ಸಾರಾಂಶ
ಕಲಬುರಗಿ ನಗರದ ದೊಡ್ಡಪ್ಪ ಅಪ್ಪ ಕಾಲೇಜಿನಲ್ಲಿ ಶುಕ್ರವಾರ ಸ್ವಾಮಿ ವಿವೇಕಾನಂದರ ಜಯಂತಿಯ ಅಂಗವಾಗಿ ಯುವಕರ ದಿನಾಚರಣೆಯನ್ನು ಆಚರಿಸಲಾಯಿತು.
ದೊಡ್ಡಪ್ಪ ಅಪ್ಪ ಕಾಲೇಜಿನಲ್ಲಿ ಸ್ವಾಮಿ ವಿವೇಕಾನಂದರ ಜಯಂತಿಕನ್ನಡಪ್ರಭ ವಾರ್ತೆ ಕಲಬುರಗಿ
ವಿದ್ಯಾರ್ಥಿಯ ಜೀವನದಲ್ಲಿ ಕನಸು ಇರಬೇಕು. ಅದನ್ನು ಈಡೇರಿಸಿಕೊಳ್ಳಬೇಕಾದರೆ ನಿರಂತರ ಪ್ರಯತ್ನ ಇಚ್ಛಾಶಕ್ತಿ ಹಾಗೂ ನೈಸರ್ಗಿಕ ಪ್ರಯತ್ನ ಇದ್ದಾಗ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದು ಸ್ವಾಮಿ ಚೈತನ್ಯಾನಂದ ಮಹಾರಾಜ್ ಕೊಪ್ಪಳ ಹೇಳಿದರು.ಕಲಬುರಗಿ ನಗರದ ದೊಡ್ಡಪ್ಪ ಅಪ್ಪ ಕಾಲೇಜಿನಲ್ಲಿ ಶುಕ್ರವಾರ ಸ್ವಾಮಿ ವಿವೇಕಾನಂದರ ಜಯಂತಿಯ ಅಂಗವಾಗಿ ಯುವಕರ ದಿನಾಚರಣೆಯನ್ನು ಆಚರಿಸಲಾಯಿತು. ಈ ವೇಳೆ ಮಾತನಾಡಿದ ಅವರು, ವಿವೇಕಾನಂದರ ದೃಷ್ಟಿಯಲ್ಲಿ ಶಿಕ್ಷಣವೆಂದರೆ ಜಗತ್ತಿನ ಜ್ಞಾನ ಹೊಂದುವುದೇ, ಪರಿಪೂರ್ಣತೆ ಶಿಕ್ಷಣ, ಮನುಷ್ಯನ ದೇಹದಲ್ಲಿ ಅನಂತ ಶಕ್ತಿ ಇದೆ. ಅದನ್ನು ಹೊರಗಡೆ ತರಬೇಕು ಎಂದು ತಿಳಿಸಿದರು.
ಅತಿಥಿ ಸ್ವಾಮಿ ವಿಭಕರನಂದಾಜಿ ಮಹಾರಾಜ್ ರಾಮಕೃಷ್ಣ ಆಶ್ರಮ ಬಿಹಾರ್ ಅವರು ತಮ್ಮ ನುಡಿಗಳಲ್ಲಿ ಬಾಲಗಂಗಾಧರ ತಿಲಕರ ಜೊತೆ ವಿವೇಕಾನಂದರು ಸೇರಿ ಯುವ ತರುಣರಲ್ಲಿ ದೇಶ ಅಭಿಮಾನ ಮೂಡಿಸುವುದರ ಮೂಲಕ ಈ ದೇಶಕ್ಕೆ 50 ವರ್ಷಗಳ ನಂತರ ಸ್ವತಂತ್ರ ಬಂದೇ ಬರುತ್ತದೆ ಎಂದು 1897 ಆಗಸ್ಟ್ 14ರಂದು ವಿವೇಕಾನಂದರು ತಮ್ಮ ದಿವ್ಯ ಜ್ಞಾನದಿಂದ ತಿಳಿಸಿದರೆಂದರು.ಸ್ವಾಮಿ ಮಹೇಶ್ವರ ನಂದಾಜಿ ಮಹಾರಾಜ್ ಮಾತನಾಡುತ್ತ, ವಿವೇಕಾನಂದರು ಯುವಕರು ಆತ್ಮ ಜಾಗೃತಿ ಮಾಡಿಕೊಳ್ಳಬೇಕು ಎಂದರು. ಪ್ರಾಚಾರ್ಯರು ವಿನೋದ್ ಕುಮಾರ್ ಎಲ್ ಪತಂಗೆ ಉಪಸ್ಥಿತರಿದ್ದರು.
ಪ್ರಾಜೆಕ್ತ ಅಕ್ಷತಾ ನಿರೂಪಿಸಿದರು. ಪಲ್ಲವಿ ಮತ್ತು ಶಾಲಿನಿ ಪ್ರಾರ್ಥನೆ ಗೀತೆ ಹಾಡಿದರು. ನಂದಿನಿ ರೆಡ್ಡಿ ಅತಿಥಿಗಳನ್ನು ಸ್ವಾಗತಿಸಿದರು. ಡಾ. ಆನಂದ್ ಶಿದ್ದಮಣಿ ಅತಿಥಿಗಳನ್ನು ಪರಿಚಯಿಸಿದರು. ಬಸಂತ್ ರೆಡ್ಡಿ ನಿರಂಜನ್ ವಿವೇಕಾನಂದರ ಬಗ್ಗೆ ಅನಿಸಿಕೆ ವ್ಯಕ್ತಪಡಿಸಿದರು ಆಕಾಶ್ ರೆಡ್ಡಿ ವಂದಿಸಿದರು.