ಯಶಸ್ಸಿಗೆ ನಿರಂತರ ಪರಿಶ್ರಮ ಬೇಕು : ಶಿವಾಚಾರ್ಯ

| Published : Aug 24 2024, 01:23 AM IST

ಸಾರಾಂಶ

ಸ್ಪಷ್ಠ ಓದು ನಮ್ಮಲ್ಲಿ ಜ್ಞಾನದ ತಿಳುವಳಿಕೆ ಹೆಚ್ಚಿಸುತ್ತದೆ

ಗದಗ: ವಿದ್ಯಾರ್ಥಿಗಳು ಕೌಶಲಗಳನ್ನು ವೃದ್ಧಿಸಿಕೊಳ್ಳುವ ಕಾರ್ಯದಲ್ಲಿ ತೊಡಗಬೇಕು ಯಶಸ್ಸಿಗೆ ನಿರಂತರ ಪರಿಶ್ರಮ ಅವಶ್ಯ. ಹಿಂಜರಿಕೆಯನ್ನು ಬಿಟ್ಟು ಓದಿನಲ್ಲಿ ತೊಡಗಿಸಿಕೊಂಡು ಯಶಸ್ಸು ಸಾಧಿಸಬೇಕೆಂದು ಚಿಂತಕ ಶಿವಾಚಾರ್ಯ ಹೊಸಳ್ಳಿಮಠ ಹೇಳಿದರು.

ಅವರು ಶುಕ್ರವಾರ ಗದಗ ಜಿಲ್ಲಾ ಅಕ್ಕಮಹಾದೇವಿ ಕದಳಿಶ್ರೀ ವೇದಿಕೆಯಿಂದ ಗದುಗಿನ ಗಂಗಿಮಡಿಯ ಸರಕಾರಿ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ಜರುಗಿದ ಅಮೃತ ಭೋಜನ ಜ್ಞಾನಸಿಂಚನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೋಂಡು ಮಾತನಾಡಿದರು.

ಓದುವ ಹವ್ಯಾಸದಿಂದ ಜ್ಞಾನದ ವಿಕಾಸವಾಗುವದು. ಸ್ಪಷ್ಠ ಓದು ನಮ್ಮಲ್ಲಿ ಜ್ಞಾನದ ತಿಳುವಳಿಕೆಯನ್ನು ಹೆಚ್ಚಿಸುತ್ತದೆ ಮಕ್ಕಳು ಉತ್ತಮ ಪುಸ್ತಕಗಳನ್ನು ಓದುವ ರೂಢಿ ಬೆಳೆಸಿಕೊಳ್ಳಬೇಕು.

ಮಕ್ಕಳಿಗೆ ಸಿಹಿಭೋಜನ ಉಣಬಡಿಸಿ ಮಾತನಾಡಿದ ಚಿಂತಕ ಖ್ವಾಜಾ ಮೈನುದ್ಧೀನ್ ಹಣಗಿ ಪ್ರಾಥಮಿಕ ಹಂತದಲ್ಲಿ ಪಡೆಯುವ ಶಿಕ್ಷಣವು ಮುಂದಿನ ಉನ್ನತ ಭವಿಷ್ಯಕ್ಕೆ ದಾರಿದೀಪವಾಗುತ್ತದೆ. ನಮ್ಮ ಜೀವನದಲ್ಲಿ ಒಳ್ಳೆಯ ನಡತೆ, ಇತರರ ನೋವಿಗೆ ಸ್ಪಂದಿಸುವಂತಹ ಸದ್ಗುಣಗಳನ್ನು ಬೆಳಸಿಕೊಳ್ಳಬೇಕು ಎಂದರು.

ಕಲಿಕಾ ಸಾಮಗ್ರಿಗಳನ್ನು ವಿತರಿಸಿ ಮಾತನಾಡಿದ ಚಿಂತಕ ಡಾ.ಎ.ಎನ್.ಶಾಲಗಾರ ಮಾತನಾಡಿ ಉತ್ತಮ ಬರವಣಿಗೆ ಸಂವಹನ ಕೌಶಲ ಮಕ್ಕಳಿಗೆ ಅವಶ್ಯವಾಗಿದ್ದು ಪ್ರತಿದಿನದ ಪತ್ರಿಕೆಗಳನ್ನು ಓದುವ ರೂಢಿ ಇದ್ದಲ್ಲಿ ಅದು ಹೆಚ್ಚಿನ ಜ್ಞಾನವನ್ನುಂಟು ಮಾಡುತ್ತದೆ ಎಂದರು. ಸಾಮಾಜಿಕ ಕಾರ್ಯಕರ್ತ ರಮೇಶ ತೋಟದ ಮಾತನಾಡಿ ಆದರ್ಶ ವಿಚಾರಗಳನ್ನು ಹಿರಿಯರ ನಾಣ್ನುಡಿಗಳನ್ನು ತಾಳ್ಮೆಯಿಂದ ಕೇಳುವದು ಅವುಗಳನ್ನು ಪಾಲಿಸುವದು ಮಕ್ಕಳಿಗೆ ಅವಶ್ಯವಾಗಿದೆ ಎಂದರು.

ಗದಗ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ಬಿ.ಕೆ.ಸಾವಿತ್ರಿ, ಬಿ.ಕೆ.ಮುತ್ತಕ್ಕ, ಬಿ.ಕೆ.ಜ್ಯೋತಿ ಅವರುಗಳು ರಕ್ಷಾ ಬಂಧನದ ಮಹತ್ವವನ್ನು ವಿವರಿಸಿದರು. ಅಧ್ಯಕ್ಷತೆ ವಹಿಸಿದ್ದ ಮುಖ್ಯೋಪಾಧ್ಯಾಯನಿ ರತ್ನಾ ಸಂಕಣ್ಣವರ ಮಾತನಾಡಿದರು. ಐ.ಡಿ.ಕಬ್ಬೇರಹಳ್ಳಿ ಆರ್.ಬಿ. ಹಾದಿಮನಿ ವಚನ ಪ್ರಾರ್ಥನೆ ನಡೆಸಿದರು. ಸಂಪನ್ಮೂಲ ವ್ಯಕ್ತಿ ಕೆ.ಎಸ್.ಬೇಲೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್.ಜಿ.ಗಿರಿತಮ್ಮಣ್ಣವರ ಸ್ವಾಗತಿಸಿದರು. ವ್ಹಿ.ಆರ್.ಹಾಂಶಿ ನಿರೂಪಿಸಿದರು, ಸಿ.ಎಸ್.ಬೆಳಹಾರ ನಿರ್ವಹಿಸಿದರು ಆರ್.ಡಿ.ಮುಗಜಿ ಪರಿಚಯಿಸಿದರು. ಜ್ಯೋತಿ ಅಂಗಡಿ ವಂದಿಸಿದರು.