ವಿಕಸಿತ ಭಾರತ ಆಗಬೇಕಾದರೆ ಮೊದಲು ಆತ್ಮನಿರ್ಭರ ಸ್ವಾವಲಂಬಿ ಭಾರತಕ್ಕೆ ಸ್ವದೇಶಿ ಬಳಕೆ ಅಗತ್ಯ ಎಂದು ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ ಹೇಳಿದರು.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ವಿಕಸಿತ ಭಾರತ ಆಗಬೇಕಾದರೆ ಮೊದಲು ಆತ್ಮನಿರ್ಭರ ಸ್ವಾವಲಂಬಿ ಭಾರತಕ್ಕೆ ಸ್ವದೇಶಿ ಬಳಕೆ ಅಗತ್ಯ ಎಂದು ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ ಹೇಳಿದರು.ನಗರದ ಕಿಲ್ಲಾ ಓಣಿಯಲ್ಲಿನ ಅಟಲ್ ಬಿಹಾರಿ ವಾಜಪಾಯಿ ಮಹಾಶಕ್ತಿ ಕೇಂದ್ರ 10 ನೇ ವಾರ್ಡನಲ್ಲಿ ಪಕ್ಷದ ಮುಖಂಡರಾದ ಗುಂಡುರಾವ ಶಿಂದೆ ಅವರ ಮನೆಯಿಂದ ಸ್ವದೇಶಿ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಆತ್ಮ ನಿರ್ಭರ ಭಾರತಕ್ಕೆ ಮೊದಲು ದೇಶದ ಜನರು ಸ್ವದೇಶದಲ್ಲಿ ಉತ್ಪಾದಿಸಿದ ವಸ್ತುಗಳನ್ನು ಬಳಸಬೇಕು. ಡಿಜಿಟಲ್ ಕೌಶಲಗಳನ್ನು ಹೆಚ್ಚಿಸಿಕೊಳ್ಳಬೇಕು. ಭಾಷಾ ಸಾಮಥ್ರ್ಯ, ಕೌಶಲ ಕಲಿಯಬೇಕು. ಸ್ವದೇಶಿ ಮೇಳ, ಸ್ವದೇಶಿ ಸಂತೆಗಳಾಗುವಂತೆ ಮಾಡಬೇಕು ಎಂದು ಹೇಳಿದರು.
ಲಕ್ಷ್ಮೀ ನಾರಾಯಣ ಕಾಸಟ್, ಗುಂಡುರಾವ ಶಿಂದೆ, ಶ್ರೀನಾಥ ಸಜ್ಜನ, ತಾನಾಜಿ ಜಮಖಂಡಿ, ಶ್ರೀಕಾಂತ ಪತ್ತಾರ, ಶಂಕರ ಕದಂಬ, ರಂಗನಾಥ ಜವಳಿ, ರಾಜು ಮೋರೆ, ದಶರಥ ಪಥಂಗೆ, ಚಂದ್ರು ರಾಮವಾಡಗಿ, ರಮೇಶ ಉಪ್ಪಾರ, ಬೀಭಶಿ ಮೋರೆ, ಉಮೇಶ ಪಡಸಲಗಿ, ಸಂತೋಷ ಚಿಲ್ಲಾಳಶೆಟ್ಟಿ, ಸುಜಾತಾ ಶಿಂದೆ, ಜ್ಯೋತಿ ಭಜಂತ್ರಿ, ಶಶಿಕಲಾ ಮಜ್ಜಗಿ, ಸರಸ್ವತಿ ಕುರಬರ, ಬಸವರಾಜ ಯಂಕಂಚಿ, ರವಿ ಧಾಮಜಿ, ಬಸವರಾಜ ಹುನಗುಂದ, ಉಮೇಶ ಹಂಚಿನಾಳ, ಶ್ರೀಧರ ನಾಗರಬೇಟ್ಟ ರಾಜು ಶಿಂತ್ರೆ ಸೆರಿದಂತೆ ಅನೇಕರು ಭಾಗವಹಿಸಿದ್ದರು.