ಸಾರಾಂಶ
ಕೊಪ್ಪ ತಾಪಂ ಸಭಾಂಗಣದಲ್ಲಿ ನಡೆದ ಗ್ಯಾರಂಟಿ ಅನುಷ್ಠಾನ ಸಮಿತಿ ಸಭೆ
ಕನ್ನಡಪ್ರಭ ವಾರ್ತೆ, ಕೊಪ್ಪಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಕೊಪ್ಪ ತಾಲೂಕಿನಲ್ಲಿ ಪ್ರಗತಿಯನ್ನು ಸಾಧಿಸಿದೆ ಎಂದು ಕೊಪ್ಪ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಓಣಿತೋಟ ರತ್ನಾಕರ್ ಹೇಳಿದರು.ಶನಿವಾರ ಕೊಪ್ಪ ತಾಪಂ ಸಭಾಂಗಣದಲ್ಲಿ ನಡೆದ ಗ್ಯಾರಂಟಿ ಅನುಷ್ಠಾನ ಸಮಿತಿ ಸಭೆಯಲ್ಲಿ ಮಾಹಿತಿ ನೀಡಿ ಮಾತನಾಡಿದ ಅವರು ಗೃಹಲಕ್ಷ್ಮಿ ಯೋಜನೆಯಡಿ ೧೮ ಸಾವಿರಕ್ಕೂ ಹೆಚ್ಚು ಕುಟುಂಬಗಳಿಗೆ ಪ್ರತಿ ತಿಂಗಳು ₹೨೦೦೦ ಜಮಾ ಮಾಡಿ ಜುಲೈ ತಿಂಗಳಿನ ಅಂತ್ಯದವರೆಗೆ ಫಲಾನುಭವಿಗಳ ಅಕೌಂಟ್‌ಗೆ ಜಮಾ ಆಗಿರುತ್ತದೆ. ಆಗಸ್ಟ್ ಮತ್ತು ಸೆಪ್ಟೆಂಬರ್ ಹಾಗೂ ಜುಲೈ ತಿಂಗಳಿನಲ್ಲಿ ಉಳಿದಿರುವ ೭ ಸಾವಿರ ಫಲಾನುಭವಿಗಳಿಗೆ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಿನ ಹಣವನ್ನು ಈ ತಿಂಗಳ ಅಂತ್ಯದ ಒಳಗಾಗಿ ಜಮಾ ಮಾಡಲಾಗುತ್ತದೆ.ಗೃಹಜ್ಯೋತಿ ಯೋಜನೆಯಡಿ ೨೨,೦೦೦ ಕ್ಕೂ ಹೆಚ್ಚು ಕುಟುಂಬಗಳು ಈ ಸೌಲಭ್ಯ ಪಡೆಯುತ್ತಿದ್ದಾರೆ. ಒಟ್ಟು ೧೬೧೫.೪೩ ಲಕ್ಷ ಫಲಾನುಭವಿಗಳ ಪರವಾಗಿ ಸರ್ಕಾರ ಜಮಾ ಮಾಡಿದೆ. ಅನ್ನಭಾಗ್ಯ ಯೋಜನೆಯಡಿ ನಮ್ಮ ತಾಲೂಕಿನಲ್ಲಿ ೧೫,೦೦೦ ಕ್ಕೂ ಹೆಚ್ಚು ಫಲಾನುಭವಿಗಳಿಗೆ ಡಿಸೆಂಬರ್ ೨೪ ರವರೆಗೆ ೫ ಕೆಜಿ ಅಕ್ಕಿ ಬದಲಿಗೆ ಫಲಾನುಭವಿಗಳ ಖಾತೆಗೆ ಒಟ್ಟು ₹ ೭ ಕೋಟಿ ೨೨ ಲಕ್ಷ ೭೮ ಸಾವಿರ ಜಮಾವಾಗಿರುತ್ತದೆ. ಫೆಬ್ರವರಿ ೨೫ ರಿಂದ ಸೆಪ್ಟೆಂಬರ್ ೨೫ರ ಅಂತ್ಯದವರೆಗೆ ೧೮,೯೨೭.೧೫ ಕ್ವಿಂಟಲ್ ಅಕ್ಕಿ ಡಿಬಿಟಿ ಬದಲಿಗೆ ಅಕ್ಕಿ ವಿತರಣೆ ಆಗಿರುತ್ತದೆ.
ಶಕ್ತಿ ಯೋಜನೆಯಡಿ ಆಗಸ್ಟ್ ತಿಂಗಳ ಅಂತ್ಯದವರೆಗೆ ಚಿಕ್ಕಮಗಳೂರು, ಶೃಂಗೇರಿ, ನ.ರಾ. ಪುರ, ಕೊಪ್ಪ ತಾಲೂಕಿನಲ್ಲಿ ಪ್ರಯಾಣಿಸಿರವ ಒಟ್ಟು ಮಹಿಳೆಯರ ಸಂಖ್ಯೆ ೨,೫೪,೮೭,೦೦೦ ಆಗಿದೆ. ಕೆಎಸ್.ಆರ್.ಟಿಸಿಗೆ ಆದಾಯ ₹೯೦,೧೨,೩೮,೦೦೦ ಜಮೆಯಾಗಿರುತ್ತದೆ.ಯುವನಿಧಿ ಯೋಜನೆಯಡಿ ಜುಲೈ ೨೫ ರ ಅಂತ್ಯದವರೆಗೆ ನಮ್ಮ ತಾಲೂಕಿನಲ್ಲಿ ೨,೭೧೩ ಪದವೀಧರರು, ಡಿಪ್ಲೊಮೋ ಆದವರಿಗೆ ಜಮೆಯಾಗಿರುವ ಒಟ್ಟು ಮೊತ್ತ ₹೮೧,೩೪,೫೦೦ ಆಗಿರುತ್ತದೆ. ಈ ಎಲ್ಲಾ ಯೋಜನೆಗಳು ಸಮರ್ಪಕವಾಗಿ ಜಾರಿ ಆಗಲು ಕರ್ನಾಟಕ ಸರ್ಕಾರದ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವರು, ಶೃಂಗೇರಿ ಶಾಸಕ ಟಿ.ಡಿ. ರಾಜೇಗೌಡ, ತಾಲೂಕು ಅನುಷ್ಠಾನ ಸಮಿತಿ ಅಧ್ಯಕ್ಷ, ಸದಸ್ಯರು ಹಾಗೂ ಎಲ್ಲಾ ಅಧಿಕಾರಿ ಮಿತ್ರರಿಗೆ ಅಭಿನಂದನೆ ತಿಳಿಸಿದರು.