ಸಾರಾಂಶ
ರಂಗಭೂಮಿ ನಿರ್ದೇಶಕರು, ಸ್ತ್ರೀ ಪಾತ್ರಧಾರಿಗಳು, ವಾದ್ಯಗೋಷ್ಠಿ ಕಲಾವಿದರು, ವಸ್ತ್ರಾಲಂಕಾರ ಕಲಾವಿದರು ಬದುಕುತ್ತಿರುವುದು ರಂಗಭೂಮಿ ಕಲಾವಿದರಿಂದ, ಆದರೆ ಆ ರಂಗಭೂಮಿ ಕಲಾವಿದನು ಸ್ವಂತ ಹಣದಿಂದ ಖರ್ಚು ಮಾಡಿ ತನ್ನ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಾನೆ ಒಂದು ನಾಟಕ ಮಾಡಲು ಲಕ್ಷಾಂತರ ಹಣ ಬೇಕಾಗುತ್ತದೆ,
ನ್ನಡಪ್ರಭ ವಾರ್ತೆ ಮೈಸೂರು
ರಂಗಭೂಮಿ ಕಲೆಗೆ ರಾಜ್ಯ ಸರ್ಕಾರ ಮತ್ತಷ್ಟು ಆದ್ಯತೆ ನೀಡಿದರೆ ಉತ್ತಮವಾಗುತ್ತದೆ ಎಂದು ರಂಗಭೂಮಿ ನಿರ್ದೇಶಕ ಬೀರಿಹುಂಡಿ ಗೋವಿಂದರಾಜು ಹೇಳಿದರು.ಐಪಿಎಸ್ ನಗರದ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯಿಂದ ನಡೆಯುತ್ತಿದ್ದ ಮಕ್ಕಳ ಬೇಸಿಗೆ ಶಿಬಿರದಲ್ಲಿ, ವೀರಶೈವ ಸಮಾನ ಮನಸ್ಕರ ಸ್ನೇಹ ಬಳಗ ಕುದೇರು ಮಠದ ವತಿಯಿಂದ ರಂಗಭೂಮಿ ಮಹತ್ವ, ಹಾಡುಗಾರಿಕೆ, ಅಭಿನಯ ವಿಷಯ ಕುರಿತು ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರಂಗಭೂಮಿ ನಿರ್ದೇಶಕರು, ಸ್ತ್ರೀ ಪಾತ್ರಧಾರಿಗಳು, ವಾದ್ಯಗೋಷ್ಠಿ ಕಲಾವಿದರು, ವಸ್ತ್ರಾಲಂಕಾರ ಕಲಾವಿದರು ಬದುಕುತ್ತಿರುವುದು ರಂಗಭೂಮಿ ಕಲಾವಿದರಿಂದ, ಆದರೆ ಆ ರಂಗಭೂಮಿ ಕಲಾವಿದನು ಸ್ವಂತ ಹಣದಿಂದ ಖರ್ಚು ಮಾಡಿ ತನ್ನ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಾನೆ ಒಂದು ನಾಟಕ ಮಾಡಲು ಲಕ್ಷಾಂತರ ಹಣ ಬೇಕಾಗುತ್ತದೆ, ತನ್ನ ತಂಡದ ಸಹಕಾರದಿಂದ ಹಣವನ್ನು ಸಂಗ್ರಹಿಸಿ ಅನೇಕ ಕಲಾವಿದರಿಗೆ ಜೀವನಕ್ಕೆ ಬೆನ್ನೆಲುಬಾಗಿರುತ್ತಾರೆ, ಆದ್ದರಿಂದ ಸರ್ಕಾರ ನಾಟಕವನ್ನು ಅಭಿನಯಿಸುವ ಪ್ರತಿ ತಂಡಗಳಿಗೆ ಸಹಕರಿಸಿದರೆ ಅನೇಕ ಕಲಾವಿದರು ಬದುಕುತ್ತಾರೆ, 60 ವರ್ಷದ ಮೇಲ್ಪಟ್ಟ ಹರಿಯ ಕಲಾವಿದರಿಗೆ ಗೌರವಧನ ಹೆಚ್ಚಿಸಿದರೆ ಬಹಳ ಸೂಕ್ತ, ಆದ್ದರಿಂದ ರಂಗಭೂಮಿ ಕಲೆ ಉಳಿಯುತ್ತದೆ ಬೆಳೆಯುತ್ತದೆ ಎಂದು ತಿಳಿಸಿದರು.ಹಿರಿಯರ ರಂಗಭೂಮಿ ಕಲಾವಿದ ಚಿಕ್ಕಹಳ್ಳಿ ಪುಟ್ಟಣ್ಣ ಮಾತನಾಡಿ, ರಂಗಭೂಮಿಯಿಂದ ಅನೇಕ ದಿಗ್ಗಜ ಚಲನಚಿತ್ರ ನಟರು ಇಡಿ ಪ್ರಪಂಚಕ್ಕೆ ತಿಳಿಯುವ ಹಾಗೆ ಬೆಳೆದಿದ್ದಾರೆ, ಆದ್ದರಿಂದ ರಂಗಭೂಮಿಯಲ್ಲಿ ಪ್ರತಿಯೊಂದನ್ನು ತಿಳಿದು ಅರಿತು ಅಳವಡಿಸಿಕೊಂಡು ಮುನ್ನಡೆದರೆ ಯಶಸ್ಸು ಕೀರ್ತಿ ನಮಗೂ ನಮ್ಮ ಭಾಷೆಗೂ ನಾಡಿಗೂ ನಮ್ಮ ಸಂಸ್ಕೃತಿಗೆ ಮಹತ್ವ ನೀಡಿದಂತಾಗುತ್ತದೆ ಎಂದು ತಿಳಿಸಿದರು.
ಸೋಮೇಶ್ವರ ಪುರದ ಸೋಮಶೇಖರ್, ಹೊಸಕೋಟೆ ನಂದೀಶ್, ಮುಳ್ಳೂರು ಪರ್ವತಪ್ಪ, ಮೊಸಂಬಾಯನಹಳ್ಳಿ ದೊಡ್ಡಬುದ್ಧಿ, ಕೆರೆಹಳ್ಳಿ ಲೋಹಿತ್, ಹೊಸಕೋಟೆ ಪ್ರಭುಸ್ವಾಮಿ, ಹೊಸಕೋಟೆ ಶಿವಮಲ್ಲಪ್ಪ, ಕೆಬ್ಬೆಹುಂಡಿ ಶಿವಕುಮಾರ್, ಹೊಸಕೋಟೆ ಸುಂದ್ರಪ್ಪ, ಸುತ್ತೂರು ನಾಗೇಶ್ ಬಾಗಳಿ ಮಹೇಶ್ , ರಂಗಸ್ವಾಮಿ, ದೇವಪ್ಪಾಜಿ, ಪುಟ್ನಂಜಪ್ಪ, ಧನಂಜಯ್, ಕೆರೆಹಳ್ಳಿ ಪರಶಿವಮೂರ್ತಿ, ಹೂಟಗಳ್ಳಿ ನಾಗರಾಜು, ರಂಗಭೂಮಿ ಕಲಾವಿದರು ಭಾಗವಹಿಸಿ, ಪೌರಾಣಿಕ ನಾಟಕಗಳ ಮಹತ್ವವನ್ನು ತಿಳಿಸಿ ಮತ್ತು ಅನೇಕ ರಂಗಗೀತೆಗಳನ್ನು ಹಾಡಿ ಶಿಬಿರಾರ್ಥಿಗಳನ್ನು ಮನರಂಜಿಸಲಾಯಿತು.;Resize=(128,128))
;Resize=(128,128))