ಸಾರಾಂಶ
ಕರಣ್ ಸ್ಥಳದಲ್ಲೇ ಮೃತಪಟ್ಟರೆ, ಚಾಲಕ ರಾಜು ಕೂಡ್ಲಿಗಿ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗದಲ್ಲಿ ಮೃತಪಟ್ಟಿದ್ದಾನೆ.
ಕೂಡ್ಲಿಗಿ: ನಿಯಂತ್ರಣ ತಪ್ಪಿ ಕಾರೊಂದು ಮಗುಚಿದ ಪರಿಣಾಮ ಬಾಗಲಕೋಟೆ ಮೂಲದ ಇಬ್ಬರು ಮೃತಪಟ್ಟು, ಮತ್ತಿಬ್ಬರು ಗಾಯಗೊಂಡ ಘಟನೆ ಕೂಡ್ಲಿಗಿ ಸಮೀಪದ ರಾ.ಹೆ. 50ರ ರಸ್ತೆಯಲ್ಲಿ ಮೊರಬ ಕ್ರಾಸ್ ಬಳಿ ಬುಧವಾರ ನಸುಕಿನಜಾವ ನಡೆದಿದೆ.ಬಾಗಲಕೋಟ ಜಿಲ್ಲೆಯ ಹುನುಗುಂದ ತಾಲೂಕಿನ ಅಮೀನಗಡದ ಲಂಬಾಣಿ ತಾಂಡಾದ ಕರಣ್ (17), ಚಾಲಕ ರಾಜು (36) ಮೃತರು. ಪಿಯು ವಿದ್ಯಾರ್ಥಿ ಅಭಿಷೇಕ್ (17), ಅಪ್ಪು ಚೌಹಾಣ್ (23) ಗಾಯಾಳುಗಳು. ಗಾಯಾಳುಗಳನ್ನು ಕೂಡ್ಲಿಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿ ವಿಮ್ಸ್ ಗೆ ಕಳುಹಿಸಲಾಗಿದೆ.
ಬೆಂಗಳೂರು ಕಡೆಯಿಂದ ಸ್ವಗ್ರಾಮ ಅಮೀನಗಡದ ತಾಂಡಾಕ್ಕೆ ಕಾರಿನಲ್ಲಿ ನಾಲ್ವರು ಪ್ರಯಾಣಿಸುತ್ತಿದ್ದರು. ಬುಧವಾರ ನಸುಕಿನಜಾವ 1:45ರ ಸುಮಾರಿಗೆ ಕೂಡ್ಲಿಗಿ ಸಮೀಪ ಮೊರಬ ಕ್ರಾಸ್ ಹತ್ತಿರ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿ ಪಲ್ಟಿಯಾಗಿ ಪಕ್ಕದ ಜಮೀನಿಗೆ ಹೋಗಿ ಬಿದ್ದಿದೆ. ಕರಣ್ ಸ್ಥಳದಲ್ಲೇ ಮೃತಪಟ್ಟರೆ, ಚಾಲಕ ರಾಜು ಕೂಡ್ಲಿಗಿ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗದಲ್ಲಿ ಮೃತಪಟ್ಟಿದ್ದಾನೆ. ಇನ್ನುಳಿದ ಇಬ್ಬರು ಗಾಯಾಳುಗಳನ್ನು ಕೂಡ್ಲಿಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿ ವಿಮ್ಸ್ ಗೆ ಕಳುಹಿಸಲಾಗಿದೆ.ಈ ಬಗ್ಗೆ ಕೂಡ್ಲಿಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಘಟನಾ ಸ್ಥಳಕ್ಕೆ ಬುಧವಾರ ಬೆಳಿಗ್ಗೆ ವಿಜಯನಗರ ಜಿಲ್ಲೆಯ ಎಎಸ್ಪಿ ಸಲೀಂ ಪಾಷಾ, ಕೂಡ್ಲಿಗಿ ಡಿವೈಎಸ್ಪಿ ಮಲ್ಲೇಶಪ್ಪ ಮಲ್ಲಾಪುರ, ಕೂಡ್ಲಿಗಿ ಸಿಪಿಐ ವಿನಾಯಕ, ಪಿಎಸ್ಐ ಧನುಂಜಯ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮುಂದಿನ ಕ್ರಮ ಕೈಗೊಂಡಿದ್ದಾರೆ.