ಏ.12ರಿಂದ ಅನ್ವೇಷಕರು ಆರ್ಟ್‌ನಿಂದ ಬೇಸಿಗೆ ತರಬೇತಿ ಶಿಬಿರ: ಎಸ್ಸೆಸ್ ಸಿದ್ದರಾಜು

| Published : Mar 20 2024, 01:15 AM IST

ಏ.12ರಿಂದ ಅನ್ವೇಷಕರು ಆರ್ಟ್‌ನಿಂದ ಬೇಸಿಗೆ ತರಬೇತಿ ಶಿಬಿರ: ಎಸ್ಸೆಸ್ ಸಿದ್ದರಾಜು
Share this Article
  • FB
  • TW
  • Linkdin
  • Email

ಸಾರಾಂಶ

ಮಕ್ಕಳಲ್ಲಿ ಮುಂದಾಳತ್ವ, ಕಾರ್ಯದಕ್ಷತೆ, ಸ್ವಾವಲಂಬನೆ, ಕುಶಲತೆ ಹೆಚ್ಚಿಸಲು ಶಿಬಿರ ಸಹಕಾರಿ. ಶಿಬಿರದಲ್ಲಿ ಹಾಡು, ನೃತ್ಯ, ಜನಪದ, ಚಿತ್ರಕಲೆ, ಜಿಮ್ನಾಸ್ಟಿಕ್, ಮಣ್ಣಿನಲ್ಲಿ ಕಲೆ, ನಾಟಕ, ಗೊಂಬೆ ತಯಾರಿಕೆ, ಒರಿಗಾಮಿ ಗಣಿತ, ಹಳೆಗನ್ನಡ ಕಾವ್ಯ ವಾಚನ, ಆಕಾಶ ವೀಕ್ಷಣೆ ಸೇರಿ ಹಲವಾರು ವಿಷಯಗಳ ಬಗ್ಗೆ ಪರಿಚಯ ಹಾಗೂ ಪ್ರಾತ್ಯಕ್ಷಿಕೆ ಶಿಬಿರದಲ್ಲಿ ನಡೆಯಲಿದೆ.

ಕನ್ನಡಪ್ರಭ ವಾರ್ತೆ ದಾವಣಗೆರೆ

ಅನ್ವೇಷಕರು ಆರ್ಟ್ ಫೌಂಡೇಷನ್ ನಿಂದ ಶ್ರೀ ಸೋಮೇಶ್ವರ ವಿದ್ಯಾಲಯದ ಸಹಕಾರದಲ್ಲಿ ಏ.12ರಿಂದ ಮೇ 5ರವರೆಗೆ ನಿತ್ಯ ಬೆಳಿಗ್ಗೆ 9.30ರಿಂದ ಸಂಜೆ 5ರವರೆಗೆ ಶ್ರೀ ಸೋಮೇಶ್ವರ ವಿದ್ಯಾಲಯದಲ್ಲಿ 8ನೇ ವರ್ಷದ ಬೇಸಿಗೆ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಶಿಬಿರದ ನಿರ್ದೇಶಕ, ಹಿರಿಯ ರಂಗಕರ್ಮಿ ಎಸ್.ಎಸ್.ಸಿದ್ದರಾಜು ತಿಳಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 7ರಿಂದ 16 ವರ್ಷದ ಒಳಗಿನ ಮಕ್ಕಳು ಶಿಬಿರದಲ್ಲಿ ಭಾಗವಹಿಸಬಹುದಾಗಿದ್ದು, ಮಕ್ಕಳಲ್ಲಿ ಮುಂದಾಳತ್ವ, ಕಾರ್ಯದಕ್ಷತೆ, ಸ್ವಾವಲಂಬನೆ, ಕುಶಲತೆ ಹೆಚ್ಚಿಸಲು ಶಿಬಿರ ಸಹಕಾರಿ. ಶಿಬಿರದಲ್ಲಿ ಹಾಡು, ನೃತ್ಯ, ಜನಪದ, ಚಿತ್ರಕಲೆ, ಜಿಮ್ನಾಸ್ಟಿಕ್, ಮಣ್ಣಿನಲ್ಲಿ ಕಲೆ, ನಾಟಕ, ಗೊಂಬೆ ತಯಾರಿಕೆ, ಒರಿಗಾಮಿ ಗಣಿತ, ಹಳೆಗನ್ನಡ ಕಾವ್ಯ ವಾಚನ, ಆಕಾಶ ವೀಕ್ಷಣೆ ಸೇರಿ ಹಲವಾರು ವಿಷಯಗಳ ಬಗ್ಗೆ ಪರಿಚಯ ಹಾಗೂ ಪ್ರಾತ್ಯಕ್ಷಿಕೆ ಶಿಬಿರದಲ್ಲಿ ನಡೆಯಲಿದೆ ಎಂದು ಹೇಳಿದರು.

ಸಾಮಾಜಿಕ ಕಾರ್ಯಕರ್ತ ಲೋಕಿಕೆರೆ ಪುರಂದರ, ಸಿದ್ದಪ್ಪ ಚನ್ನಗಿರಿ, ಬುರುಡಪ್ಪ ಇತರರಿದ್ದರು.

ವಿಶ್ವ ರಂಗ ದಿನಾಚರಣೆ: 27ಕ್ಕೆ ಏಕಪಾತ್ರಾಭಿನಯ ಸ್ಪರ್ಧೆ

5ರಿಂದ 9ನೇ ತರಗತಿ, ಕಾಲೇಜು ವಿದ್ಯಾರ್ಥಿಗಳಿಗೆ ಆಯೋಜನೆ

ವಿಶ್ವ ರಂಗ ದಿನಾಚರಣೆ ಅಂಗವಾಗಿ ಅನ್ವೇಷಕರು ಆರ್ಟ್ ಫೌಂಡೇಷನ್‌ನಿಂದ ಜಿಲ್ಲಾಮಟ್ಟದ 5ನೇ ತರಗತಿಯಿಂದ 9ನೇ ತರಗತಿಯ ಹಾಗೂ ಪದವಿ ಕಾಲೇಜು ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ 2 ವಿಭಾಗಗಳಲ್ಲಿ ಏಕ ಪಾತ್ರಾಭಿನಯ ಸ್ಪರ್ಧೆ ನಗರದಲ್ಲಿ ಮಾ.27ರಂದು ಹಮ್ಮಿಕೊಳ್ಳಲಾಗಿದೆ.

ತಮ್ಮ ಸಂಸ್ಥೆಯಿಂದ 2005ರಿಂದಲೂ ಪಿಯು ಪಠ್ಯ ಪುಸ್ತಕದ ಪಠ್ಯ ಆಧರಿತ ನಾಟಕಗಳ ಪ್ರದರ್ಶನ ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ನೀಡುವ ಮೂಲಕ ತನ್ನ ಹೆಜ್ಜೆ ಗುರುತು ಮೂಡಿಸಿದೆ. ಅನ್ವೇಷಕರು ಆರ್ಟ್ ಫೌಂಡೇಷನ್ ನ ಮುಖ್ಯ ಉದ್ದೇಶ ಮಕ್ಕಳಲ್ಲಿ, ವಿದ್ಯಾರ್ಥಿಗಳು, ಯುವ ಸಮೂಹಕ್ಕೆ ರಂಗಭೂಮಿ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಕ್ರಿಯಾಶೀಲರಾಗಿ ರೂಪಿಸಿ, ನಮ್ಮ ನಾಡಿನ ಹಾಗೂ ದೇಶದ ಕಲೆ, ಸಂಸ್ಕೃತಿ ಜಗತ್ತಿನಲ್ಲಿ ಅಜರಾಮರಗೊಳಿಸುವುದಾಗಿದೆ ಎಂದು ಸಂಸ್ಥೆ ತಿಳಿಸಿದೆ.

ಆಸಕ್ತರು ಮಾ.23ರೊಳಗಾಗಿ ಹೆಸರು ನೋಂದಾಯಿಸಬೇಕು. ಸ್ಪರ್ಧೆಯಲ್ಲಿ ಭಾಗವಹಿಸುವ ಎಲ್ಲರಿಗೂ ಪ್ರಮಾಣಪತ್ರ ನೀಡಲಾಗುವುದು. ವಿಜೇತರಿಗೆ ಪ್ರತ್ಯೇಕ 3 ವಿಭಾಗಗಳಿಗೂ ಬಹುಮಾನ ನೀಡಲಾಗುವುದು. ಪ್ರಥಮ ಬಹುಮಾನ 5 ಸಾವಿರ ರು., ದ್ವಿತೀಯ ಬಹುಮಾನ 3 ಸಾವಿರ ರು., ತೃತೀಯ ಬಹುಮಾನ 2 ಸಾವಿರ ಇರುತ್ತದೆ. ಕನಿಷ್ಟ 30ರಿಂದ ಗರಿಷ್ಠ 50 ಸ್ಪರ್ಧಿಗಳಿಗೆ ಮಾತ್ರ ಸ್ಪರ್ಧೆಗೆ ಅವಕಾಶವಿದ್ದು, ಮಾ.27ರಂದು ಸ್ಪರ್ಧೆ ನಡೆಯಲಿದೆ.

ವಿಶ್ವರಂಗ ದಿನಾಚರಣೆಯ ಪ್ರತಿಮ ಸಭಾ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ನೀವು-ನಾವು ಸಾಂಸ್ಕೃತಿಕ ವೇದಿಕೆ, ಭೂಮಿಕಾ ಮಹಿಳಾ ರಂಗ ವೇದಿಕೆ, ರಂಗ ವೇದಿಕೆ ಅಕಾಡೆಮಿ, ರಂಗ ಅನಿಕೇತನ ಇನ್ನಿತರೆ ರಂಗ ತಂಡಗಳ ಸಂಯುಕ್ತಾಶ್ರಯದಲ್ಲಿ ಮಾ.30ರಂದು ಹಮ್ಮಿಕೊಳ್ಳಲಾಗಿದೆ. ಆಸಕ್ತರು ಹೆಸರು ನೋಂದಾಯಿಸಲು, ಹೆಚ್ಚಿನ ಮಾಹಿತಿಗೆ ಮೊ-98442-68176ಕ್ಕೆ ಸಂಪರ್ಕಿಸಲು ಅನ್ವೇಷಕರು ಫೌಂಡೇಷನ್‌ನ ಎಸ್.ಎಸ್.ಸಿದ್ದರಾಜು ಮನವಿ ಮಾಡಿದ್ದಾರೆ.