ಸಾರಾಂಶ
ಕನ್ನಡಪ್ರಭ ವಾರ್ತೆ ಶಿರಾ ಜನವರಿ 1 ರಂದು ತಾಲೂಕು ಆಡಳಿತದ ವತಿಯಿಂದ ಆಚರಿಸುವ ಅಮರ ಶಿಲ್ಪಿ ಜಕಣಾಚಾರಿ ಸಂಸ್ಕರಣ ದಿನೋತ್ಸವ ಆಚರಣೆಯನ್ನು ಕೇವಲ ಸರಕಾರಿ ಕಾರ್ಯಕ್ರಮವಾಗಿ ಆಚರಿಸದೆ ಶಿಲ್ಪಿಗಳನ್ನು ಕರೆಸಿ ಸನ್ಮಾನಿಸುವ ಮೂಲಕ ಸಂಸ್ಕರಣತ್ಸೋವಕ್ಕೆ ಹೊಸ ಮೆರುಗು ತರುವ ಕಾರ್ಯಕ್ರಮ ವಾಗಬೇಕಾಗಿದೆ ವಿಶ್ವಕರ್ಮ ಸಮುದಾಯದ ಮುಖಂಡ ಎಸ್.ಜಿ.ರುದ್ರಾಚಾರ್ ತಾಲೂಕು ಆಡಳಿತಕ್ಕೆ ಮನವಿ ಮಾಡಿದ್ದಾರೆ.ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು ಈ ನಾಡಿನ ದೇವಸ್ಥಾನಗಳಲ್ಲಿ ಹಲವು ವಿಗ್ರಹಗಳನ್ನು ಕೆತ್ತಿ ಹಿಂದೂ ದೇವಸ್ಥಾನಗಳಿಗೆ ಮೆರುಗು ತಂದಿರುವ ಶಿಲ್ಪಕಲಾಕಾರರ ಸಮುದಾಯವಾದ ವಿಶ್ವಕರ್ಮ ಸಮುದಯದ ಅಮರಶಿಲ್ಪಿ ಜಕಣಾಚಾರಿ ಅವರ ಸಂಸ್ಕರಣೆಯ ದಿನೊತ್ಸವಕ್ಕೆ ಕಲ್ಲಿನ ವಾಸ್ತು ಶಿಲ್ಪಿಗಳು ಕಾರ್ಯಕ್ರಮಕ್ಕೆ ಆಗಮಿಸಿ ಕಾರ್ಯಕ್ರಮಕ್ಕೆ ಬರುವಂತ ಶಿಲ್ಪಾಕಾರರು ವಿಶ್ವಕರ್ಮ ಸಮುದಾಯದ ಐದು ಪಂಚ ಕುಲಕಸುಬುನು ಮಾಡುವ ಶಿಲ್ಪಿಗಳನ್ನು ಕರೆತರುವ ಕೆಲಸವಾಗಬೇಕಾಗಿದೆ. ದ್ವಾಪರ ಯುಗ, ತ್ರೇತಾ ಯುಗ, ಕಲಿಯುಗ ಈ ಸುಂದರ ಪ್ರಂಪಚವನ್ನು ಶಿಲ್ಪಾ ಕಲಾ ಕೃತಿಗಳಿಂದ ಈ ಜಗತ್ತನ್ನು ಸುಂದರಗೊಳಿಸಿದ್ದಾರೆ. ಈ ಜಗತ್ತಿನಲ್ಲಿ ಯಾವುದೇ ಯುಗ ಬರಲಿ ಅಲ್ಲಿ ವಿಶ್ವಕರ್ಮ ಶಿಲ್ಪಿಗಳು ಇದ್ದರೆ ಅಲ್ಲಿ ಯುಗ ಆಗಲು ಸಾಧ್ಯ. ಆದ್ದರಿಂದ ಕಾರ್ಯಕ್ರಮಕ್ಕೆ ಆಗಮಿಸುವ ಎಲ್ಲಾ ವಿಶ್ವಕರ್ಮ ಸಮುದಾಯದ ಬಂಧುಗಳು ಶಿಲ್ಪಕಾರರು ತಮ್ಮ ಕಾಯಕದ ಉಳಿ ಸುತ್ತಿಗೆಯನ್ನು ಪ್ರದರ್ಶನಕ್ಕೆ ತರಬೇಕು. ಶಿಲ್ಪಗಳ ವಿನ್ಯಾಸ ನೈಪುಣ್ಯತೆ ಕರಕುಶಲತೆಯ ಉಳಿ ಪೆಟ್ಟಿನಿಂದ ರೂಪ ಕೊಟ್ಟಿರುವ ಶಿಲ್ಪಾ ಕಲಾಕೃತಿಗಳು ಕಲ್ಲುಗಳನ್ನು ಕಾರ್ಯಕ್ರಮಕ್ಕೆ ತರಬೇಕೆಂದು ಮನವಿ ಮಾಡಿದ್ದಾರೆ.