ಧನಾತ್ಮಕ ಚಿಂತನೆಯಿಂದ ಯಶಸ್ಸು ಸಾಧ್ಯ: ಪವನ ಒಡೆಯರ

| Published : Jan 19 2025, 02:18 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಜೀವನದಲ್ಲಿ ಯಾವುದಕ್ಕೂ ಎದೆಗುಂದದೇ ಧನಾತ್ಮಕ ಚಿಂತನೆಯನ್ನು ಹೊಂದಿದ್ಧರೆ ಖಂಡಿತವಾಗಿ ಯಶಸ್ಸನ್ನು ಗಳಿಸಬಹುದು ಎಂದು ಚಲನಚಿತ್ರ ನಿರ್ದೇಶಕ ಪವನ ಒಡೆಯರ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಜೀವನದಲ್ಲಿ ಯಾವುದಕ್ಕೂ ಎದೆಗುಂದದೇ ಧನಾತ್ಮಕ ಚಿಂತನೆಯನ್ನು ಹೊಂದಿದ್ಧರೆ ಖಂಡಿತವಾಗಿ ಯಶಸ್ಸನ್ನು ಗಳಿಸಬಹುದು ಎಂದು ಚಲನಚಿತ್ರ ನಿರ್ದೇಶಕ ಪವನ ಒಡೆಯರ ಹೇಳಿದರು.

ನಗರದ ಆರ್‌ಕೆಎಮ್ ಸಮೂಹ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳೊಂದಿಗೆ ಸಂವಾದದಲ್ಲಿ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ನಾವು ಎಷ್ಟೇ ಎತ್ತರಕ್ಕೆ ಬೆಳೆದರೂ ನಡೆದು ಬಂದ ಹಾದಿಯನ್ನು ಮರೆಯಬಾರದು. ವಿಜಯಪುರದಲ್ಲಿ ಚಿತ್ರೀಕರಣಗೊಂಡ ಗೋವಿಂದಾಯನಮಃ ಚಲನಚಿತ್ರದ ಪ್ಯಾರ್‌ಗೆ ಆಗ್ಬಿಟ್ಟೈತೆ ಗೀತರಚನೆ ನನ್ನನ್ನು ಪರಿಚಿತನನ್ನಾಗಿಸಿತು. ಸಿನಿರಂಗದಲ್ಲಿ ತಾವು ನಡೆದು ಬಂದ ದಾರಿಯ ಕುರಿತು ಅನುಭವಗಳನ್ನು ಹಂಚಿಕೊಂಡರು.

ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಶಂಭುಲಿಂಗಯ್ಯ ಕರ್ಪೂರಮಠ ಮಾತನಾಡಿ, ದಿ. ಪುನೀತ ರಾಜಕುಮಾರ ಅವರ ವ್ಯಕ್ತಿತ್ವವನ್ನು ನೆನೆಯುವ ಮೂಲಕ ಮನುಷ್ಯ ಪರೋಪಕಾರದಿಂದಲೇ ತನ್ನ ಜೀವನವನ್ನು ಪಾವನಗೊಳಿಸಿಕೊಳ್ಳಬಹುದು. ಜನಮಾನಸದಲ್ಲಿ ಅಜರಾಮರರಾಗಿ ಉಳಿಯಬಹುದೆಂಬುದಕ್ಕೆ ಅವರೇ ನಿದರ್ಶನ. ಚಲನಚಿತ್ರಗಳಿಗೆ ಸಮಾಜವನ್ನು ಪರಿವರ್ತಿಸುವ ಶಕ್ತಿ ಇದ್ದು, ಇಂಥಹ ಅನೇಕ ಚಲನಚಿತ್ರಗಳು ಪವನ ಒಡೆಯರ ಅವರಿಂದ ಮೂಡಿಬರಲಿ ಎಂದು ಆಶಯ ವ್ಯಕ್ತಪಡಿಸಿದರು.

ಆರ್‌ಕೆಎಮ್ ಸಮೂಹ ಶಿಕ್ಷಣ ಸಂಸ್ಥೆ ವತಿಯಿಂದ ನಿರ್ದೇಶಕ ಪವನ ಒಡೆಯರ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು. ನಿರ್ದೇಶಕ ಸಚಿನ ಜೋಷಿ, ಡಾ.ಸದಾನಂದ ಜಿಗಜಿನ್ನಿ, ಡಾ.ಮೋಹಿತೆ, ಮೇಧಾ ಕರ್ಪೂರಮಠ, ಅಮಿತ ಉಪಸ್ಥಿತರಿದ್ದರು. ಡಾ.ತೇಜಸ್ವಿನಿ ಜನಗೊಂಡ, ಡಾ.ಪ್ರಿಯಾಂಕಾ ನಿರೂಪಿಸಿದರು.