ಮಕ್ಕಳ ಮನೋವಿಕಾಸಕ್ಕೆ ಬೇಸಿಗೆ ಶಿಬಿರ ಸಹಕಾರಿ

| Published : May 15 2025, 01:36 AM IST

ಸಾರಾಂಶ

ಬಿರದಲ್ಲಿ ಎಲ್ಲ ಬಗೆಯ ಮಕ್ಕಳೊಂದಿಗೆ ಬೆಳೆಯುವುದರಿಂದ ಸಾಂಘಿಕ ಜೀವನದ ಅರಿವೂ ಆಗುತ್ತದೆ. ಇತ್ತಿತ್ತಲಾಗಿ ನಗರಗಳಲ್ಲಿ ನಾಯಿಕೊಡೆಗಳಂತೆ ಬೇಸಿಗೆ ಶಿಬಿರಗಳು ಹುಟ್ಟಿಕೊಳ್ಳುತ್ತಿವೆ

ಧಾರವಾಡ: ಬೇಸಿಗೆ ಶಿಬಿರಗಳಲ್ಲಿ ಮಕ್ಕಳ ವ್ಯಕ್ತಿತ್ವ ವಿಕಸನ ಮಾತ್ರವಲ್ಲ ಮನೋವಿಕಸನ ಕೂಡ ಆಗಲಿದೆ. ಮಕ್ಕಳ ಮನೋವಿಕಾಸಕ್ಕೆ ಬೇಸಿಗೆ ಶಿಬಿರ ಸಹಕಾರಿ ಎಂದು ಸಂಘಟಕ ಮಾರ್ತಾಂಡಪ್ಪ ಕತ್ತಿ ಹೇಳಿದರು.

ಇಲ್ಲಿಯ ಕಲಾಶಕ್ತಿ ಫೌಂಡೇಶನ್ ವತಿಯಿಂದ ರಂಗಾಯಣದಲ್ಲಿ ಏರ್ಪಡಿಸಿದ್ದ ಕಲಾಲೋಕದಲ್ಲಿ ಒಂದು ಪುಟ್ಟ ಹೆಜ್ಜೆ ಬೇಸಿಗೆ ಶಿಬಿರದ ಸಮಾರೋಪದಲ್ಲಿ ಮಾತನಾಡಿ, ಶಿಬಿರದಲ್ಲಿ ಎಲ್ಲ ಬಗೆಯ ಮಕ್ಕಳೊಂದಿಗೆ ಬೆಳೆಯುವುದರಿಂದ ಸಾಂಘಿಕ ಜೀವನದ ಅರಿವೂ ಆಗುತ್ತದೆ. ಇತ್ತಿತ್ತಲಾಗಿ ನಗರಗಳಲ್ಲಿ ನಾಯಿಕೊಡೆಗಳಂತೆ ಬೇಸಿಗೆ ಶಿಬಿರಗಳು ಹುಟ್ಟಿಕೊಳ್ಳುತ್ತಿವೆ. ಇವೆಲ್ಲ ಬರೀ ಹಣ ಮಾಡುವ ಕೇಂದ್ರಗಳಾಗಿವೆ ಎಂದು ಮೂಗು ಮುರಿಯದೇ ಸೂಕ್ತವಾದ ಶಿಬಿರ ಹುಡುಕಿ ಮಕ್ಕಳನ್ನು ಶಿಬಿರಗಳಿಗೆ ಕಳಿಸುವ ಜವಾಬ್ದಾರಿ ಪಾಲಕರದ್ದು. ಹಾಗಾಗಿ ಅಂತಹ ಶಿಬಿರ ಮತ್ತು ತರಬೇತಿ ಕೇಂದ್ರ ನಡೆಸುತ್ತಿರುವ ಮಲ್ಲನಗೌಡ ಪಾಟೀಲ ಅವರ ಮಾರ್ಗದರ್ಶನ ಉತ್ತಮ ಎಂದರು.

ಉದ್ಘಾಟನೆಯನ್ನು ರಂಗಾಯಣದ ನಿರ್ದೇಶಕ ಡಾ.ರಾಜು ತಾಳಿಕೋಟಿ ನೆರವೇರಿಸಿದರು. ನವಲೂರು ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ನಾಗರಾಜ ಡಿ.ಎಲ್, ಮಹಾನಗರ ಪಾಲಿಕೆ ಸದ್ಯಸ ಮಂಜುನಾಥ ಭಟ್ಟೆನವರ ಮಾತನಾಡಿದರು.

ಕಲಾಶಕ್ತಿ ಫೌಂಡೇಶನ್ ಅಧ್ಯಕ್ಷೆ ಅನ್ನಪೂರ್ಣ ಪಾಟೀಲ್ ಇದ್ದರು. ಮಾತೃ ಭೂಮಿ ಸೇವಾ ಸಂಘದ ಅಧ್ಯಕ್ಷ ನಿತಿನ್ ರಾಮದುರ್ಗ ಹಾಗೂ ಸಮಾಜ ಸೇವಕ ಶ್ರೀಕಾಂತ ಪುರ್ಲಿ ಅವರನ್ನು ಸನ್ಮಾನಿಸಲಾಯಿತು. ನಂತರ ಶಿಬಿರದ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.