ವೈಯಕ್ತಿಕಗೊಳಿಸಿದ ಶಸ್ತ್ರಚಿಕಿತ್ಸಾ ಯೋಜನೆಯಿಂದ ಸಂಕೀರ್ಣ ದೈಹಿಕ ಸವಾಲುಗಳಿದ್ದ ರೋಗಿಗೆ ಲೈಂಗಿಕ ಸಾಮರ್ಥ್ಯ ಮರುಪ್ರಾಪ್ತಿ ಹಾಗೂ ಜೀವನಮಟ್ಟ ಸುಧಾರಣೆ

ಬೆಂಗಳೂರು: ಪೋಲಿಯೋ ಬಳಿಕದ ಪೆಲ್ವಿಕ್ ಡಿಫಾರ್ಮಿಟಿ (ಶ್ರೋಣಿಯ ವಿರೂಪತೆ), ಟೈಪ್-2 ಡಯಾಬಿಟಿಸ್ ಮತ್ತು ದೀರ್ಘಕಾಲದ ನಿಮಿರು ದೌರ್ಬಲ್ಯದಿಂದ (ಎರೆಕ್ಟೈಲ್ ಡಿಸ್‌ಫಂಕ್ಷನ್) ಬಳಲುತ್ತಿದ್ದ 50 ವರ್ಷದ ವ್ಯಕ್ತಿಗೆ, ಬೆಂಗಳೂರಿನ ''ಮಿಲನ್ ಫರ್ಟಿಲಿಟಿ ಆ್ಯಂಡ್ ಬರ್ತಿಂಗ್ ಆಸ್ಪತ್ರೆ''ಯಲ್ಲಿ ಯಶಸ್ವಿಯಾಗಿ ''ಪೆನೈಲ್ ಪ್ರೊಸ್ಥೆಸಿಸ್ ಇಂಪ್ಲಾಂಟೇಶನ್'' ಶಸ್ತ್ರಚಿಕಿತ್ಸೆ ನೆರವೇರಿಸಲಾಗಿದೆ. ಆಸ್ಪತ್ರೆಯ ಮುಖ್ಯ ಯುರೋ-ಆಂಡ್ರಾಲಜಿಸ್ಟ್ ಹಾಗೂ ಯುರೋಲಾಜಿಕಲ್ ಸರ್ಜನ್ ಡಾ. ಪ್ರವೀಣ್ ಬಿ. ಜೋಶಿ ಅವರ ನೇತೃತ್ವದಲ್ಲಿ ಈ ಸಂಕೀರ್ಣ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಪೂರೈಸಲಾಗಿದೆ.ಕಳೆದ ಹಲವು ವರ್ಷಗಳಿಂದ ನಿಮಿರು ದೌರ್ಬಲ್ಯದಿಂದ ಬಳಲುತ್ತಿದ್ದ ರೋಗಿಯ ಪರಿಸ್ಥಿತಿ ಇತ್ತೀಚೆಗೆ ತೀರಾ ಹದಗೆಟ್ಟಿತ್ತು. 18 ವರ್ಷಗಳ ಹಿಂದೆಯೇ ಅವರಿಗೆ ಟೈಪ್-2 ಡಯಾಬಿಟಿಸ್ ಮೆಲ್ಲಿಟಸ್ ಇರುವುದು ಪತ್ತೆಯಾಗಿದ್ದು, ನಿಯಮಿತವಾಗಿ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದರು. ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಅವರ ಮಧುಮೇಹ ನಿಯಂತ್ರಣದಲ್ಲಿತ್ತು ಮತ್ತು ಗ್ಲೈಕೇಟೆಡ್ ಹಿಮೋಗ್ಲೋಬಿನ್ (HbA1c) ಮಟ್ಟ ಶೇ.7.2 ರಷ್ಟಿತ್ತು.ಈ ಹಿಂದೆ ನೀಡಲಾಗಿದ್ದ ಓರಲ್ ಫಾಸ್ಫೋಡಿಸ್ಟೆರೇಸ್ ಟೈಪ್ 5 ಇನ್ಹಿಬಿಟರ್ಸ್ ಮತ್ತು ಲೋ-ಇಂಟೆನ್ಸಿಟಿ ಎಕ್ಸ್‌ಟ್ರಾಕಾರ್ಪೋರಿಯಲ್ ಶಾಕ್‌ವೇವ್ ಥೆರಪಿಯಂತಹ ಚಿಕಿತ್ಸೆಗಳು ಯಾವುದೇ ಗಮನಾರ್ಹ ಪ್ರಯೋಜನ ನೀಡಿರಲಿಲ್ಲ. ಅಲ್ಲದೆ, ಇಂಟ್ರಾಕಾವೆರ್ನೋಸಲ್ ಇಂಜೆಕ್ಷನ್ ಥೆರಪಿಯನ್ನು ಕೂಡ ನೀಡಲಾಗಿತ್ತಾದರೂ, ಅದರಿಂದಲೂ ರೋಗಿಗೆ ದೀರ್ಘಕಾಲದ ತೃಪ್ತಿದಾಯಕ ಪರಿಹಾರ ಸಿಕ್ಕಿರಲಿಲ್ಲ.ಬಾಲ್ಯದಲ್ಲಿ ಕಾಡಿದ್ದ ಪೋಲಿಯೊದಿಂದಾಗಿ ಅವರ ಬಲಗಾಲಿನಲ್ಲಿ ದೌರ್ಬಲ್ಯ ಹಾಗೂ ವಿರೂಪತೆ ಉಂಟಾಗಿತ್ತು. ಕ್ಲಿನಿಕಲ್ ತಪಾಸಣೆ ವೇಳೆ, ಪೀಡಿತ ಕಾಲಿನ ಸ್ನಾಯುಗಳ ಸವೆತ, ಪೆಲ್ವಿಕ್ ಅಸಿಮ್ಮೆಟ್ರಿ ಮತ್ತು ಅದಕ್ಕೆ ತಕ್ಕಂತೆ ದೇಹದ ಭಂಗಿಯಲ್ಲಿ ಬದಲಾವಣೆಗಳು ಕಂಡುಬಂದಿದ್ದವು. ಈ ಎಲ್ಲಾ ಮಾಂಸಖಂಡ ಮತ್ತು ಮೂಳೆಗಳ ಮಿತಿಗಳ ಹೊರತಾಗಿಯೂ, ರೋಗಿಯು ದೈಹಿಕವಾಗಿ ಸ್ವತಂತ್ರವಾಗಿ ಓಡಾಡಿಕೊಂಡಿದ್ದರು.ಜನನಾಂಗದ ತಪಾಸಣೆಯ ವೇಳೆ, ಪೆನೈಲ್ ಚರ್ಮ ಸಾಮಾನ್ಯವಾಗಿದ್ದು, ಉದ್ದ ಕೂಡ ಸಮರ್ಪಕವಾಗಿತ್ತು. ಜೊತೆಗೆ, ಪೇರೋನೀಸ್ ಕಾಯಿಲೆ ಅಥವಾ ಕಾರ್ಪೊರಲ್ ಫೈಬ್ರೋಸಿಸ್‌ನ ಯಾವುದೇ ಲಕ್ಷಣಗಳು ಇರಲಿಲ್ಲ. ಎರಡೂ ವೃಷಣಗಳು ಸ್ಕ್ರೋಟಮ್‌ನಲ್ಲಿ (ವೃಷಣ ಚೀಲ) ಸರಿಯಾದ ಸ್ಥಾನದಲ್ಲಿದ್ದವು. ಆದರೆ, ಶ್ರೋಣಿಯ ಅಸಮತೋಲನ ಮತ್ತು ದೇಹದ ವಿಭಿನ್ನ ಅನುಪಾತಗಳಿಂದಾಗಿ ಪ್ರೊಸ್ಥೆಸಿಸ್‌ನ ಗಾತ್ರ, ಅದನ್ನು ಅಳವಡಿಸುವ ಸ್ಥಾನ ಮತ್ತು ಶಸ್ತ್ರಚಿಕಿತ್ಸಾ ವಿಧಾನದ ಬಗ್ಗೆ ವಿಶೇಷವಾಗಿ ಗಮನಹರಿಸಬೇಕಾಗಿತ್ತು.ಕನ್ಸರ್ವೇಟಿವ್ ಚಿಕಿತ್ಸಾ ವಿಧಾನಗಳು ವಿಫಲವಾದ ಕಾರಣ ಹಾಗೂ ರೋಗಿಯು ಶಾಶ್ವತ ಪರಿಹಾರವನ್ನು ಬಯಸಿದ್ದರಿಂದ, ಪೆನೈಲ್ ಪ್ರೊಸ್ಥೆಸಿಸ್ ಇಂಪ್ಲಾಂಟೇಶನ್‌ಗೆ ಶಿಫಾರಸು ಮಾಡಲಾಯಿತು. ಶಸ್ತ್ರಚಿಕಿತ್ಸೆಯ ಪ್ರಯೋಜನಗಳು, ಅಪಾಯಗಳು, ಸಂಭವನೀಯ ತೊಡಕುಗಳು ಹಾಗೂ ಶಸ್ತ್ರಚಿಕಿತ್ಸೆಯ ನಂತರದ ವಾಸ್ತವಿಕ ನಿರೀಕ್ಷೆಗಳ ಕುರಿತು ರೋಗಿಗೆ ಸಮಗ್ರ ಕೌನ್ಸೆಲಿಂಗ್ ನೀಡಲಾಯಿತು. ಅವರ ವಿಭಿನ್ನ ಪೆಲ್ವಿಕ್ ಅನ್ಯಾಟಮಿಯಿಂದಾಗಿ (ಶ್ರೋಣಿಯ ರಚನೆ) ಎದುರಾಗಬಹುದಾದ ತಾಂತ್ರಿಕ ಸವಾಲುಗಳು ಹಾಗೂ ವೈಯಕ್ತಿಕಗೊಳಿಸಿದ ಶಸ್ತ್ರಚಿಕಿತ್ಸಾ ಯೋಜನೆಯ ಅಗತ್ಯತೆಯ ಬಗ್ಗೆ ವಿಶೇಷ ಒತ್ತು ನೀಡಲಾಯಿತು.ನಿಮಿರು ದೌರ್ಬಲ್ಯಕ್ಕೆ ಪೆನೈಲ್ ಪ್ರೊಸ್ಥೆಸಿಸ್ ಇಂಪ್ಲಾಂಟೇಶನ್ ಒಂದು ಮಾನ್ಯತೆ ಪಡೆದ ಚಿಕಿತ್ಸಾ ವಿಧಾನವಾಗಿದ್ದರೂ, ಈ ಪ್ರಕರಣವು ಪೋಲಿಯೋ ನಂತರದ ಪೆಲ್ವಿಕ್ ವಿರೂಪತೆ, ಬದಲಾದ ಅನ್ಯಾಟಮಿ ಮತ್ತು ಡಯಾಬಿಟಿಸ್‌ನ ಸಂಯೋಜನೆಯಿಂದಾಗಿ ದೊಡ್ಡ ಪ್ರಮಾಣದ ಕ್ಲಿನಿಕಲ್ ಸವಾಲು ಎದುರಾಗಿತ್ತು. ಇಲ್ಲಿ ಶಸ್ತ್ರಚಿಕಿತ್ಸೆಯ ಪ್ರಕ್ರಿಯೆಗಿಂತಲೂ, ರೋಗಿಯ ದೈಹಿಕ ಮತ್ತು ವೈದ್ಯಕೀಯ ಸ್ಥಿತಿಗೆ ಅನುಗುಣವಾಗಿ ಶಸ್ತ್ರಚಿಕಿತ್ಸಾ ವಿಧಾನವನ್ನು ಅಳವಡಿಸಿಕೊಳ್ಳುವುದು ಹೆಚ್ಚು ಸಂಕೀರ್ಣವಾಗಿತ್ತು.ರೋಗಿಯ ಒಪ್ಪಿಗೆಯ ನಂತರ ಶಸ್ತ್ರಚಿಕಿತ್ಸೆಗೆ ದಿನಾಂಕ ನಿಗದಿಪಡಿಸಲಾಯಿತು. ಡಾ. ಪ್ರವೀಣ್ ಮತ್ತು ಅವರ ತಂಡವು ಅನ್ಯಾಟಮಿಕಲ್ ಸೂಕ್ತತೆ, ಕ್ರಿಯಾತ್ಮಕ ಅಗತ್ಯತೆಗಳು ಮತ್ತು ನಿರೀಕ್ಷಿತ ಫಲಿತಾಂಶಗಳನ್ನು ಅಂದಾಜಿಸಲು ವಿವರವಾದ ಪ್ರಿ-ಆಪರೇಟಿವ್ (ಶಸ್ತ್ರಚಿಕಿತ್ಸಾಪೂರ್ವ) ಮೌಲ್ಯಮಾಪನವನ್ನು ನಡೆಸಿತು. ರೋಗಿಯ ದೈಹಿಕ ರಚನೆ, ಇಂಪ್ಲಾಂಟ್ ಸ್ಥಾನ, ದೀರ್ಘಕಾಲದ ಆರಾಮ ಮತ್ತು ಕ್ರಿಯಾತ್ಮಕ ನಿರೀಕ್ಷೆಗಳಂತಹ ಅಂಶಗಳನ್ನು ಪರಿಗಣಿಸಿ ಎಚ್ಚರಿಕೆಯಿಂದ ಪ್ರೊಸ್ಥೆಸಿಸ್ ಅನ್ನು ಆಯ್ಕೆ ಮಾಡಲಾಯಿತು.ಶಸ್ತ್ರಚಿಕಿತ್ಸೆಯ ವೇಳೆ, ಬಿಗಿತವನ್ನು ಒದಗಿಸುವ ಸಲುವಾಗಿ ಶಿಶ್ನದೊಳಗೆ ಇರಿಸಲಾಗುವ ಪ್ರೊಸ್ಥೆಟಿಕ್ ಸಿಲಿಂಡರ್‌ಗಳನ್ನು ವೈದ್ಯರ ತಂಡ ಯಶಸ್ವಿಯಾಗಿ ಅಳವಡಿಸಿತು. ರೋಗಿಯ ಶ್ರೋಣಿಯ ಅಸಮತೋಲನ ಮತ್ತು ವಿಭಿನ್ನ ದೈಹಿಕ ಅನುಪಾತಗಳ ನಡುವೆಯೂ ಸರಿಯಾದ ಸ್ಥಾನದಲ್ಲಿ ಇದನ್ನು ಅಳವಡಿಸಲು ವಿಶೇಷ ಗಮನ ಹರಿಸಲಾಯಿತು. ರೋಗಿಯ ಮಧುಮೇಹ ಸ್ಥಿತಿಯನ್ನು ಪರಿಗಣಿಸಿ, ಶಸ್ತ್ರಚಿಕಿತ್ಸೆಯ ಉದ್ದಕ್ಕೂ ಕಟ್ಟುನಿಟ್ಟಾದ ಸೋಂಕು ನಿಯಂತ್ರಣ ಕ್ರಮಗಳನ್ನು ಪಾಲಿಸಲಾಯಿತು. ಜೊತೆಗೆ ತ್ವರಿತವಾಗಿ ಗುಣಮುಖರಾಗಲು ಪೂರಕವಾದ ನಿಖರ ಶಸ್ತ್ರಚಿಕಿತ್ಸಾ ತಂತ್ರಗಳನ್ನು ಅಳವಡಿಸಿಕೊಳ್ಳಲಾಯಿತು.ಹೆಚ್ಚುವರಿ ದೈಹಿಕ ಸವಾಲುಗಳಿದ್ದ ಕಾರಣ ಶಸ್ತ್ರಚಿಕಿತ್ಸೆಯು ಸುಮಾರು 150 ನಿಮಿಷಗಳ ಕಾಲ ನಡೆಯಿತು; ಇದು ಸಾಮಾನ್ಯ ಪೆನೈಲ್ ಪ್ರೊಸ್ಥೆಸಿಸ್ ಇಂಪ್ಲಾಂಟೇಶನ್‌ಗಿಂತ ಸ್ವಲ್ಪ ಹೆಚ್ಚು ಸಮಯ ತೆಗೆದುಕೊಂಡಿತು. ಸವಾಲುಗಳ ಹೊರತಾಗಿಯೂ, ಯಾವುದೇ ತೊಡಕುಗಳಿಲ್ಲದೆ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಯಿತು ಮತ್ತು ರಕ್ತಸ್ರಾವ ಕನಿಷ್ಠ ಪ್ರಮಾಣದಲ್ಲಿತ್ತು.ಶಸ್ತ್ರಚಿಕಿತ್ಸೆಯ ನಂತರ ರೋಗಿ ತ್ವರಿತವಾಗಿ ಚೇತರಿಸಿಕೊಂಡರು. ಶಸ್ತ್ರಚಿಕಿತ್ಸೆಯ ಬಳಿಕದ ಸಣ್ಣಪುಟ್ಟ ನೋವುಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲಾಯಿತು. ಆಸ್ಪತ್ರೆಯಲ್ಲಿದ್ದಾಗ ಗಾಯ ಒಣಗುವಿಕೆ, ರಕ್ತಸ್ರಾವ, ಮೂತ್ರ ವಿಸರ್ಜನೆ ಅಥವಾ ಇಂಪ್ಲಾಂಟ್‌ಗೆ ಸಂಬಂಧಿಸಿದ ಯಾವುದೇ ಸಮಸ್ಯೆಗಳು ಎದುರಾಗಲಿಲ್ಲ. ಗಾಯದ ಆರೈಕೆ, ಔಷಧಗಳು, ದೈಹಿಕ ಚಟುವಟಿಕೆಯ ನಿರ್ಬಂಧಗಳು ಮತ್ತು ಫಾಲೋ-ಅಪ್ ಆರೈಕೆಯ ಬಗ್ಗೆ ವಿವರವಾದ ಸೂಚನೆಗಳನ್ನು ನೀಡಿ ಶಸ್ತ್ರಚಿಕಿತ್ಸೆಯ ಎರಡನೇ ದಿನವೇ ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಯಿತು.ಎರಡು ವಾರಗಳ ಫಾಲೋ-ಅಪ್ ತಪಾಸಣೆಯ ವೇಳೆ, ಶಸ್ತ್ರಚಿಕಿತ್ಸೆಯ ಗಾಯ ಸಂಪೂರ್ಣವಾಗಿ ವಾಸಿಯಾಗಿತ್ತು ಮತ್ತು ಸೋಂಕು, ಸವೆತ, ಸಾಧನದ ಸ್ಥಳಾಂತರ (device migration) ಅಥವಾ ಚರ್ಮಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಗಳು ಕಂಡುಬರಲಿಲ್ಲ. ತರುವಾಯದ ತಪಾಸಣೆಗಳಲ್ಲಿ, ಇಂಪ್ಲಾಂಟ್ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿತ್ತು ಮತ್ತು ಪೆನೈಲ್ ಬಿಗಿತ ಸುಧಾರಿಸಿದೆ, ಲೈಂಗಿಕ ಸಾಮರ್ಥ್ಯ ಮರುಪ್ರಾಪ್ತಿಯಾಗಿದೆ ಹಾಗೂ ಚಿಕಿತ್ಸೆಯಿಂದ ತೃಪ್ತಿ ಸಿಕ್ಕಿದೆ ಎಂದು ರೋಗಿ ತಿಳಿಸಿದರು. ಪ್ರೊಸ್ಥೆಸಿಸ್‌ಗೆ ಸಂಬಂಧಿಸಿದ ಯಾವುದೇ ತೊಡಕುಗಳು ಕಂಡುಬರಲಿಲ್ಲ.ಈ ಕುರಿತು ಮಾತನಾಡಿದ ಮಿಲನ್ ಫರ್ಟಿಲಿಟಿ ಆ್ಯಂಡ್ ಬರ್ತಿಂಗ್ ಆಸ್ಪತ್ರೆಯ ಮುಖ್ಯ ಯುರೋ-ಆಂಡ್ರಾಲಜಿಸ್ಟ್ ಹಾಗೂ ಯುರೋಲಾಜಿಕಲ್ ಸರ್ಜನ್ ಡಾ. ಪ್ರವೀಣ್ ಬಿ. ಜೋಶಿ, "ಪೆನೈಲ್ ಪ್ರೊಸ್ಥೆಸಿಸ್ ಇಂಪ್ಲಾಂಟೇಶನ್ ಒಂದು ಸುಸ್ಥಾಪಿತ ಪ್ರಕ್ರಿಯೆಯಾಗಿದೆ; ಆದರೂ ಪ್ರತಿ ರೋಗಿಯೂ ವಿಶಿಷ್ಟ ಸವಾಲುಗಳನ್ನು ಒಡ್ಡುತ್ತಾರೆ. ಈ ಪ್ರಕರಣದಲ್ಲಿ, ಪೋಲಿಯೋ ನಂತರದ ಪೆಲ್ವಿಕ್ ವಿರೂಪತೆ ಮತ್ತು ಮಧುಮೇಹದ ಹಿನ್ನೆಲೆಯಲ್ಲಿ ವಿವರವಾದ ದೈಹಿಕ ಮೌಲ್ಯಮಾಪನ, ಎಚ್ಚರಿಕೆಯ ಯೋಜನೆ ಮತ್ತು ವೈಯಕ್ತಿಕಗೊಳಿಸಿದ ಶಸ್ತ್ರಚಿಕಿತ್ಸಾ ತಂತ್ರದ ಅಗತ್ಯವಿತ್ತು. ಇಂತಹ ಪ್ರಕರಣಗಳ ಯಶಸ್ಸು ರೋಗಿಯ ನಿರ್ದಿಷ್ಟ ಅಗತ್ಯಗಳಿಗೆ ತಕ್ಕಂತೆ ಮಾನ್ಯತೆ ಪಡೆದ ತಂತ್ರಗಳನ್ನು ಅಳವಡಿಸಿಕೊಳ್ಳುವುದರ ಮೇಲೆ ಅವಲಂಬಿತವಾಗಿರುತ್ತದೆ. ನಿಖರವಾದ ಯೋಜನೆ, ಎಚ್ಚರಿಕೆಯ ಶಸ್ತ್ರಚಿಕಿತ್ಸೆ ಮತ್ತು ಸಮಗ್ರ ಪೋಸ್ಟ್-ಆಪರೇಟಿವ್ ಆರೈಕೆಯೊಂದಿಗೆ, ನಾವು ಯಶಸ್ವಿ ಫಲಿತಾಂಶವನ್ನು ಸಾಧಿಸಲು ಮತ್ತು ರೋಗಿಯ ಲೈಂಗಿಕ ಸಾಮರ್ಥ್ಯ ಹಾಗೂ ಆತ್ಮವಿಶ್ವಾಸವನ್ನು ಮರುಸ್ಥಾಪಿಸಲು ಸಾಧ್ಯವಾಯಿತು " ಎಂದು ತಿಳಿಸಿದರು.ಔಷಧಗಳು ಅಥವಾ ಇತರೆ ಚಿಕಿತ್ಸೆಗಳಿಗೆ ಸಮರ್ಪಕವಾಗಿ ಸ್ಪಂದಿಸದ ನಿಮಿರು ದೌರ್ಬಲ್ಯವುಳ್ಳ ಪುರುಷರಿಗೆ ಪೆನೈಲ್ ಪ್ರೊಸ್ಥೆಸಿಸ್ ಇಂಪ್ಲಾಂಟೇಶನ್ ಈಗಲೂ ಒಂದು ಪರಿಣಾಮಕಾರಿ ಚಿಕಿತ್ಸಾ ಆಯ್ಕೆಯಾಗಿದೆ. ಈ ಶಸ್ತ್ರಚಿಕಿತ್ಸೆಯು ಹೆಚ್ಚಿನ ಯಶಸ್ಸು ಮತ್ತು ತೃಪ್ತಿದಾಯಕ ಫಲಿತಾಂಶಗಳನ್ನು ನೀಡುತ್ತದೆಯಾದರೂ, ಡಯಾಬಿಟಿಸ್, ನರಸ್ನಾಯುಕ ಅಸ್ವಸ್ಥತೆಗಳು ಅಥವಾ ಮೂಳೆಗಳ ವಿರೂಪತೆಯಂತಹ ಪರಿಸ್ಥಿತಿಗಳಿರುವ ರೋಗಿಗಳಿಗೆ ವಿಶೇಷ ಕಾಳಜಿ ಮತ್ತು ಕಸ್ಟಮೈಸ್ಡ್ (ರೋಗಿಗೆ ತಕ್ಕಂತೆ ಬದಲಾಯಿಸಿದ) ಶಸ್ತ್ರಚಿಕಿತ್ಸಾ ವಿಧಾನಗಳ ಅಗತ್ಯವಿರುತ್ತದೆ.ಪೋಲಿಯೋ ನಂತರದ ಮೂಳೆ ಹಾಗೂ ಮಾಂಸಖಂಡಗಳ ವಿರೂಪತೆಯು ಪೆಲ್ವಿಕ್ ಜೋಡಣೆಯಲ್ಲಿನ ಬದಲಾವಣೆಗಳಿಗೆ ಕಾರಣವಾಗಬಹುದು. ಇದರಿಂದ ಪೆಲ್ವಿಕ್ ಪ್ರದೇಶವನ್ನು ಒಳಗೊಂಡ ಶಸ್ತ್ರಚಿಕಿತ್ಸೆಗಳ ವೇಳೆ ಹೆಚ್ಚುವರಿ ಮುನ್ನೆಚ್ಚರಿಕೆ ವಹಿಸಬೇಕಾಗುತ್ತದೆ. ಇದೇ ರೀತಿಯ ಸಂಕೀರ್ಣ ನಿಮಿರು ದೌರ್ಬಲ್ಯ ಪ್ರಕರಣಗಳನ್ನು ವೈದ್ಯರ ತಂಡ ಈ ಹಿಂದೆ ನಿಭಾಯಿಸಿದೆಯಾದರೂ, ಪೋಲಿಯೋ ನಿರ್ಮೂಲನೆಯಾಗುತ್ತಿರುವ ಕಾರಣದಿಂದಾಗಿ ಪೋಲಿಯೋ ಸಂಬಂಧಿತ ಬದಲಾವಣೆಗಳನ್ನು ಒಳಗೊಂಡ ಇಂತಹ ಪ್ರಕರಣಗಳು ಇದೀಗ ತೀರಾ ಅಪರೂಪವಾಗುತ್ತಿವೆ.ಮಿಲನ್ ಫರ್ಟಿಲಿಟಿ ಆ್ಯಂಡ್ ಬರ್ತಿಂಗ್ ಆಸ್ಪತ್ರೆಯ ಚೀಫ್ ಆಪರೇಟಿಂಗ್ ಆಫೀಸರ್ (COO) ಡಾ. ದೀಪನ್ ಶಾ ಮಾತನಾಡಿ, "ಈ ಯಶಸ್ವಿ ಶಸ್ತ್ರಚಿಕಿತ್ಸೆಯು, ಸಂಕೀರ್ಣ ಸಂತಾನೋತ್ಪತ್ತಿ ಮತ್ತು ಲೈಂಗಿಕ ಆರೋಗ್ಯದ ಸಮಸ್ಯೆಗಳನ್ನು ಹೊಂದಿರುವ ಪುರುಷರಿಗೆ ಸುಧಾರಿತ ಹಾಗೂ ಸಮಗ್ರ ''ಆಂಡ್ರಾಲಜಿ'' ಆರೈಕೆಯನ್ನು ಒದಗಿಸುವ ಮಿಲನ್ ಆಸ್ಪತ್ರೆಯ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಪುರುಷರ ಬಂಜೆತನ, ನಿಮಿರು ದೌರ್ಬಲ್ಯ, ಹಾರ್ಮೋನ್ ಅಸ್ವಸ್ಥತೆಗಳು ಮತ್ತು ಪೆನೈಲ್ ಪ್ರೊಸ್ಥೆಸಿಸ್ ಇಂಪ್ಲಾಂಟೇಶನ್‌ನಂತಹ ಸುಧಾರಿತ ಚಿಕಿತ್ಸೆಗಳ ಮೂಲಕ, ರೋಗಿಗಳು ತಮ್ಮ ದೈಹಿಕ ಸಾಮರ್ಥ್ಯ, ಆತ್ಮವಿಶ್ವಾಸ ಮತ್ತು ಜೀವನದ ಗುಣಮಟ್ಟವನ್ನು ಮರಳಿ ಪಡೆಯಲು ಸಹಾಯ ಮಾಡುವ ವೈಯಕ್ತಿಕಗೊಳಿಸಿದ ಚಿಕಿತ್ಸಾ ಪರಿಹಾರಗಳನ್ನು ನಾವು ಒದಗಿಸುವುದನ್ನು ಮುಂದುವರಿಸುತ್ತೇವೆ " ಎಂದರು.ಸಂಕೀರ್ಣ ವೈದ್ಯಕೀಯ ಇತಿಹಾಸ ಹೊಂದಿರುವ ರೋಗಿಗಳಿಗೆ ಚಿಕಿತ್ಸೆ ನೀಡುವಾಗ ವೈಯಕ್ತಿಕಗೊಳಿಸಿದ ಶಸ್ತ್ರಚಿಕಿತ್ಸಾ ಯೋಜನೆ ಮತ್ತು ವಿಶೇಷ ಆರೈಕೆಯ ಮಹತ್ವವನ್ನು ಈ ಪ್ರಕರಣ ಎತ್ತಿ ತೋರಿಸುತ್ತದೆ. ಸೂಕ್ತ ಮೌಲ್ಯಮಾಪನ, ಸುಧಾರಿತ ಶಸ್ತ್ರಚಿಕಿತ್ಸಾ ಪರಿಣತಿ ಮತ್ತು ಸಮಗ್ರ ಪೋಸ್ಟ್-ಆಪರೇಟಿವ್ ನಿರ್ವಹಣೆಯೊಂದಿಗೆ, ಗಂಭೀರ ದೈಹಿಕ ಸವಾಲುಗಳನ್ನು ಹೊಂದಿರುವ ವ್ಯಕ್ತಿಗಳು ಕೂಡ ಯಶಸ್ವಿ ಫಲಿತಾಂಶಗಳನ್ನು ಮತ್ತು ಉತ್ತಮ ಜೀವನಮಟ್ಟವನ್ನು ಸಾಧಿಸಬಹುದು.ರೋಗಿಯ ಪ್ರತಿಕ್ರಿಯೆ ಹೀಗಿದೆ, "ಹಲವು ವರ್ಷಗಳಿಂದ ನನ್ನ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಿದ್ದ ಸಮಸ್ಯೆಯೊಂದಿಗೇ ನಾನು ಹೋರಾಡುತ್ತಿದ್ದೆ. ಈ ಶಸ್ತ್ರಚಿಕಿತ್ಸೆಯು ನನ್ನ ಜೀವನದ ಗುಣಮಟ್ಟದಲ್ಲಿ ಭಾರಿ ಬದಲಾವಣೆ ತಂದಿದೆ. ನನ್ನ ಆತ್ಮವಿಶ್ವಾಸ ಮತ್ತು ಸಹಜ ಜೀವನವನ್ನು ಮರಳಿ ಪಡೆಯಲು ನೆರವಾದ ವೈದ್ಯಕೀಯ ತಂಡಕ್ಕೆ ನಾನು ಆಭಾರಿಯಾಗಿದ್ದೇನೆ " ಎಂದು ಚಿಕಿತ್ಸೆ ಪಡೆದ ರೋಗಿ ಸಂತಸ ವ್ಯಕ್ತಪಡಿಸಿದರು.