ಸುಳ್ವಾಡಿ ವಿಷಪ್ರಸಾದ ಸೇವನೆ ಪ್ರಕರಣ; ಜಿಲ್ಲಾ ಆಸ್ಪತ್ರೆಗೆ ಸಂತ್ರಸ್ತರ ರವಾನೆ

| Published : Jan 23 2025, 12:46 AM IST

ಸುಳ್ವಾಡಿ ವಿಷಪ್ರಸಾದ ಸೇವನೆ ಪ್ರಕರಣ; ಜಿಲ್ಲಾ ಆಸ್ಪತ್ರೆಗೆ ಸಂತ್ರಸ್ತರ ರವಾನೆ
Share this Article
  • FB
  • TW
  • Linkdin
  • Email

ಸಾರಾಂಶ

ಹನೂರು ತಾಲೂಕಿನ ಸುಳ್ವಾಡಿ ಕಿಚ್ಚುಗುತ್ತಿ ಮಾರಮ್ಮನ ದೇವಾಲಯದಲ್ಲಿ ವಿಷ ಪ್ರಸಾದ ಸೇವಿಸಿ ವಿವಿಧ ಅಂಗಾಂಗ ವೈಫಲ್ಯದಿಂದ ಬಳಲುತ್ತಿರುವ ಎಂಜಿ ದೊಡ್ಡಿ ಗ್ರಾಮದ 23 ಸಂತ್ರಸ್ತರನ್ನು ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ಯಲಾಯಿತು.

ಕನ್ನಡಪ್ರಭ ವಾರ್ತೆ ಹನೂರುಸುಳ್ವಾಡಿ ವಿಷ ಪ್ರಸಾದ ದುರಂತ ಪ್ರಕರಣದಿಂದ ಅಂಗಾಂಗ ವೈಫಲ್ಯದಿಂದ ನರಳುತ್ತಿರುವ ಎಂಜಿ ದೊಡ್ಡಿ ಗ್ರಾಮದ ಸಂತ್ರಸ್ತರನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಯಿತು.

ಸುಳ್ವಾಡಿ ಕಿಚ್ತುಗುತ್ತಿ ಮಾರಮ್ಮನ ದೇವಾಲಯದಲ್ಲಿ ವಿಷ ಪ್ರಸಾದ ಸೇವಿಸಿ 17 ಜನ ಮೃತಪಟ್ಟು 170ಕ್ಕೂ ಹೆಚ್ಚು ವಿವಿಧ ಗ್ರಾಮಸ್ಥರು ವಿವಿಧ ಅಂಗಾಂಗ ವೈಫಲ್ಯಗಳಿಂದ ಕಳೆದ ಆರು ವರ್ಷಗಳಿಂದ ಗುಣಮುಖರಾಗದೆ ನರಳುತ್ತಿದ್ದರು. ಈ ಬಗ್ಗೆ ವ್ಯಾಪಕ ದೂರುಗಳು ಬಂದ ಹಿನ್ನೆಲೆಯಲ್ಲಿ ಚಾಮರಾಜನಗರ ಜಿಲ್ಲಾ ಆರೋಗ್ಯ ಇಲಾಖೆ ಎಂಜಿ ದೊಡ್ಡಿ ಗ್ರಾಮದ 23 ಜನರನ್ನು ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದು ವಿವಿಧ ನೂನ್ಯತೆಗಳಿಂದ ಬಳಲುತ್ತಿರುವ ರೋಗಿಗಳಿಗೆ ಚಿಕಿತ್ಸೆ ನೀಡಲು ವಿವಿಧ ವೈದ್ಯಾಧಿಕಾರಿಗಳು ಮುಂದಾಗಿದ್ದಾರೆ.

6 ವರ್ಷ ಕಳೆದರೂ ಗುಣಮುಖವಾಗಿಲ್ಲ:

ಸುಳ್ವಾಡಿ ವಿಷ ಪ್ರಸಾದ ದುರಂತ ಪ್ರಕರಣ ನಡೆದು ಆರು ವರ್ಷ ಕಳೆದರೂ ಇಲ್ಲಿನ ವಿವಿಧ ಗ್ರಾಮಗಳ ನಿವಾಸಿಗಳು ವಿಷ ಪ್ರಸಾದ ಸೇವಿಸಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು ನ್ಯೂನ್ಯತೆಗಳಿಗೆ ತಕ್ಕಂತೆ ಔಷಧಿ ಪಡೆಯುತ್ತಿದ್ದರೂ ಗುಣಮುಖರಾಗದೆ ದಿನದಿಂದ ದಿನಕ್ಕೆ ಆರೋಗ್ಯ ಕ್ಷಿಣಿಸುತ್ತಿರುವ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿತ್ತು. ಈ ಹಿನ್ನೆಲೆ ಜಿಲ್ಲಾಧಿಕಾರಿಗಳ ಸೂಚನೆಯ ಮೇರೆಗೆ ಡಿಎಚ್ಒ ಚಿದಂಬರ್ ಎಂಜಿ ದೊಡ್ಡಿ ಗ್ರಾಮದ 23 ವಿವಿಧ ಅಂಗಾಂಗ ವೈಫಲ್ಯದಿಂದ ನರಳುತ್ತಿರುವ ಸಂತ್ರಸ್ತರನ್ನು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.