ಸಾರಾಂಶ
ಶಿಗ್ಗಾಂವಿ: ಕೋಣನಕೇರಿ ವಿಐಎನ್‌ಪಿ ಡಿಸ್ಟಲರಿಸ್ ಮತ್ತು ಶುಗರ್ಸ್ ಪ್ರೈ. ಲಿ. ಮುಂಭಾಗದ ಆವರಣದಲ್ಲಿ ನ. 4ರಂದು ಬೆಳಗ್ಗೆ 9 ಗಂಟೆಯಿಂದ ಬೃಹತ್ ಪ್ರತಿಭಟನೆ ಹಾಗೂ ಅಹೋರಾತ್ರಿ ನಿರ್ದಿಷ್ಟಾವಧಿ ಧರಣಿ ನಡೆಸುವುದಾಗಿ ಕಬ್ಬು ಬೆಳೆಗಾರರು ಹೇಳಿದ್ದಾರೆ.
ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ ಅವರಿಗೆ ಮಂಗಳವಾರ ಕಬ್ಬು ಬೆಳೆಗಾರರು ಈ ಕುರಿತು ಮನವಿ ಸಲ್ಲಿಸಿದ್ದಾರೆ.ವಿಐಎನ್‌ಪಿ ಡಿಸ್ಟಲರಿಸ್ ಮತ್ತು ಶುಗರ್ಸ್ ಪ್ರೈ. ಲಿ. ಕಂಪನಿ ಮೂರು ವರ್ಷಗಳಿಂದ ರೈತರಿಂದ ಕಬ್ಬು ಖರೀದಿಸುತ್ತಿದೆ. ಆದರೆ ಪ್ರತಿ ಟನ್ ಕಬ್ಬಿಗೆ ₹೨೫೫೫ ಮಾತ್ರ ನೀಡುತ್ತಿದೆ. ಮುಂಡಗೋಡ, ಕಲಘಟಗಿ, ಹುಬ್ಬಳ್ಳಿ-ಧಾರವಾಡ ತಾಲೂಕುಗಳಿಂದ ಖರೀದಿಸಿದ ಕಬ್ಬಿಗೆ ₹೨೯೭೫ ನೀಡಿದೆ. ನಮ್ಮ ತಾಲೂಕಿನ ಕಬ್ಬು ಬೆಳಗಾರರಿಗೆ ಕಡಿಮೆ ಬೆಲೆ ನೀಡಿ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಈ ಕುರಿತು ತಾಲೂಕಿನ ರೈತರು ಕೇಳಿದಾಗಲೆಲ್ಲ ಕಂಪನಿ ಅಧಿಕಾರಿಗಳು ಹಾರಿಕೆ ಉತ್ತರ ನೀಡುತ್ತಿದ್ದಾರೆ ಎಂದು ರೈತರು ಹೇಳಿದರು.
೦ ಕಿಮೀನಿಂದ ೧೫ ಕಿಮೀ ಬಾಡಿಗೆಯಲ್ಲಿ ಉಳಿಯುವ ₹೧೫೮ ಉಳಿಯುವ ಹಣವನ್ನು ಸಹ ರೈತರ ಖಾತೆಗೆ ಹಾಕದೆ ವಂಚಿಸುತ್ತಿದೆ. ರೈತರಿಗೆ ಹೊರಗಿನ ತಾಲೂಕುಗಳಿಗೆ ನೀಡುವ ₹೨೯೭೫ ಹಾಗೂ ₹೧೫೮ ಬಾಡಿಗೆ ಹಣ ಸೇರಿಸಿ ಒಟ್ಟು ₹೩೧೩೩ ನೀಡಬೇಕು. ಅಲ್ಲಿಯವರೆಗೆ ಕಬ್ಬಿನ ವಾಹನಗಳನ್ನು ತಡೆದು ರಸ್ತೆ ಬಂದ್ ಮಾಡುತ್ತೇವೆ ಎಂದು ರೈತರು ಹೇಳಿದ್ದಾರೆ.ಮುಖಂಡರಾದ ಹನುಮರಡ್ಡಿ ನಡುವಿನಮನಿ, ಚನ್ನಪ್ಪ ಬಿಂದ್ಲಿ, ಅಶೋಕ ದೊಡ್ಡಮನಿ, ಸುರೇಶಗೌಡ ಪಾಟೀಲ, ನಾಗರಾಜ ಕೋಟಿ, ಷಣ್ಮುಖಪ್ಪ ಮೆಣಸಿನಕಾಯಿ, ಮಹಾವೀರ ಧಾರವಾಡ, ಮುತ್ತಣ್ಣ ವೀರಾಪುರ, ಬಾಹುಬಲಿ ಸೊಗಲಿ, ಸುಧೀರ ಛಟ್ಟಿ, ನೀಲಕಂಠಗೌಡ ಪಾಟೀಲ, ಈರಣ್ಣ ಡವಗಿ, ಬಸವರಾಜ ಮಡಿವಾಳರ, ಸದಾನಂದ ಬಿಂಗಾಪುರ ಇದ್ದರು.
;Resize=(128,128))
;Resize=(128,128))