ಸ್ಥಳೀಯ ಈಐಡಿ ಪ್ಯಾರಿ ಸಕ್ಕರೆ ಕಾರ್ಖಾನೆಯಿಂದ ಪಟ್ಟಣದಲ್ಲಿ ಉಂಟಾಗುತ್ತಿರುವ ಟ್ರಾಫಿಕ್ ಸಮಸ್ಯೆ ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕು.

ಟ್ರಾಫಿಕ್ ಸಮಸ್ಯೆ ಬಗೆಹರಿಸಲು ಆಗ್ರಹಿಸಿ ಹಿರಿಯ ನಾಗರಿಕ ವೇದಿಕೆ, ಕರವೇಯಿಂದ ಮನವಿಕನ್ನಡಪ್ರಭ ವಾರ್ತೆ ಹಳಿಯಾಳ

ಸ್ಥಳೀಯ ಈಐಡಿ ಪ್ಯಾರಿ ಸಕ್ಕರೆ ಕಾರ್ಖಾನೆಯಿಂದ ಪಟ್ಟಣದಲ್ಲಿ ಉಂಟಾಗುತ್ತಿರುವ ಟ್ರಾಫಿಕ್ ಸಮಸ್ಯೆ ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಹಿರಿಯ ನಾಗರಿಕ ವೇದಿಕೆ ಹಾಗೂ ಹಳಿಯಾಳ ತಾಲೂಕು ಕರವೇ ಘಟಕದ ನಿಯೋಗವು ಮಂಗಳವಾರ ತಹಸೀಲ್ದಾರ ಮೂಲಕ ಜಿಲ್ಲಾಡಳಿತಕ್ಕೆ ಜಂಟಿಯಾಗಿ ಮನವಿ ಸಲ್ಲಿಸಿತು.

ಟ್ರಾಫಿಕ್ ಸಮಸ್ಯೆ ನಿಯಂತ್ರಣಕ್ಕೆ ಶಾಶ್ವತ ಪರಿಹಾರ ಮಾರ್ಗೋಪಾಯ ಕಂಡು ಹಿಡಿಯುವಂತೆ ಆಗ್ರಹಿಸಿದರು.

ತಾಲೂಕಿನಲ್ಲಿ ಈಐಡಿ ಪ್ಯಾರಿ ಸಕ್ಕರೆ ಕಾರ್ಖಾನೆಯು ಆರಂಭವಾಗಿ ಹಲವಾರು ವರ್ಷಗಳಾಗಿವೆ. ಪ್ರಸಕ್ತ ಸಾಲಿನ ಕಬ್ಬು ನುರಿಸುವ ಹಂಗಾಮು ಆರಂಭಗೊಂಡು ಎರಡೂ ತಿಂಗಳಾಗುತ್ತಾ ಬಂದಿದ್ದು, ಪ್ರತಿವರ್ಷವೂ ಕಬ್ಬು ನುರಿಸುವ ಹಂಗಾಮು ಆರಂಭವಾದಾಗಿನಿಂದ ಮುಗಿಯುವರೆಗೂ ಪಟ್ಟಣದಲ್ಲಿ ಟ್ರಾಫಿಕ್ ಸಮಸ್ಯೆ ಹೆಚ್ಚಾಗುತ್ತಿದೆ. ವಿನಃ ಕಡಿಮೆಯಾಗುವ ಲಕ್ಷಣಗಳು ಕಂಡು ಬರುತ್ತಿಲ್ಲ. ಇದರಿಂದಾಗಿ ಶಾಲಾ-ಕಾಲೇಜು ಮಕ್ಕಳಿಗೆ ಹಾಗೂ ಹಿರಿಯ ನಾಗರಿಕರಿಗೆ ಅತೀಯಾದ ತೊಂದರೆಯಾಗುತ್ತಿದೆ. ಅಂಗವಿಕಲರು ಮತ್ತು ಮಹಿಳೆಯರು ಪರದಾಡುವಂತಾಗಿದೆ.

ಅದಕ್ಕಾಗಿ ಜಿಲ್ಲಾಡಳಿತವು ಮದ್ಯಪ್ರವೇಶಿಸಿ ಕಾರ್ಖಾನೆಯಿಂದ ಉಂಟಾಗುವ ಸಂಚಾರ ದಟ್ಟಣೆಯನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕು, ಕಾರ್ಖಾನೆಯವರೊಂದಿಗೆ ಮಾತುಕತೆ ನಡೆಸಿ ಪರ್ಯಾಯ ವ್ಯವಸ್ಥೆಯನ್ನು ಕಂಡು ಹಿಡಿದು ಶಾಲಾ ಕಾಲೇಜಿಗೆ ತೆರಳಲು ಮಕ್ಕಳಿಗೆ ವಿದ್ಯಾರ್ಥಿಗಳಿಗೆ ಹಾಗೂ ದಿನನಿತ್ಯದ ಕೆಲಸ ಕಾರ್ಯಗಳನ್ನು ಮಾಡಲು ಸಾರ್ವಜನಿಕರಿಗೆ ಅನುವು ಮಾಡಿಕೊಡಬೇಕೆಂದು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.

ತಾಲೂಕ ಕರವೇ ಘಟದ ಅಧ್ಯಕ್ಷ ಬಸವರಾಜ ಬೆಂಡಿಗೇರಿಮಠ, ಹಿರಿಯ ನಾಗರಿಕ ವೇದಿಕೆಯ ಅಧ್ಯಕ್ಷ ಜಿ.ಡಿ. ಗಂಗಾಧರ, ಪ್ರಮುಖರಾದ ಪೂಜಾ ದೂಳಿ, ಭಾರತಿ ಕದಂ, ಕರವೇ ಘಟಕದ ಮಹೇಶ ಆಣೆಗುಂದಿ, ವಿಜಯ ಪಡ್ನೀಸ್, ವಿನೋದ ಗಿಂಡೇ, ಚಂದ್ರು ಅರಶಿಣಗೇರಿ, ಗೋವಿಂದ ಗಡಾದ ಹಾಗೂ ಇತರರು ಇದ್ದರು.

---------

6ಎಚ್.ಎಲ್.ವೈ-2: ಹಿರಿಯ ನಾಗರಿಕ ವೇದಿಕೆ ಹಾಗೂ ಹಳಿಯಾಳ ತಾಲೂಕು ಕರವೇ ಘಟಕದ ನಿಯೋಗವು ಮಂಗಳವಾರ ತಹಸೀಲ್ದಾರ ಮೂಲಕ ಜಿಲ್ಲಾಡಳಿತಕ್ಕೆ ಜಂಟಿಯಾಗಿ ಮನವಿ ಸಲ್ಲಿಸಿತು.