ಜೈನ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಶೃಂಗ 2025ರ ಸಂಭ್ರಮ ಸಂಪನ್ನ

| Published : Apr 01 2025, 12:45 AM IST

ಸಾರಾಂಶ

ನಗರದ ಜೈನ್ ತಾಂತ್ರಿಕ ಮಹಾವಿದ್ಯಾಲಯದಲ್ಲಿ 2024-25ನೇ ಸಾಲಿನ ಎರಡನೇ ದಿನದ ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಶೃಂಗ-2025ದ ಸಮಾರೋಪ ಸಮಾರಂಭ ಶನಿವಾರ ಸಂಜೆ ಕಾಲೇಜಿನ ಆವರಣದಲ್ಲಿ ಸಂಭ್ರಮದಿಂದ ನಡೆಯಿತು.

ದಾವಣಗೆರೆ: ನಗರದ ಜೈನ್ ತಾಂತ್ರಿಕ ಮಹಾವಿದ್ಯಾಲಯದಲ್ಲಿ 2024-25ನೇ ಸಾಲಿನ ಎರಡನೇ ದಿನದ ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಶೃಂಗ-2025ದ ಸಮಾರೋಪ ಸಮಾರಂಭ ಶನಿವಾರ ಸಂಜೆ ಕಾಲೇಜಿನ ಆವರಣದಲ್ಲಿ ಸಂಭ್ರಮದಿಂದ ನಡೆಯಿತು.

ಬೆಳಗಾವಿಯ ವಿಟಿಯು ರಿಜಿಸ್ಟ್ರಾರ್ ಡಾ. ಬಿ.ಇ. ರಂಗಸ್ವಾಮಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ, ಇತ್ತೀಚಿನ ಬದಲಾವಣೆಯ ದಿನಗಳಲ್ಲಿ ವಿದ್ಯಾರ್ಥಿಗಳು ನಿರಂತರ ಸಾಧನೆ ಮತ್ತು ಬದಲಾವಣೆಗೆ ತಕ್ಕಂತೆ ಹೊಂದಿಕೊಳ್ಳುವುದು ಅನಿವಾರ್ಯ. ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಲ್ಲಿಯೂ ಆಸಕ್ತಿ ಹೊಂದಬೇಕು. ಇದರಿಂದ ಅವರಿಗೆ ಉತ್ತಮ ಭವಿಷ್ಯ ಇರುತ್ತದೆ ಎಂದು ಹೇಳಿದರು.

ಜೈನ್ ಸಮೂಹ ಸಂಸ್ಥೆಗಳ ಸಲಹೆಗಾರ ಡಾ.ಮಂಜಪ್ಪ ಸಾರಥಿ ಮಾತನಾಡಿ, ವಿದ್ಯಾರ್ಥಿಗಳು ನಿರಂತರ ಕಲಿಕೆಯಿಂದ ತಮ್ಮ ವಿದ್ಯಾರ್ಥಿ ಜೀವನದಿಂದಲೆ ನಾಗಲೋಟದಿಂದ ಬೆಳೆಯುತ್ತಿರುವ ಜಗತ್ತಿಗೆ ಸವಾಲೊಡ್ಡುವ ರೀತಿಯಲ್ಲಿ ತಯಾರಾಗಬೇಕು ಎಂದು ತಿಳಿಸಿದರು.

ಕಾಲೇಜಿನ ಪ್ರಾಚಾರ್ಯ ಡಾ. ಡಿ.ಬಿ. ಗಣೇಶ ಅಧ್ಯಕ್ಷತೆ ಕಾರ್ಯಕ್ರಮದಲ್ಲಿ ಸಂಚಾಲಕ ಡಾ.ಸಂತೋಷ ಎಂ. ನೇಜಕರ್, ಸಾಂಸ್ಕೃತಿಕ ಸಂಯೋಜಕ ಪ್ರೊ. ಎಸ್.ಮುರಳೀಧರ, ಕ್ರೀಡಾ ಸಂಯೋಜಕ ಟಿ.ಅರುಣ ಕುಮಾರ, ಡಾ. ಎನ್.ಮಧುಕೇಶ್ವರ, ವಿವಿಧ ವಿಭಾಗಗಳ ಮುಖ್ಯಸ್ಥರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಹಿನ್ನೆಲೆ ಗಾಯಕರಾದ ಡಾ.ಶಮಿತಾ ಮಲ್ನಾಡ್, ಡಾ.ಶ್ರೀರಾಮ್ ಕಸರ್ ಚಲನಚಿತ್ರ ಹಾಡುಗಳನ್ನು ಹಾಡಿ ರಂಜಿಸಿದರು.

- - - -31ಕೆಡಿವಿಜಿ31.ಜೆಪಿಜಿ: