ಹಿರಿಯೂರು ನಗರದ 31ನೇ ವಾರ್ಡ್‌ನ ಕಾಂಗ್ರೆಸ್ ಮುಖಂಡರ, ಕಾರ್ಯಕರ್ತರ ಮನೆಗಳಿಗೆ ಸುಹಾಸ್ ಸುಧಾಕರ್ ಭೇಟಿ ನೀಡಿದರು.
ಹಿರಿಯೂರಿನ ಅಭಿವೃದ್ಧಿ, ಜನಸೇವೆ ಹಾದಿಯಲ್ಲಿ ಸಹಕಾರ ನೀಡಿ: ಸುಹಾಸ್ ಸುಧಾಕರ್‌ಕನ್ನಡಪ್ರಭ ವಾರ್ತೆ ಹಿರಿಯೂರು
ನಗರದ ಹರಿಶ್ಚಂದ್ರ ಘಾಟ್‌ನ 31ನೇ ವಾರ್ಡ್‌ನಲ್ಲಿನ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಹಾಗೂ ಸಾರ್ವಜನಿಕರ ಮನೆಗಳಿಗೆ ಸುಹಾಸ್ ಸುಧಾಕರ್ ಭೇಟಿ ನೀಡಿದರು.ಈ ವೇಳೆ ನಗರಸಭೆ ಮಾಜಿ ಸದಸ್ಯ ಪ್ರೇಮ್ ಕುಮಾರ್ ಮಾತನಾಡಿ, ಸುಧಾಕರ್ ಸಾಹೇಬರಿಗೆ ನೀವು ತೋರಿದ ಪ್ರೀತಿ, ಬೆಂಬಲ ಮತ್ತು ಆಶೀರ್ವಾದಕ್ಕೆ ಹೃದಯಪೂರ್ವಕ ಧನ್ಯವಾದಗಳನ್ನು ತಿಳಿಸಲು ಸುಹಾಸ್ ಸುಧಾಕರ್ ಬಂದಿದ್ದಾರೆ. ನಗರವೂ ಸೇರಿದಂತೆ ಇಡೀ ತಾಲೂಕಿನಲ್ಲಿ ಜಾತಿ ಬೇಧ ಮಾಡದೇ ಬಡವರಿಗೆ, ಶೋಷಿತರಿಗೆ ಸಚಿವರು ಒಂದು ಆತ್ಮಸ್ಥೈರ್ಯ ತುಂಬಿದ್ದರು. ಅವರ ದಾನ ಧರ್ಮದ ಕಾರ್ಯಗಳು ಈಗಲೂ ಜೀವಂತವಾಗಿವೆ. ಎಲ್ಲಾ ಸಮಾಜದವರನ್ನು ಸಮಾನವಾಗಿ ಕಾಣುತ್ತಿದ್ದ ಅವರ ಆಡಳಿತ ಶೈಲಿ ಎಲ್ಲರಿಗೂ ಮಾದರಿಯಾಗಬೇಕು. ನಗರಸಭೆ ವ್ಯಾಪ್ತಿಯ ವಾರ್ಡ್‌ಗಳಿಗೆ ಸುಮಾರು 50 ರಿಂದ 60 ಕೋಟಿ ರು. ವಿಶೇಷ ಅನುದಾನ ತಂದು ಕೆಲಸ ಮಾಡಿಸಿದ್ದರು. 100 ಕೋಟಿ ರು. ಅನುದಾನದ ಯುಜಿಡಿ ಯೋಜನೆಯ ಕೆಲಸ ಶುರು ಮಾಡಲು ಸಿದ್ಧತೆ ಮಾಡಿಕೊಂಡಿದ್ದರು. ಈಗ ಆ ಕೆಲಸವನ್ನು ಸುಹಾಸ್ ಸುಧಾಕರ್ ಮುಂದುವರೆಸಲು ನಿಮ್ಮ ಆಶೀರ್ವಾದ ಬೇಕು ಎಂದು ವಿನಂತಿಸಿದರು.
ಸುಹಾಸ್ ಸುಧಾಕರ್ ಮಾತನಾಡಿ, ತಮ್ಮ ತಂದೆಯವರೊಂದಿಗೆ ನೀವು ಯಾವ ರೀತಿಯಲ್ಲಿ ಕೈಜೋಡಿಸಿದ್ದೀರೋ ಅದೇ ರೀತಿಯಲ್ಲಿ ಮುಂದಿನ ದಿನಗಳಲ್ಲಿಯೂ ನನ್ನ ಕೈ ಹಿಡಿದು ನಡೆಸಿ. ನಿಮ್ಮ ಆಶೀರ್ವಾದ, ಬೆಂಬಲ ಮತ್ತು ಸಹಕಾರ ನನ್ನ ಮೇಲಿರಲಿ. ನಿಮ್ಮ ಪ್ರೀತಿ, ವಿಶ್ವಾಸ ಮತ್ತು ಸಹಕಾರವೇ ನಮ್ಮ ಶಕ್ತಿಯಾಗಿದೆ. ಹಿರಿಯೂರಿನ ಅಭಿವೃದ್ಧಿ ಹಾಗೂ ಜನಸೇವೆಯ ಹಾದಿಯಲ್ಲಿ ನಾವು ಮತ್ತಷ್ಟು ದೃಢವಾಗಿ ಮುಂದುವರೆಯಲು ನೀವೆಲ್ಲಾ ಸಹಕಾರ ನೀಡಬೇಕು ಎಂದರು. ಈ ಸಂದರ್ಭದಲ್ಲಿ ನಗರಸಭೆ ಮಾಜಿ ಅಧ್ಯಕ್ಷ ಈ ಮಂಜುನಾಥ್, ಮಾಜಿ ಉಪಾಧ್ಯಕ್ಷೆ ಮಂಜುಳಾ, ಮುಖಂಡ ಘಾಟ್ ರವಿ ಮುಂತಾದವರು ಹಾಜರಿದ್ದರು.