ಸಾರಾಂಶ
ಒಂದು ತಿಂಗಳು ಬೇಸಿಗೆ ಶಿಬಿರಕ್ಕೆ ಜೆಸಿಐ ಅಧ್ಯಕ್ಷೆ ಜಗದಾಂಬ ಗುರುಪ್ರಸಾದ್ ಚಾಲನೆ ನೀಡಿದರು.
ಕನ್ನಡಪ್ರಭವಾರ್ತೆ ಸೋಮವಾರಪೇಟೆ
ಇಲ್ಲಿನ ಜೆಸಿಐ ಪುಷ್ಪಗಿರಿ ಸೋಮವಾರಪೇಟೆ ಮತ್ತು ಅಡ್ವೆಂಚರ್ ಡಾನ್ಸ್ ಸಂಸ್ಥೆಯ ಸಹಯೋಗದಲ್ಲಿ ಮೇಘನಾ ಡ್ರೈವಿಂಗ್ ಶಾಲಾ ಸಭಾಂಗಣದಲ್ಲಿ ನಡೆಯುವ ಒಂದು ತಿಂಗಳು ಬೇಸಿಗೆ ಶಿಬಿರಕ್ಕೆ ಮಂಗಳವಾರ ಜೆಸಿಐ ಅಧ್ಯಕ್ಷೆ ಜಗದಾಂಬ ಗುರುಪ್ರಸಾದ್ ಚಾಲನೆ ನೀಡಿದರು.ನಂತರ ಮಾತನಾಡಿ, ಬೇಸಿಗೆ ಶಿಬಿರಗಳಲ್ಲಿ ವಿದ್ಯಾರ್ಥಿಗಳಿಗೆ ವಿವಿಧ ತರಬೇತಿ ನೀಡುವುದರಿಂದ, ಮಕ್ಕಳ ಕಲಿಕಾ ಸಾಮರ್ಥ್ಯ ಹೆಚ್ಚಾಗಲು ನೆರವಾಗುವುದು. ನುರಿತ ಶಿಕ್ಷಕರಿಂದ ಕ್ರಾಪ್ಟ್, ಯೋಗ, ಕರಾಟೆ, ಚಿತ್ರಕಲೆ, ಗ್ಲಾಸ್ ಆರ್ಟ್ ಸೇರಿದಂತೆ ಹಲವಾರು ತರಗತಿಗಳು ನಡೆಯಲಿದೆ. ಶಿಬಿರದ ಪ್ರಯೋಜನವನ್ನು ಎಲ್ಲ ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೂನಿಯರ್ ಜೇಸಿ ಅಧ್ಯಕ್ಷೆ ದಿಶಾ ಗಿರೀಶ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಅಡ್ವೆಂಚರ್ ಡ್ಯಾನ್ಸ್ ಸಂಸ್ಥೆಯ ಚೇತನ್ ರವಿ, ಜೋನ್ ಡೈರೆಕ್ಟರ್ ಲೇಡಿ ಮಾಯಾ ಗಿರೀಶ್ ಮತ್ತು ಮೇಘನಾ ಚೇತನ್ ಉಪಸ್ಥಿತರಿದ್ದರು.