ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರುನಗರದ ಸಿದ್ಧಗಂಗಾ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಹೊಸದಾಗಿ ಯಕ್ಷಗಾನ ತರಬೇತಿ ಪಡೆದು ‘ಸ್ಪಂದನ-2025’ ಕಾರ್ಯಕ್ರಮದಲ್ಲಿ ಮೊದಲಬಾರಿಗೆ ಸುದರ್ಶನ ಗರ್ವಭಂಗ’ ಎಂಬ ಯಕ್ಷಗಾನ ಪ್ರದರ್ಶಿಸಿ ಪ್ರೇಕ್ಷಕರ ಮೆಚ್ಚುಗೆಗೆ ಕಾರಣವಾದರು. ಬೇರೆಬೇರೆ ವಿಭಾಗಗಳಲ್ಲಿ ಎಂಜಿನಿಯರಿಂಗ್ ವ್ಯಾಸಂಗ ನಡೆಸುತ್ತಿರುವ ವಿದ್ಯಾರ್ಥಿಗಳಿಗಾಗಿ ತುಮಕೂರಿನ ಯಕ್ಷದೀವಿಗೆ ಸಂಸ್ಥೆಯ ಅಧ್ಯಕ್ಷರಾದ ಡಾ.ಆರತಿ ಪಟ್ರಮೆ ಒಂದು ತಿಂಗಳ ಯಕ್ಷಗಾನ ಕಾರ್ಯಾಗಾರ ನಡೆಸಿ ತರಬೇತಿ ನೀಡಿದ್ದಾರೆ. ಯುವಜನರು ಸತತ ಅಭ್ಯಾಸ ಮಾಡಿ ಸಂಕೀರ್ಣ ಕಲೆಯೊಂದನ್ನು ರೂಢಿಸಿಕೊಂಡು ಪ್ರದರ್ಶಿಸಿರುವುದು ಕಲೆಯ ಮೇಲಿನ ಶ್ರದ್ಧೆ ಹಾಗೂ ಬದ್ಧತೆ ತೋರಿಸುತ್ತದೆ ಎಂದು ಸಿದ್ದಗಂಗಾ ತಾಂತ್ರಿಕ ಮಹಾವಿದ್ಯಾಲಯದ ಸಾಂಸ್ಕೃತಿಕ ಸಂಯೋಜಕ ಡಾ.ಸಾಗರ್‌ಟಿ.ಎಸ್. ತಿಳಿಸಿದರು.ವಿವಿಧ ಅವತಾರಗಳಲ್ಲಿ ವಿಷ್ಣು ಮಾಡಿದ ಎಲ್ಲ ಸಾಧನೆಗಳಿಗೆ ಮೂಲತಃ ತಾನೇ ಕಾರಣ ಎಂದು ಅಹಂಕಾರದಿಂದ ಬೀಗುತ್ತಿದ್ದ ಸುದರ್ಶನ ಚಕ್ರಕ್ಕೆ ವಾಸ್ತವದ ಅರಿವಾಗುವ ಕಥಾನಕವುಳ್ಳ ಸುದರ್ಶನ ಗರ್ವಭಂಗ ಯಕ್ಷಗಾನವು ಭಾಗವತದ ಒಂದು ಪ್ರಸಂಗವಾಗಿದೆ. ಹಿಮ್ಮೇಳದಲ್ಲಿ ಭಾಗವತರಾಗಿ ದೀಪಕ್ ತುಳುಪುಳೆ, ಚೆಂಡೆವಾದಕರಾಗಿ ಪೃಥ್ವಿ ಬಡೆಕ್ಕಿಲ, ಮದ್ದಳೆವಾದಕರಾಗಿ ಸಂವೃತ ಶರ್ಮಾ, ಚಕ್ರತಾಳ ಕಲಾವಿದರಾಗಿ ಪ್ರದೀಪ್ ಸಹಕರಿಸಿದರು.ಮುಮ್ಮೇಳದಲ್ಲಿ ಎಂನಿಯರಿಂಗ್ ವಿದ್ಯಾರ್ಥಿಗಳಾದ ತೇಜು ವಿಘ್ನೇಶ್, ಮಹಿಮಾ ಭಟ್, ಸುಚಿತ್ರಾ ಬಿ.ಎಸ್., ಲಹರಿಟಿ.ಜೆ., ಅನನ್ಯ ವಿ., ನಾಗಪ್ರಿಯಕೆ.ಜಿ., ಕಾವ್ಯ ಸಿಂಚನಾ, ಗೌರಿಎಸ್., ಚಿಂತನಾಯು.ಎಸ್., ವಸುಧಾ ಸಿ.ಪಿ., ಸಂಜನಾ ಎಂ., ಶ್ರಾವ್ಯರಾಜೇಶ್ ನಿಂಜೂರ್, ಚೈತ್ರಾಎಸ್., ರಕ್ಷಿತಾಕೆ.ಎಸ್., ಸಹನಾ ಇ., ಭಾವನಾ ಬಿ.ಎಲ್., ಹರ್ಷಿತಾ,ಸೌಮ್ಯಾ ನಾಗೇಶ್‌ದೇವಾಡಿಗ, ಇಂಪನಾ ವಿವಿಧ ಪಾತ್ರಗಳನ್ನು ಅಭಿನಯಿಸಿದರು.
;Resize=(128,128))
;Resize=(128,128))
;Resize=(128,128))
;Resize=(128,128))