ವಿವೇಕಾನಂದ ತತ್ವಾದರ್ಶ ಪಾಲನೆಯಿಂದ ಯಶಸ್ಸು

| Published : Apr 04 2025, 12:45 AM IST

ಸಾರಾಂಶ

ಸ್ವಾಮಿ ವಿವೇಕಾನಂದರು ಯುವಜನತೆಗೆ ಸ್ಫೂರ್ತಿ ತುಂಬುವ ಉದ್ದೇಶದಿಂದ ಹೇಳಿದ "ಏಳಿ ಎದ್ದೇಳಿ, ಗುರಿ ಮುಟ್ಟುವ ತನಕ ವಿಶ್ರಮಿಸದಿರಿ " ಎಂಬ ಹಿತನುಡಿಯು ಪೋಷಕರ ಕಂಡ ಕನಸ್ಸು ಮತ್ತು ಶಿಕ್ಷಕರು ಇಟ್ಟ ನಂಬಿಕೆಯ ಉಳಿವಿಗಾಗಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಶ್ರೀಯುತರ ಮಾತುಗಳನ್ನು ಪಾಲನೆ ಮಾಡಿದಾಗ ಮಾತ್ರ ಉತ್ತಮ ಸಂಸ್ಕಾರದೊಂದಿಗೆ ಯಶಸ್ವಿ ಜೀವನ ರೂಪಿಸಿಕೊಳ್ಳಲು ಸಾಧ್ಯವೆಂದು ಹಾಸನ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಿ.ಪಿ.ಗಿರೀಶ್ ಸಲಹೆ ನೀಡಿದರು.

ಕನ್ನಡಪ್ರಭ ವಾರ್ತೆ ಹೊಳೆನರಸೀಪುರ

ಪಟ್ಟಣದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಆವರಣದಲ್ಲಿ ಆಯೋಜಿಸಿದ್ದ ೨೦೨೪-೨೫ನೇ ಸಾಲಿನ ವಿದ್ಯಾರ್ಥಿ ಮತ್ತು ಕ್ರೀಡಾ ಸಂಘದ ಸಮಾರೋಪ ಸಮಾರಂಭ ಹಾಗೂ ಕಾಲೇಜು ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದರು. ಕಾಲೇಜುಗಳಲ್ಲಿ ನೀಡುವ ಶಿಕ್ಷಣದ ಜತೆಗೆ ಕೌಶಲ್ಯಾಭಿವೃದ್ಧಿ ಪಡಿಸಿಕೊಂಡಲ್ಲಿ ಹೆಚ್ಚಿನ ಅರಿವು ಹಾಗೂ ಜ್ಞಾನ ಪಡೆಯಲು ಸಾಧ್ಯವಾಗುತ್ತದೆ. ಮಹಿಳಾ ಕಾಲೇಜುಗಳಲ್ಲಿ ಗಣ್ಯರ ಮಾತುಗಳನ್ನು ತಿಳಿದುಕೊಳ್ಳಬೇಕು ಎಂಬ ತುಡಿತ ಮತ್ತು ಸಭಾ ನಡವಳಿಕೆಯು ಹೆಣ್ಣಿನ ಗೌರವ ಸ್ಥಾನಕ್ಕೆ ಮೆರುಗನ್ನು ನೀಡುತ್ತದೆ. ತಮ್ಮ ಜ್ಞಾನ ಹಾಗೂ ನಡುವಳಿಕೆಯಿಂದ ಒಬ್ಬ ವ್ಯಕ್ತಿಯನ್ನು ತಿದ್ದಿತೀಡಿ ಸುಂದರ ಬದುಕು ರೂಪಿಸುವ ಶಕ್ತಿ ಮಹಿಳೆಯರಿಂದ ಮಾತ್ರ ಸಾಧ್ಯ. ಆದ್ದರಿಂದ ಸಿಕ್ಕ ಅವಕಾಶಗಳು ಹಾಗೂ ದೊರೆಯುವ ಸೌಲಭ್ಯಗಳನ್ನು ಬಳಸಿಕೊಂಡು ಉನ್ನತ ಸ್ಥಾನ ಪಡೆಯುವ ಜತೆಗೆ ಯಶಸ್ವಿ ಜೀವನ ರೂಪಿಸಿಕೊಳ್ಳಿ ಎಂದು ಸಲಹೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಕೆ.ಎಂ.ಶ್ರೀಧರ್ ಹಾಗೂ ನಿವೃತ್ತ ಪ್ರಾಂಶುಪಾಲ ಎಚ್.ಎಸ್.ಪುಟ್ಟಸೋಮಪ್ಪ ಮಾತನಾಡಿದರು. ಕ್ರೀಡೆ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿನಿಯರಿಗೆ ಬಹುಮಾನ ವಿತರಿಸಲಾಯಿತು.

ವಿದ್ಯಾರ್ಥಿನಿಯರಾದ ಪೂರ್ಣಮೃತ ಸ್ವಾಗತಿಸಿದರು, ದೀಕ್ಷಿತಾ ಹಾಗೂ ವೇದ ನಿರೂಪಿಸಿದರು ಮತ್ತು ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಅಧಿಕಾರಿ ಆಶಾರಾಣಿ ವಾರ್ಷಿಕ ವರದಿ ಮಂಡಿಸಿದರು.

ಸರ್ಕಾರಿ ಪಾಲಿಟೆಕ್ನಿಕ್ ಪ್ರಾಂಶುಪಾಲ ಎಂ.ಎಸ್.ಚಂದ್ರಕಾಂತ್, ಸಿವಿಲ್ ವಿಭಾಗಾಧಿಕಾರಿ ಜಯರಾಮ್, ಶಿವರಾಂ ಎನ್.ಆರ್, ಕಚೇರಿ ಅಧೀಕ್ಷಕಿ ಜಯಲಕ್ಷ್ಮಿ, ಕ್ರೀಡಾ ಕಾರ್ಯದರ್ಶಿ ಸತ್ಯನ್ವೇಶ್, ಶಿಲ್ಪ ಲಕ್ಷ್ಮೀಶ್, ಸುಮತಿ, ರಂಜಿತಾ, ದರ್ಶನ್, ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಾದ ನಿಶಾ, ಸೋನಾ, ಸ್ನೇಹಾ, ಹರ್ಷಿತಾ, ಧನಲಕ್ಷ್ಮಿ, ಇತರರು ಇದ್ದರು.