ಸಾರಾಂಶ
- ಎಸ್.ಎಸ್.ನಾರಾಯಣ ಹೆಲ್ತ್ ಆಸ್ಪತ್ರೆ ವೈದ್ಯರ ತಂಡ ಸಾಧನೆ: ಸುನೀಲ್ ಭಂಢಾರಿಗಲ್ ಮಾಹಿತಿ
- - -- - -
- 40 ವರ್ಷ ವಯಸ್ಸಿನ ಚಿತ್ರದುರ್ಗದ ಪುರುಷರೊಬ್ಬರಿಗೆ ಯಶಸ್ವಿ ಶಸ್ತ್ರಚಿಕಿತ್ಸೆ- ಅತ್ಯಂತ ಸಂಕೀರ್ಣ, ಮಹತ್ವದ ಶಸ್ತ್ರಚಿಕಿತ್ಸೆ: ಡಾ.ಆರ್.ಕೆ.ಹನುಮಂತ್ ನಾಯ್ಕ
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ಜಠರ, ಅನ್ನನಾಳ ಹಾನಿಯಾಗಿದ್ದರೂ ರೋಗಿಯ ದೊಡ್ಡ ಕರುಳಿನಿಂದಲೇ ಜಠರ, ಅನ್ನನಾಳ ನಿರ್ಮಿಸಿದ ಎಸ್.ಎಸ್. ನಾರಾಯಣ ಹೆಲ್ತ್ ಆಸ್ಪತ್ರೆ ವೈದ್ಯರ ತಂಡ ಯಶಸ್ವಿ ಆಗಿದೆ ಎಂದು ಆಸ್ಪತ್ರೆ ವ್ಯವಸ್ಥಾಪಕ ನಿರ್ದೇಶಕ ಸುನೀಲ್ ಭಂಢಾರಿಗಲ್ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅತ್ಯುತ್ತಮ ದರ್ಜೆಯ ಚಿಕಿತ್ಸೆ ನೀಡುವಲ್ಲಿ ಹೆಸರುವಾಸಿ ಆಗಿರುವ ಇಲ್ಲಿನ ಎಸ್‌ಎಸ್ ನಾರಾಯಣ ಹೆಲ್ತ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ವೈದ್ಯಕೀಯ ಕ್ಷೇತ್ರದಲ್ಲಿ ಹಲವು ಹೊಸ ಮೈಲಿಗಲ್ಲುಗಳನ್ನು ಸ್ಥಾಪಿಸಿದೆ. ಇಲ್ಲಿನ ವೈದ್ಯರು ರೋಗಿಯೊಬ್ಬರ ದೊಡ್ಡ ಕರುಳಿನ ಭಾಗವನ್ನೇ ಉಪಯೋಗಿಸಿ ಜನರ ಹಾಗೂ ಅನ್ನನಾಳವನ್ನು ನಿರ್ಮಿಸಿದ್ದಾರೆ ಎಂದು ವಿವರ ನೀಡಿದರು.
ಸರ್ಜಿಕಲ್ ಗ್ಯಾಸ್ಕೋಎಂಟರಾಲಜಿಸ್ಟ್ ಡಾ.ಆರ್.ಕೆ.ಹನುಮಂತ್ ನಾಯ್ಕ ಮಾತನಾಡಿ, ಸುಮಾರು 40 ವರ್ಷ ವಯಸ್ಸಿನ ಚಿತ್ರದುರ್ಗದ ಪುರುಷರೊಬ್ಬರು ಕೆಲವು ತಿಂಗಳುಗಳ ಹಿಂದೆ, ಆಮ್ಲೀಯ ಟಾಯ್ಲೆಟ್ ಕ್ಲೀನರ್ ಸೇವಿಸಿ ಗಂಭೀರ ಸ್ಥಿತಿಯಲ್ಲಿ ನಾರಾಯಣ ಹೆಲ್ತ್ ಸೂಪರ್ ಸ್ಪೆಷಾಲಿಟಿ ಸೆಂಟರ್ ಗೆ ದಾಖಲಾಗಿದ್ದರು. ಆಗ ಸರ್ಜಿಕಲ್ ಗ್ಯಾಸ್ಕೋಎಂಟರಾಲಜಿಸ್ಟ್ ಡಾ.ಆರ್.ಕೆ.ಹನುಮಂತ್ ನಾಯ್ಕ ಅವರ ನೇತೃತ್ವದ ತಂಡ ರೋಗಿಯ ಸಂಪೂರ್ಣವಾಗಿ ಸುಟ್ಟು ಹೋದ ಜಠರ ಹಾಗೂ ಅನ್ನನಾಳವನ್ನು ಸುಮಾರು 6 ತಾಸು ಶಸ್ತ್ರಚಿಕಿತ್ಸೆ ಮೂಲಕ ತೆಗೆದು ಹಾಕಿ ರೊಗಿಗೆ ಜೆಜುನೋಸ್ಕೊಮಿ ಫೀಡಿಂಗ್ ಎಂದರೆ ಶಸ್ತ್ರಚಿಕಿತ್ಸೆ ಮೂಲಕ ನೇರವಾಗಿ ಸಣ್ಣ ಕರುಳಿಗೆ ಟ್ಯೂಬ್ ಮೂಲಕ ದ್ರವರೂಪದ ಪೌಷ್ಟಿಕಾಂಶಗಳು, ಔಷಧಗಳು ಮತ್ತು ನೀರನ್ನು ನೇರವಾಗಿ ಕರುಳಿಗೆ ನೀಡುವಂತೆ ಮಾಡಲಾಗಿತ್ತು. ಅಂದು ಆರೋಗ್ಯದಲ್ಲಿ ಚೇತರಿಕೆ ಕಂಡು ಮನೆಗೆ ತೆರಳಿದ್ದರು ಎಂದು ಮಾಹಿತಿ ನೀಡಿದರು.ಇದಾದ ಕೆಲವು ತಿಂಗಳ ನಂತರ ಡಾ.ಹನುಮಂತ ನಾಯ್ಕ ಹಾಗೂ ಅವರ ತಂಡ ಈ ಟ್ಯೂಬ್‌ನ್ನು ತೆಗೆದು ಹಾಕಿ ಜಠರ ಹಾಗೂ ಅನ್ನನಾಳವನ್ನು ರೋಗಿಯ ದೊಡ್ಡ ಕರುಳಿನ ಭಾಗವನ್ನು ಉಪಯೋಗಿಸಿಕೊಂಡು ನಿರ್ಮಿಸಿದ್ದಾರೆ. ಇದರಿಂದಾಗಿ ಅವರು ಸಾಮಾನ್ಯರಂತೆ ಆಹಾರ ಸೇವನೆ ಮಾಡಬಹುದಾಗಿದೆ ಎಂದರು.
ಸುಮಾರು 12 ತಾಸು ನಡೆದ ಅತ್ಯಂತ ಸಂಕೀರ್ಣ ಹಾಗೂ ಮಹತ್ವದ ಈ ಶಸ್ತ್ರಚಿಕಿತ್ಸೆ ಈಸೋಫೇಗಸ್ ಕೊಲೊಪಾಸಿಯನ್ನು ಯಶಸ್ವಿಯಾಗಿ ಮಾಡಿದ್ದಾರೆ. ಈ ರೀತಿಯ ಚಿಕಿತ್ಸೆ ಮಧ್ಯ ಕರ್ನಾಟಕದಲ್ಲಿ ಪ್ರಥಮ ಬಾರಿಗೆ ನೆರವೇರಿದೆ ಎಂಬುದು ವಿಶೇಷ. ಈ ರೀತಿಯ ಶಸ್ತ್ರಚಿಕಿತ್ಸೆ ಮಾಡಲು ವಿಶೇಷ ಪರಿಣಿತಿ ಅವಶ್ಯವಾಗಿದ್ದು, ನಾರಾಯಣ ಹೆಲ್ತ್ ಆಸ್ಪತ್ರೆಯಲ್ಲಿ ಅತ್ಯಂತ ನುರಿತ ವೈದ್ಯರು ರೋಗಿಗಳ ಚಿಕಿತ್ಸೆಗೆ ಸದಾ ಲಭ್ಯವಿರುತ್ತಾರೆ ಎಂದು ಹೇಳಿದರು.ಸುದ್ದಿಗೋಷ್ಠಿಯಲ್ಲಿ ಚಿತ್ರದುರ್ಗದ ಶಸ್ತ್ರಚಿಕಿತ್ಸೆ ಪಡೆದ ವ್ಯಕ್ತಿ, ಪ್ರಶಾಂತ್, ಕಾರ್ತಿಕ್ ಇತರರು ಇದ್ದರು.
- - --21ಕೆಡಿವಿಜಿ36:
ದಾವಣಗೆರೆಯಲ್ಲಿ ಎಸ್.ಎಸ್.ನಾರಾಯಣ ಹೆಲ್ತ್ ಆಸ್ಪತ್ರೆಯ ವೈದ್ಯರ ತಂಡ ಯಶಸ್ವಿ ಚಿಕಿತ್ಸೆ ನಿರ್ವಹಿಸಿದ ಕುರಿತು ಸುನೀಲ್ ಭಂಢಾರಿಗಲ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.