ಸಾರಾಂಶ
ಬೆಂಗಳೂರು: ಬೇಸಿಗೆ ಹಿನ್ನೆಲೆಯಲ್ಲಿ ಪ್ರಯಾಣಿಕರ ದಟ್ಟಣೆ ನಿರ್ವಹಣೆಗೆ ನೈಋತ್ಯ ರೈಲ್ವೆಯು ಯಶವಂತಪುರ- ಡಾ.ಎಂ.ಜಿ.ಆರ್. ಚೆನ್ನೈ ಸೆಂಟ್ರಲ್ ನಡುವೆ ಒಂದು ಟ್ರಿಪ್ ಹಾಗೂ ಎಸ್‌ಎಂವಿಟಿ ಬೆಂಗಳೂರು- ಹೌರಾ ನಡುವೆ ಆರು ಟ್ರಿಪ್ ವಿಶೇಷ ರೈಲುಗಳ ಸಂಚಾರ ಮಾಡಲಿವೆ.
ಏ.18ರಂದು ಯಶವಂತಪುರ ನಿಲ್ದಾಣದಿಂದ ರಾತ್ರಿ 10.45ಕ್ಕೆ ಹೊರಡುವ ರೈಲು (06533) ಮರುದಿನ ಬೆಳಗ್ಗೆ 4.55 ರ ಸುಮಾರಿಗೆ ಚೆನ್ನೈ ತಲುಪಲಿದೆ. ಏ.19ರಂದು ಅಲ್ಲಿಂದ ವಾಪಸ್ ರೈಲು (06534) ಬೆಳಗ್ಗೆ 6.45ಕ್ಕೆ ಹೊರಟು ಯಶವಂತಪುರವನ್ನು ಮಧ್ಯಾಹ್ನ 12.30ಕ್ಕೆ ತಲುಪಲಿದೆ.
ಈ ರೈಲು ಕೃಷ್ಣರಾಜಪುರಂ, ಬಂಗಾರಪೇಟ ಜಂಕ್ಷನ್, ಜೋಲಾರಪೇಟೆ ಜಂಕ್ಷನ್, ಅರಕ್ಕೋಣಮ್, ಪೆರಂಬೂರ ಜಂಕ್ಷನ್ ನಲ್ಲಿ ನಿಲುಗಡೆ ಆಗಲಿದೆ. 21 ಕೋಚ್ ಹೊಂದಿರು ರೈಲು ಇದಾಗಿದೆ.
ಎಸ್‌ಎಂವಿಟಿ ಬೆಂಗಳೂರು-ಹೌರಾ ವಾರಕ್ಕೊಮ್ಮೆ ಸಂಚರಿಸುವ ಸ್ಪೆಷಲ್ ಎಕ್ಸ್‌ಪ್ರೆಸ್ ರೈಲು ಏ. 19,26, ಮೇ 3,10,17 ಹಾಗೂ 24ರಂದು ಸಂಚರಿಸಲಿದೆ.
ಎಸ್‌ಎಂವಿಟಿ ಬೆಂಗಳೂರು ಹಾಗೂ ಕಲಬುರ್ಗಿ ನಡುವೆ ಬೇಸಿಗೆ ವಿಶೇಷ ರೈಲು (06589/ 06590) ಏಳು ಟ್ರಿಪ್‌ಗಳಲ್ಲಿ ಸಂಚರಿಸಲಿದೆ. ಏ. 21ರಿಂದ ಮೇ 12ರವರೆಗೆ ಪ್ರತಿ ಭಾನುವಾರ ಹಾಗೂ ಮಂಗಳವಾರ ಈ ರೈಲು ಸಂಚರಿಸಲಿದೆ.