್ತದೆ. ಪ್ರತಿನಿತ್ಯ ನಾವು ಸಾಧನೆಗೆ ಪ್ರಯತ್ನ ನಡೆಸಬೇಕು ವಿದ್ಯಾರ್ಥಿಗಳು ಈ ದೆಸೆಯಲ್ಲಿ ಸದಾ ಪ್ರಯತ್ನಶೀಲರಾಗಿರಬೇಕು ಸೋಲು ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸಬೇಕು ಎಂದು ಭಂಡಿಗಡಿ ಗ್ರಾ.ಪಂ. ಸದಸ್ಯರು ಬಿ.ಎನ್. ಬಿಷೇಜ ಹೇಳಿದರು.ಕನ್ನಡ ಸಾಹಿತ್ಯ ಪರಿಷತ್ತು ಹರಿಹರಪುರ ಹೋಬಳಿ ಘಟಕ ಹಾಗೂ ಮಾತಾನುಗ್ರಹ ಧ್ಯಾನಕೇಂದ್ರ ಹಂದಿಗೋಡು ಭಂಡಿಗಡಿ ಇವರ ಸಂಯುಕ್ತಾಶ್ರಯದಲ್ಲಿ ಭಾನುವಾರ ಆಯೋಜಿಸಿದ್ದ ಕನಕದಾಸರ ಜಯಂತಿ ಪ್ರಯುಕ್ತ ಗೀತ ಗಾಯನ ಹಾಗೂ ಚದು ರಂಗ ಸ್ಪರ್ಧೆಯಲ್ಲಿ ವಿಶೇಷ ಸಾಧನೆಗೈದವರಿಗೆ ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿರು. ಹಳ್ಳಿ ಹಳ್ಳಿಗಳಲ್ಲಿ ಸಾಧಕರನ್ನು ಹಿರಿಯರನ್ನು ವಿದ್ಯಾರ್ಥಿಗಳನ್ನು ಗುರುತಿಸಿ ಗೌರವಿಸುವ ಅಭಿನಂದಿಸುವ ಕಾರ್ಯಕ್ರಮ ಕಸಾಪ ಹರಿಹರಪುರ ಹೋಬಳಿ ಘಟಕ ಆಯೋಜಿಸುತ್ತಿರುವುದು ಸ್ವಾಗತಾರ್ಹ ಎಂದರು.ಕಸಾಪ ಹರಿಹರಪುರ ಹೋಬಳಿ ಘಟಕದ ಅಧ್ಯಕ್ಷ ವೈದ್ಯ ಬಿ.ಆರ್ ಅಂಬರೀಶ ಭಂಡಿಗಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಕನಕದಾಸರು ತಮ್ಮ ಕೀರ್ತನೆಗಳ ಮೂಲಕವೇ ಸಮಾಜದ ಅಂಕುಡೊಂಕುಗಳನ್ನು ತಿದ್ದಲು ಪ್ರಯತ್ನ ಪಟ್ಟ ವರು. ಅವರ ನೂರಾರು ಕೀರ್ತನೆ ಜನ ಮಾನಸದಲ್ಲಿ ಇಂದಿಗೂ ನೆಲೆಯಾಗಿದೆ. ಕನಿಷ್ಠ ಸೌಲಭ್ಯ ಪಡೆದು ಅತ್ಯುತ್ತಮ ಸಾಧನೆ ತೋರಿದ ವಿದ್ಯಾರ್ಥಿಗಳ ಸಾಧನೆ ಬಹುದೊಡ್ಡದಿದೆ. ಯಾವುದೇ ವಿಶೇಷ ಸೌಲಭ್ಯ ಸಿಗದೆ ತಮ್ಮ ವೈಯಕ್ತಿಕ ಕಲಿಕೆಯಿಂದ ರಾಜ್ಯಮಟ್ಟದಲ್ಲಿ ವಿದ್ಯಾರ್ಥಿಗಳು ವಿಶೇಷ ಸಾಧನೆ ಮಾಡಿರುವುದು ಶ್ಲಾಘನೀಯ ವಿದ್ಯಾರ್ಥಿಗಳ ಸಾಧನೆ ನಿರಂತರವಾಗಿ ಮುಂದುವರಿಯಲು ಕನ್ನಡ ಸಾಹಿತ್ಯ ಪರಿಷತ್ತಿನ ಸಹಕಾರ ಸದಾ ಇರುತ್ತದೆ ಎಂದರು.ವಿಶೇಷ ಆಹ್ವಾನಿತರಾಗಿ ಆಗಮಿಸಿದ ಚೆಸ್ ಆಟಗಾರ ಆದಿತ್ಯ ಹರ್ಡಿಕರ್ ಕೊಪ್ಪ ಮಾತನಾಡಿ ಚೆಸ್ ಆಟ ಬುದ್ಧಿವಂತರ ಆಟ ಈ ಆಟ ಪ್ರಥಮ ಬಾರಿಗೆ ಭಾರತದಲ್ಲಿಯೇ ಪ್ರಾರಂಭವಾಗಿರುವುದು ಸೋಲು ಗೆಲುವು ಸ್ಪರ್ಧೆಯಲ್ಲಿ ಇರುವುದೇ ಆದರೆ ಗೆಲ್ಲುವ ಛಲ ನಿರಂತರವಾಗಿರಬೇಕು ಚೆಸ್ ಆಟದಿಂದ ಏಕಾಗ್ರತೆ ಹೆಚ್ಚುತ್ತದೆ ಭಯ ದೂರವಾಗುತ್ತದೆ ಈ ಆಟಕ್ಕೆ ವಯಸ್ಸಿನ ಮಿತಿ ಇಲ್ಲದಿರುವುದರಿಂದ ಎಲ್ಲರೂ ಚೆಸ್ ಆಡಬಹುದಾಗಿದೆ ಎಂದರು.ಕಸಾಪ ಭಂಡಿಗಡಿ ಗ್ರಾಮ ಘಟಕ ಅಧ್ಯಕ್ಷೆ ಅಸ್ಮಾ ಮಾತನಾಡಿ ಕನಕದಾಸರ ಬಗ್ಗೆ ಅವರ ಕೀರ್ತನೆಗಳ ಬಗ್ಗೆ ಸವಿಸ್ತಾರವಾಗಿ ಮಾತನಾಡಿದರು.ಕ.ಜಾ.ಪ ಅಧ್ಯಕ್ಷ ಬಿ.ಎಚ್. ದಿವಾಕರ್ ಭಟ್, ಬಿ.ಎಚ್. ರಾಮಚಂದ್ರ, ಕಸಾಪ ಹೋಬಳಿ ಅಧ್ಯಕ್ಷ ಶುಕುರ್ ಅಹಮದ್, ರವಿ ಪ್ರಸಾದ್ ರವೀಶ್ ರುದ್ರಾಕ್ಷಿ ಬೈಲ್, ಅಶ್ಪಕ್, ಆಶಾ, ಸೌಭಾಗ್ಯ, ಮಧುರ, ಪ್ರೀತಮ್, ನಿರಂಜನ, ಮನ್ವಿತ್ ಹಿರಣ್ಯ, ಕೀರ್ತನ್, ಅಧೀಕ್ಷ ಮುಂತಾದವರು ಉಪಸ್ಥಿತರಿದ್ದರು.