ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಕೇಂದ್ರ ಸರಕಾರದ ಬೆಂಬಲ ಬೆಲೆ ಯೋಜನೆಯಡಿ ಎಫ್.ಎ.ಕ್ಯೂ ಗುಣಮಟ್ಟದ ಸೂರ್ಯಕಾಂತಿ ಉತ್ಪನ್ನವನ್ನು ಪ್ರತಿ ಕ್ವಿಂಟಲ್ ಗೆ ₹7,721ರಂತೆ ಪ್ರತಿ ಎಕರೆಗೆ 4 ಕ್ವಿಂಟಲ್‌ನಂತೆ ಪ್ರತಿ ರೈತರಿಂದ ಗರಿಷ್ಠ 20 ಕ್ವಿಂಟಲ್ ಖರೀದಿ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಸಂಗಪ್ಪ ಹೇಳಿದರು.ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಮಂಗಳವಾರ ಜರುಗಿದ ಜಿಲ್ಲಾ ಟಾಸ್ಕ್ ಪೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಗುಣಮಟ್ಟದ ಸೂರ್ಯಕಾಂತಿ ಖರೀದಿಗೆ ಜಿಲ್ಲೆಯಲ್ಲಿ ಒಟ್ಟು 17 ಖರೀದಿ ಕೇಂದ್ರ ತೆರೆಯಲಾಗಿದ್ದು, ನೋಂದಣಿ ಪ್ರಕ್ರಿಯೆ ಆದೇಶದ ದಿನಾಂಕದಿಂದ 50 ದಿನಗಳವರೆಗೆ ಹಾಗೂ ಖರೀದಿ ಅವಧಿಯನ್ನು 60 ದಿನಗಳವರೆಗೆ ನಿಗದಿಪಡಿಸಲಾಗಿದೆ. ನೋಂದಣಿ ಕಾರ್ಯದ ಜೊತೆಗೆ ಖರೀದಿ ಪ್ರಕ್ರಿಯೆ ಪ್ರಾರಂಭಿಸಲಾಗುತ್ತಿದೆ ಎಂದರು.
ಸೂರ್ಯಕಾಂತಿ ಗುಣಮಟ್ಟದ ಪ್ರಕಾರ ಗರಿಷ್ಠ ಮಿತಿಗಳು ಪ್ರತಿ ಕ್ವಿಂಟಲ್‌ಗೆ ಕಲ್ಮಶಗಳು (ವಿದೇಶಿ ವಸ್ತು) ಶೇ.2, ಒಡೆದ ಅಥವಾ ಒಡೆದ ಬೀಜಗಳು ಶೇ.3ರಷ್ಟು, ಹಾನಿಗೊಳಗಾದ ಮತ್ತು ಜೇರುಂಡೆ ಬೀಜಗಳು ಶೇ.4ರಷ್ಟು ಅಪಕ್ವ ಮತ್ತು ಕುಗ್ಗಿದ ಕಾಳು ಶೇ.5 ಹಾಗೂ ತೇವಾಂಶ ಶೇ.9ರಷ್ಟು ಇರುತ್ತದೆ. ಜಿಲ್ಲೆಯ ರೈತರು ನೋಂದಣಿಗಾಗಿ ಆಧಾರ್ ಕಾರ್ಡ್, ಪಹಣಿ ಪತ್ರಿಕೆ, ಆಧಾರ್ ಲಿಂಕ್ ಆಗಿರುವ ರಾಷ್ಟ್ರೀಕೃತ ಬ್ಯಾಂಕಿನ ಪಾಸ್‌ಬುಕ್ ಪ್ರತಿ ಸಲ್ಲಿಸಿ ನಿಗದಿತ ಅವಧಿಯೊಳಗಾಗಿ ನೋಂದಣಿ ಮಾಡಿಕೊಂಡು ಮಾರಾಟ ಮಾಡಬಹುದು. ಮಾಹಿತಿಗಾಗಿ ಜಿಲ್ಲಾ ವ್ಯವಸ್ಥಾಪಕರು, ಪ್ರಾದೇಶಿಕ ಎಣ್ಣೆ ಬೀಜ ಬೆಳೆಗಾರರ ಸಹಕಾರ ಸಂಘಗಳ ಒಕ್ಕೂಟ, ಬಾಗಲಕೋಟೆ (9900553056), ಸಹಾಯಕ ನಿರ್ದೇಶಕರು ಎಪಿಎಂಸಿ, ಬಾಗಲಕೋಟೆ (9035353912) ಇವರನ್ನು ಸಂಪರ್ಕಿಸುವಂತೆ ಜಿಲ್ಲಾಧಿಕಾರಿಗಳು ತಿಳಿಸಿದರು.ಸಭೆಯಲ್ಲಿ ಜಂಟಿ ಕೃಷಿ ನಿರ್ದೇಶಕ ಟಿ.ಎಸ್. ರುದ್ರೇಶಪ್ಪ, ಎಪಿಎಂಸಿ ಸಹಾಯಕ ನಿರ್ದೇಶಕ ಬಿ.ಎಸ್. ಬಾವಿಹಾಳ, ಎಪಿಎಂಸಿಗಳ ಕಾರ್ಯದರ್ಶಿಗಳಾದ ರವಿ ರಾಠೋಡ, ರತ್ನಾಕರ ಎ.ವೈ., ದೇವರಾಜ ಪಟ್ಟಣಶೆಟ್ಟಿ, ಆರ್.ಎಂ. ದಂಡೀನ, ವಿ.ಡಿ. ಪಾಟೀಲ, ಆಹಾರ ಇಲಾಖೆಯ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ ಅಂಗಡಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಬಾಕ್ಸ್್‌ಖರೀದಿ ಕೇಂದ್ರಗಳ ವಿವರ:
ಬಾಗಲಕೋಟೆ ತಾಲೂಕಿನ ಎಣ್ಣೆ ಬೀಜ ಬೆಳೆಗಾರರ ಸಹಕಾರಿ ಸಂಘ ಖಜ್ಜಿಡೋಣಿ (9901106360), ಟಿ.ಎ.ಪಿ.ಸಿ.ಎಂ.ಎಸ್ ಬಾಗಲಕೋಟೆ (7353861868), ಬಾದಾಮಿ ತಾಲೂಕಿನ ಎಣ್ಣೆ ಬೀಜ ಬೆಳೆಗಾರರ ಸಹಕಾರಿ ಸಂಘ ಕಗಲಗೊಂಬ (9611859963), ಕೆಂದೂರ (9480410494), ನಂದಿಕೇಶ್ವರ (7624951919), ಪಿ.ಕೆ.ಪಿ.ಎಸ್ ಕೆರೂರ (9972301729), ಮುಧೋಳ ತಾಲೂಕಿನ ಎಣ್ಣೆ ಬೀಜ ಬೆಳೆಗಾರರ ಸಹಕಾರಿ ಸಂಘ ಜುನ್ನೂರ (7022544942), ಬೀಳಗಿ ತಾಲೂಕಿನ ಎಣ್ಣೆ ಬೀಜ ಬೆಳೆಗಾರರ ಸಹಕಾರಿ ಸಂಘ ಸೊನ್ನ (9632289239), ಟಿ.ಎ.ಪಿ.ಸಿ.ಎಂ.ಎಸ್ ಬೀಳಗಿ (7019682890), ಹುನಗುಂದ ತಾಲೂಕಿನ ಟಿ.ಎ.ಪಿ.ಸಿ.ಎಂ.ಎಸ್, ಹುನಗುಂದ (9480262655), ಎಫ್ಪಿಓ ಸೂಳೇಭಾವಿ (9449762433), ಜಮಖಂಡಿ ತಾಲೂಕಿನ ಟಿ.ಎ.ಪಿ.ಸಿ.ಎಂ.ಎಸ್, ಜಮಖಂಡಿ (9448920992), ಇಲಕಲ್ಲ ತಾಲೂಕಿನ ಪಿ.ಕೆ.ಪಿ.ಎಸ್, ನಂದವಾಡಗಿ (9902377067), ಪಿ.ಕೆ.ಪಿ.ಎಸ್ ಕರಡಿ (9110402689) ಹಾಗೂ ಜಿಎಫ್ಪಿಸಿಎಲ್ ಇಳಕಲ್ಲ (8660203311).