ಗ್ರಾಮಾಂತರಕ್ಕೆಸುನಿಲ್‌ ಬೋಸ್‌ ಪರವಾಗಿ ಸುಧಾ ಮಹದೇವಯ್ಯ ಮತಯಾಚನೆ

| Published : Apr 17 2024, 01:20 AM IST

ಗ್ರಾಮಾಂತರಕ್ಕೆಸುನಿಲ್‌ ಬೋಸ್‌ ಪರವಾಗಿ ಸುಧಾ ಮಹದೇವಯ್ಯ ಮತಯಾಚನೆ
Share this Article
  • FB
  • TW
  • Linkdin
  • Email

ಸಾರಾಂಶ

ಪಟ್ಟಣದ ಶ್ರೀ ಗುಂಜಾ ನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ನಂತರ ಪಟ್ಟಣದ ವಿವಿಧೆಡೆ ಕಾಂಗ್ರೆಸ್ ಅಭ್ಯರ್ಥಿ ಸುನಿಲ್ ಬೋಸ್ ಪರ ಮತಯಾಚನೆ ಮಾಡಿ, ಕೇಂದ್ರದ ಗ್ಯಾರಂಟಿ ಕಾರ್ಡ್ ವಿತರಿಸಿ

ಕನ್ನಡಪ್ರಭ ವಾರ್ತೆ ಟಿ. ನರಸೀಪುರ

ಚಾಮರಾಜನಗರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸುನಿಲ್ ಬೋಸ್ ಪರವಾಗಿ ಜಿಪಂ ಮಾಜಿ ಸದಸ್ಯೆ ಸುಧಾ ಮಹದೇವಯ್ಯ ಪ್ರಚಾರ ಮಾಡಿ ಮತಯಾಚಿಸಿದರು.

ಪಟ್ಟಣದ ಶ್ರೀ ಗುಂಜಾ ನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ನಂತರ ಪಟ್ಟಣದ ವಿವಿಧೆಡೆ ಕಾಂಗ್ರೆಸ್ ಅಭ್ಯರ್ಥಿ ಸುನಿಲ್ ಬೋಸ್ ಪರ ಮತಯಾಚನೆ ಮಾಡಿ, ಕೇಂದ್ರದ ಗ್ಯಾರಂಟಿ ಕಾರ್ಡ್ ವಿತರಿಸಿ ಅವರು ಮಾತನಾಡಿದರು. ಈ ಬಾರಿ ಕಾಂಗ್ರೆಸ್ ಕೇಂದ್ರದಲ್ಲಿ ಅಧಿಕಾರ ಹಿಡಿಯುವ ಜೊತೆಗೆ ಚಾಮರಾಜನಗರ ಕ್ಷೇತ್ರದಲ್ಲಿ ನಮ್ಮ‌ಅಭ್ಯರ್ಥಿ ಸುನಿಲ್ ಬೋಸ್ ಜಯ ಗಳಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಶಿವಕುಮಾರ್, ಲತಾ ಜಗದೀಶ್, ಮಹದೇವಮ್ಮ, ಜಯಲಕ್ಷ್ಮಿ, ತಾಪಂ‌ ಮಾಜಿ ಸದಸ್ಯ ಮಹದೇವಮ್ಮ, ಕಲ್ಪನಾ ಇದ್ದರು.