ಸಾರಾಂಶ
ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ನಂತರ ರಾಜ್ಯದಲ್ಲಿ ಭದ್ರತಾ ಕ್ರಮಗಳು ತೀವ್ರಗೊಂಡಿದ್ದು, ಚಿಕ್ಕಮಗಳೂರು ಗಡಿಭಾಗವಾದ ಕೊಟ್ಟಿಗೆಹಾರ ಚೆಕ್‌ಪೋಸ್ಟ್‌ನಲ್ಲಿ ಕಟ್ಟುನಿಟ್ಟಿನ ಪೊಲೀಸ್ ಭದ್ರತೆ ಜಾರಿಯಲ್ಲಿದೆ.
ಕೊಟ್ಟಿಗೆಹಾರ: ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ನಂತರ ರಾಜ್ಯದಲ್ಲಿ ಭದ್ರತಾ ಕ್ರಮಗಳು ತೀವ್ರಗೊಂಡಿದ್ದು, ಚಿಕ್ಕಮಗಳೂರು ಗಡಿಭಾಗವಾದ ಕೊಟ್ಟಿಗೆಹಾರ ಚೆಕ್‌ಪೋಸ್ಟ್‌ನಲ್ಲಿ ಕಟ್ಟುನಿಟ್ಟಿನ ಪೊಲೀಸ್ ಭದ್ರತೆ ಜಾರಿಯಲ್ಲಿದೆ.
ಚಿಕ್ಕಮಗಳೂರು ಹಾಗೂ ದಕ್ಷಿಣ ಕನ್ನಡ ಗಡಿಭಾಗದ ಪ್ರಮುಖ ಪ್ರವೇಶ ಬಾಗಿಲಾದ ಕೊಟ್ಟಿಗೆಹಾರದಲ್ಲಿ ಇದೀಗ ಪ್ರತಿಯೊಂದು ವಾಹನದ ತಪಾಸಣೆ ನಡೆಸಲಾಗುತ್ತಿದೆ. ಗಸ್ತು ಕಾರ್ಯಾಚರಣೆ ಹೆಚ್ಚಳಗೊಂಡಿದ್ದು, ಶಂಕಿತ ವಾಹನಗಳು ಹಾಗೂ ವ್ಯಕ್ತಿಗಳ ಮೇಲೆ ನಿಗಾ ವಹಿಸಲಾಗುತ್ತಿದೆ.
ಬಣಕಲ್ ಪೊಲೀಸ್ ಠಾಣೆ ಸಬ್ ಇನ್ಸ್‌ಪೆಕ್ಟರ್ ರೇಣುಕಾ ನೇತೃತ್ವದಲ್ಲಿ ನಡೆಯುತ್ತಿರುವ ಈ ತಪಾಸಣಾ ಚಟುವಟಿಕೆ ಗಡಿ ಭಾಗದ ಶಾಂತಿಯುತ ಪರಿಸರವನ್ನು ಕಾಪಾಡುವ ಉದ್ದೇಶವಾಗಿದೆ. ನಮ್ಮ ಗಡಿ ಭಾಗ ಶಾಂತಿ ಮತ್ತು ಕಾನೂನು ಸುವ್ಯವಸ್ಥೆಗೆ ಮಾದರಿ ಆಗಬೇಕು. ಯಾವುದೇ ಬಾಹ್ಯ ಅಶಾಂತಿ ಜಿಲ್ಲೆಗೆ ಪ್ರವೇಶಿಸದಂತೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿ ಎಂದು ತಿಳಿಸಿದ್ದಾರೆ.
ಈ ಕ್ರಮದ ಭಾಗವಾಗಿ ಸಾರ್ವಜನಿಕರನ್ನು ಸಹ ಸಹಕಾರ ನೀಡುವಂತೆ ಪೊಲೀಸರು ವಿನಂತಿಸಿದ್ದಾರೆ. 3 ಕೆಸಿಕೆಎಂ 7ಚಾರ್ಮಾಡಿ ಘಾಟ್ ರಸ್ತೆಯ ಕೊಟ್ಟಿಗೆಹಾರ ಚೆಕ್ ಪೋಸ್ಟ್‌ನಲ್ಲಿ ವಾಹನಗಳ ತಪಾಸಣೆ ಚುರುಕುಗೊಳಿಸಲಾಗಿದೆ.
;Resize=(128,128))
;Resize=(128,128))
;Resize=(128,128))
;Resize=(128,128))