ಶಾಸಕ ಜಿ.ಟಿ.ದೇವೇಗೌಡ ಕುಟುಂಬಸ್ಥರಿಂದ ಸುದರ್ಶನ ಹೋಮ

| Published : Sep 29 2025, 01:03 AM IST

ಶಾಸಕ ಜಿ.ಟಿ.ದೇವೇಗೌಡ ಕುಟುಂಬಸ್ಥರಿಂದ ಸುದರ್ಶನ ಹೋಮ
Share this Article
  • FB
  • TW
  • Linkdin
  • Email

ಸಾರಾಂಶ

ಹಲವು ವರ್ಷಗಳಿಂದ ನಡೆಯುತ್ತಿರುವ ನವರಾತ್ರಿ ಮಹೋತ್ಸವದಲ್ಲಿ ಪಾಲ್ಗೊಳ್ಳುತ್ತಿದ್ದೇವೆ. ದೇವಿಯಲ್ಲಿ ಪ್ರಾರ್ಥಿಸಿ ಮಹಾಸುದರ್ಶನ ಹೋಮ ಸೇರಿದಂತೆ ಇತರೆ ವಿಶೇಷ ಪೂಜೆಗ ಸಲ್ಲಿಸಾಲಗುತ್ತಿದೆ. ಸಂಕಷ್ಟ ನಿವಾರಣೆ, ದೇಶ ಸುಭಿಕ್ಷೆಗಾಗಿ ಪ್ರಾರ್ಥಿಸಲಾಗಿದೆ.

ಕನ್ನಡಪ್ರಭ ವಾರ್ತೆ ಪಾಂಡವಪುರ

ತಾಲೂಕಿನ ಪಟ್ಟಸೋಮನಹಳ್ಳಿ ಹೊರವಲಯದ ಶ್ರೀಶಿವಶೈಲದಲ್ಲಿ ದೇವಾಲಯದ ಆವರಣದಲ್ಲಿ ಶರನ್ನವರಾತ್ರಿ ಅಂಗವಾಗಿ ಮಾಜಿ ಸಚಿವ, ಮೈಸೂರು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡರು ತಮ್ಮ ಕುಟುಂಬ ಸಮೇತರಾಗಿ ಪಾಲ್ಗೊಂಡು ಸುದರ್ಶನ ಹೋಮ ನಡೆಸಿದರು.

ಕಾಮಾಕ್ಷಿ ಚಂದ್ರಮೌಳೇಶ್ವರ ದೇವಾಲಯದಲ್ಲಿ ನವರಾತ್ರಿ ಮಹೋತ್ಸವದ ಅಂಗವಾಗಿ ಅ.1ರವರೆಗೆ ವಿವಿಧ ಹೋಮ ಹವನಗಳ ಕಾರ್ಯಕ್ರಮವಿದ್ದು, ನವರಾತ್ರಿ 6ನೇ ದಿನ ಮಹಾಸುದರ್ಶನ ಹೋಮದಲ್ಲಿ ಜಿ.ಟಿ.ದೇವೇಗೌಡರು ಕುಟುಂಬ ಸಮೇತ ಪಾಲ್ಗೊಂಡರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಹಲವು ವರ್ಷಗಳಿಂದ ನಡೆಯುತ್ತಿರುವ ನವರಾತ್ರಿ ಮಹೋತ್ಸವದಲ್ಲಿ ಪಾಲ್ಗೊಳ್ಳುತ್ತಿದ್ದೇವೆ. ದೇವಿಯಲ್ಲಿ ಪ್ರಾರ್ಥಿಸಿ ಮಹಾಸುದರ್ಶನ ಹೋಮ ಸೇರಿದಂತೆ ಇತರೆ ವಿಶೇಷ ಪೂಜೆಗ ಸಲ್ಲಿಸಾಲಗುತ್ತಿದೆ. ಸಂಕಷ್ಟ ನಿವಾರಣೆ, ದೇಶ ಸುಭಿಕ್ಷೆಗಾಗಿ ಪ್ರಾರ್ಥಿಸಲಾಗಿದೆ ಎಂದರು.

ನವರಾತ್ರಿ ಆಚರಣೆಗಳು ಬಹಳ ಮಹತ್ವ ಹೊಂದಿವೆ. ಜೀವನದ ಮೂಲ ನಿಯಮಗಳಾಗಿವೆ. ನಿಯಮ ನಂಬಿಕೆ ಮತ್ತು ವಿಶ್ವಾಸಗಳಿಗೆ ಶರಣಾಗುವುದರಿಂದ ಅರ್ಥಪೂರ್ಣವಾದ ಬದುಕಿಗೆ ನಾಂದಿ ಹಾಡಬಹುದು. ಈ ಬಾರಿ ದಸರ ಸಂಪ್ರಾದಯವಾಗಿ ಅದ್ಧೂರಿಯಾಗಿ ಆಚರಣೆಯಾಗುತ್ತಿದೆ. ಹಾಗಾಗಿ ನಾಡು ಸುಭಿಕ್ಷವಾಗಿರಲಿ, ಕಾಲಕಾಲಕ್ಕೆ ಮಳೆ ಬೆಳೆಯಾಗಿ ರೈತರ ಕಲ್ಯಾಣವಾಗಲಿ, ಮೈಸೂರು ದಸರಾ ಯಶಸ್ವಿಯಾಗಲೆಂದು ಪ್ರಾರ್ಥಿಸಿ ಹೋಮದಲ್ಲಿ ಪಾಲ್ಗೊಂಡಿರುವುದಾಗಿ ತಿಳಿಸಿದರು.

ಈ ವೇಳೆ ನಿವೃತ್ತ ನ್ಯಾಯಾಧೀಶ, ಶಿವಶೈಲ ದತ್ತಿ ಧಾರ್ಮಿಕ ಸಂಸ್ಥೆ ಮುಖ್ಯಸ್ಥ ಸಿ.ಶಿವಪ್ಪ, ಸಹೋದರ ನಾಗಭೂಷಣ್, ಪುತ್ರ ಡಾ.ಸಿ.ಎಸ್.ರಾಜೇಶ್, ರಾಜ್ಯ ಪತ್ತಿನ ಸಹಕಾರ ಸಂಘಗಳ ಮಹಾಮಂಡಳಿ ಮಾಜಿ ಅಧ್ಯಕ್ಷೆ ಲಲಿತಾ ದೇವೇಗೌಡ, ಜಿಟಿಡಿ ಸಹೋದರ ಯಧುವರ್, ಪುತ್ರಿಯರಾದ ಅನ್ನಪೂರ್ಣ, ಯಶೋಧ, ಮಹಾಲಕ್ಷ್ಮೀಸ್ವಿಟ್ ಮಾಲೀಕ ಶಿವಕುಮಾರ್, ವಕೀ ಪಾಲಾಕ್ಷ , ಬಿಜೆಪಿ ಮುಖಂಡ ರೈಸ್‌ಮಿಲ್ ತಮ್ಮಣ್ಣ, ಜಿಟಿಡಿ ಅಪ್ತಕಾರ್ಯದರ್ಶಿ ಹನುಮೇಶ್, ಜವರನಾಯಕ ಸಿದ್ದರಾಜು, ಶಿವಕುಮಾರ್‌ಸ್ವಾಮಿ, ರಮೇಶ್, ಬೋರಪ್ಪ, ಜಿಪಂ ಮಾಜಿ ಸದಸ್ಯ ಲಾರಿಸ್ವಾಮಿಗೌಡ, ತಾಪಂ ಮಾಜಿ ಸದಸ್ಯ ಶಿವಣ್ಣ, ಗೀತಾ ಮಂಜುನಾಥ್, ಎಪಿಎಂಸಿ ಮಾಜಿ ಅಧ್ಯಕ್ಷ ನಾಗರಾಜು, ಡೈರಿ ನಿದೇರ್ಶಕ ಉಮಾಶಂಕರ್, ಧನಂಜಯ, ರೈಸ್‌ಮಿಲ್ ನಾಗರಾಜು, ಪ್ರಧಾನ ಅರ್ಚಕರಾದ ದತ್ತತ್ರೇಯಾ ಭಟ್, ಶಿವಶೈಲ ಮ್ಯಾನೇಜರ್ ನಂಜುಂಡೆಗೌಡ, ರುದ್ರೇಶ್, ಹಾಗೂ ಭಕ್ತರು ಪಾಲ್ಗೊಂಡಿದ್ದರು.