ಚಿನ್ನದ ಸರ ನುಂಗಿದ್ದ ಹಸುಗೆ ಯಶಸ್ವಿ ಶಸ್ತ್ರಚಿಕಿತ್ಸೆ

| Published : Nov 29 2023, 01:15 AM IST

ಸಾರಾಂಶ

ಅದರಂತೆ ಕೋಣಂದೂರು ಪಶುವೈದ್ಯ ಡಾ.ಆನಂದ ಅವರ ತಂಡವು ಭಾನುವಾರ ಯಶಸ್ವಿ ಶಸ್ತ್ರ ಚಿಕಿತ್ಸೆ ನಡೆಸಿ, ಹಸುವಿನ ಹೊಟ್ಟೆಯಲ್ಲಿದ್ದ ಚಿನ್ನದ ಸರವನ್ನು ಹೊರತೆಗೆದಿದೆ. ಹಸುವು ಈಗ ಆರೋಗ್ಯವಾಗಿದೆ ಎಂದು ಪಾಲಕರು ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಹೊಸನಗರ

ಗೋಪೂಜೆ ಸಮಯದಲ್ಲಿ ಕೊರಳಿಗೆ ಹಾಕಿದ್ದ ಚಿನ್ನದ ಸರವನ್ನು ಹಸು ನುಂಗಿದ್ದ ಹಿನ್ನೆಲೆ ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆ ನಡೆಸಿ, ಸರವನ್ನು ಹೊರತೆಗೆದ ಪ್ರಕರಣ ತಾಲೂಕಿನ ಮತ್ತಿಮನೆ ಗ್ರಾಮದಲ್ಲಿ ನಡೆದಿದೆ.

ಮತ್ತಿಮನೆ ಸತ್ಯವತಿ ಉಡುಪ ಎಂಬವರು ಗೋಪೂಜೆಯ ಸಮಯದಲ್ಲಿ ಹಸುವಿಗೆ ಸುಮಾರು 12 ಗ್ರಾಮ ತೂಕದ ₹70 ಸಾವಿರ ಮೌಲ್ಯದ ಚಿನ್ನದ ಸರ ಹಾಕಿದ್ದರು. ಹಸುವು ಹೂವಿನ ಸರದ ಜತೆಗೆ ಚಿನ್ನದ ಸರವನ್ನೂ ಜಗಿದು, ನುಂಗಿತ್ತು. ಈ ಕುರಿತಂತೆ ಪಶು ವೈದ್ಯರಲ್ಲಿ ವಿಚಾರಿಸಿದಾಗ ಶಸ್ತ್ರಚಿಕಿತ್ಸೆ ಮೂಲಕ ಸರವನ್ನು ಹೊರತೆಗೆಯಬಹುದು ಎಂದು ಸಲಹೆ ನೀಡಿದ್ದರು.

ಅದರಂತೆ ಕೋಣಂದೂರು ಪಶುವೈದ್ಯ ಡಾ.ಆನಂದ ಅವರ ತಂಡವು ಭಾನುವಾರ ಯಶಸ್ವಿ ಶಸ್ತ್ರ ಚಿಕಿತ್ಸೆ ನಡೆಸಿ, ಹಸುವಿನ ಹೊಟ್ಟೆಯಲ್ಲಿದ್ದ ಚಿನ್ನದ ಸರವನ್ನು ಹೊರತೆಗೆದಿದೆ. ಹಸುವು ಈಗ ಆರೋಗ್ಯವಾಗಿದೆ ಎಂದು ಪಾಲಕರು ತಿಳಿಸಿದ್ದಾರೆ.

- - - -28ಎಚ್‌ಎಸ್‌ಒ01: ಹೂವಿನ ಹಾರದೊಂದಿಗೆ ಚಿನ್ನದ ಸರವನ್ನೂ ಜಗಿದು ನುಂಗಿದ್ದ ಹಸು.