ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ
ತೊರೆಬೊಮ್ಮನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಶಾಸಕ ಕೆ.ಎಂ.ಉದಯ್ ಬೆಂಬಲಿಗ ಹೊನ್ನಾಯಕನಹಳ್ಳಿ ಸುಲೋಚನ ಅಂದಾನಿಗೌಡ, ಉಪಾಧ್ಯಕ್ಷರಾಗಿ ಟಿ.ನಂಜುಂಡೇಗೌಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಕ್ಕೆ ಸುಲೋಚನ ಮತ್ತು ಟಿ.ನಂಜುಂಡೇಗೌಡರನ್ನು ಹೊರತು ಪಡಿಸಿ ಬೇರೆ ಯಾರು ನಾಮಪತ್ರ ಸಲ್ಲಿಸದ ಕಾರಣ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆಂದು ಚುನಾವಣಾಧಿಕಾರಿ ಸಿ.ಎ.ಸುಧಾಕರ್ ಘೋಷಿಸಿದರು.
ನೂತನ ಅಧ್ಯಕ್ಷೆ ಸುಲೋಚನ ಅಂದಾನಿಗೌಡ ಮಾತನಾಡಿ, ನನ್ನ ಮೇಲೆ ವಿಶ್ವಾಸವಿಟ್ಟು ಶಾಸಕ ಕೆ.ಎಂ.ಉದಯ್ ಅವರು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲು ಸಹಕರಿಸಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಸೊಸೈಟಿ ಅಭಿವೃದ್ಧಿಗೆ ನಿಷ್ಠೆಯಿಂದ ದುಡಿಯುತ್ತೇನೆ ಎಂದು ಭರವಸೆ ನೀಡಿದರು.ಸಹಕಾರ ಸಂಘದ ವ್ಯಾಪ್ತಿಗೆ ಬರುವ ತೊರೆಬೊಮ್ಮನಹಳ್ಳಿ ಸೇರಿದಂತೆ ಹೊನ್ನಾಯಕನಹಳ್ಳಿ, ಸುಣ್ಣದದೊಡ್ಡಿ, ಪುಟ್ಟೇಗೌಡನದೊಡ್ಡಿ ಗ್ರಾಮಗಳ ರೈತರಿಗೆ ಸರ್ಕಾರದದಿಂದ ಸಿಗುವ ಸಬ್ಸಿಡಿಗಳು ನೆರವಾಗಿ ತಲುಪುವಂತೆ ಮಾಡಲು ಕ್ರಮ ವಹಿಸುತ್ತೆನೆ ಎಂದು ಭರವಸೆ ನೀಡಿದರು.
ಸಹಕಾರ ಸಂಘಗಳು ರೈತರಿಗೆ ವರದಾನವಾಗಬೇಕು. ಆ ನಿಟ್ಟಿನಲ್ಲಿ ಸಂಘದ ಅಭಿವೃದ್ಧಿಗೆ ಎಲ್ಲ ನಿರ್ದೇಶಕರನ್ನು ವಿಶ್ವಾಸಕ್ಕೆ ತೆಗೆದು ಕೊಂಡು ಸದಸ್ಯರ ಜತೆಗೂಡಿ ಮಾದರಿ ಸಂಘ ಮಾಡಲು ಪಣ ತೋಡುತ್ತೆನೆ ಎಂದರು.ಈ ವೇಳೆ ಮುಖಂಡರಾದ ತೊರೆಬೊಮ್ಮನಹಳ್ಳಿ ವೆಂಕಟೇಶ್, ಪ್ರಜಾಪ್ರಿಯಾ ವೆಂಕಟೇಶ್, ರಾಜೇಂದ್ರ, ಅಭಿಷೇಕ್‌ಗೌಡ, ಶ್ರೀಕಂಟೇಗೌಡ, ಸುಣ್ಣದೊಡ್ಡಿ ಮಹೇಶ್, ಮಧು, ಸಿದ್ದೇಗೌಡ , ನಿರ್ದೇಶಕರಾದ ಲಕ್ಷ್ಮಮ್ಮ, ನಾಗೇಶ್, ಪುಟ್ಟರಾಮು, ಶಿವಮಾಧು, ಎಚ್.ಕೆ.ಕೃಷ್ಣ, ಚಿಕ್ಕದೇವಯ್ಯ, ಸಿದ್ದಲಿಂಗರಾಜೇಅರಸ್, ಜಯಲಿಂಗ, ಸ್ವಾಮಿ ಸೇರಿದಂತೆ ಮತ್ತಿತರಿದ್ದರು.ಇಂಡುವಾಳು ಗ್ರಾಪಂ ಅಧ್ಯಕ್ಷರರಾಗಿ ತನುಜಾ ಆಯ್ಕೆ
ಮಂಡ್ಯ: ತಾಲೂಕಿನ ಕೊತ್ತತ್ತಿ ಹೋಬಳಿಯ ಇಂಡುವಾಳು ಗ್ರಾಪಂ ಅಧ್ಯಕ್ಷರಾಗಿ ತನುಜ ಸುಂದರ್, ಉಪಾಧ್ಯಕ್ಷರಾಗಿ ಸತೀಶ(ಸತ್ಯ ) ಅವರು ಆಯ್ಕೆಯಾದರು. ಬಳಿಕ ಶ್ರೀರಂಗಪಟ್ಟಣದ ಬಿಜೆಪಿ ಮುಖಂಡ ಎಸ್.ಸಚ್ಚಿದಾನಂದ ಅವರನ್ನು ಭೇಟಿಯಾಗಿ ಅಭಿನಂದನೆ ಸಲ್ಲಿಸಿದರು.ಮಾಜಿ ಅಧ್ಯಕ್ಷರಾ ತೇಜ, ಅಭಿಲಾಷ, ರೇಖಾ, ತನುಜಾ, ಸ್ವಾಮಿ, ಚನ್ನಾಚಾರಿ, ಮುನಿಸ್ವಾಮಿ ಹಾಗೂ ಸದಸ್ಯರಾದ ರಮೇಶ, ಶೈಲಜಾ, ಬೇಲೂರಿನ ಮುಖಂಡ ಮಾಯಿಗಣ್ಣ, ಇಂಡುವಾಳು ಪಂಚಾಯ್ತಿ ಮುಖಂಡರು ಇದ್ದರು.