ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಧೂಮ್ ಮಚಾಲೇ ಧೂಮ್ ಮಚಾಲೇ ಧೂಮ್ ಎಂದು ಹಾಡುವುದರ ಜೊತೆ ಭರ್ಜರಿ ಸ್ಟೆಪ್ ಹಾಕುವ ಮೂಲಕ ಇಡೀ ಯುವ ಸಮೂಹಕ್ಕೆ ಕಿಚ್ಚು ಹಚ್ಚಿದ ಸುನಿಧಿ......ನಗರದ ಹೊರವಲಯದ ಉತ್ತನಹಳ್ಳಿ ಜ್ವಾಲಾಮುಖಿ ದೇವಸ್ಥಾನದ ಬಳಿ ಆಯೋಜಿಸಿರುವ ಯುವ ದಸರಾ ಕಾರ್ಯಕ್ರಮದ ಕೊನೆಯ ದಿನವಾದ ಶನಿವಾರ ಬಾಲಿವುಡ್ ಗಾಯಕಿ ಸುನಿಧಿ ಚೌಹಾಣ್ ಗಾಯನಕ್ಕೆ ಸಂಗೀತ ಪ್ರಿಯರು ಕುಣಿದು ಕುಪ್ಪಳಿಸಿದರು. ಆ ಮೂಲಕ ಆರು ದಿನಗಳ ಯುವದಸರಾ ಕಾರ್ಯಕ್ರಮಕ್ಕೆ ತೆರೆ ಬಿದ್ದಿತು.
ಯುವ ದಸರಾ ವೇದಿಕೆಗೆ ಆಗಮಿಸುತ್ತಲೇ ಧೂಮ್ ಚಿತ್ರದ ಹಾಡು ಹಾಡುತ್ತಲೇ ಪ್ರೇಕ್ಷಕರಿಗೆ ಕಿಕ್ ಏರಿಸಿದರು. ತುಂತುರು ಮಳೆಯಲ್ಲೂ ಯುವಕ ಯುವತಿಯರು ಹುಚ್ಚೆದ್ದು ಕುಣಿದು ಯುವ ಸಂಭ್ರಮವನ್ನು ಸಂಭ್ರಮಿಸಿದರು.ಬಾಲಿವುಡ್ ಸಿನಿಮಾಗಳ ಮೇನ್ ಇಸ್ಕು ಮೇರೆ, ಐಸಾ ಮೇರಿ ಪ್ಯಾರ್ ಹೈ, ಹ್ಯಾನೀ ಹ್ಯಾನಿ ಚುಟ್ಕೆಯ, ಮೈ ಕ್ರೇಜಿ ಗರ್ಲ್ ಮೈ ಕ್ರೇಜಿ ಗರ್ಲ್, ಫನಾ ಚಿತ್ರದ ಮೇರೆ ಹಾತ್ ಮೇ , ತೇರಿ ಮೇರಿ ಇಸ್ಕು ಸೇ, ಮೇರಿ ಕಮಲಿ ಕಮಲಿ, ಪುಷ್ಪ ಚಿತ್ರದ ಸಾಮಿ ಸಾಮಿ ಹಾಡುಗಳನ್ನು ಹಾಡಿ ಯುವ ದಸರಾ ಅದ್ದೂರಿ ಸಂಭ್ರಮಕ್ಕೆ ಸಾಕ್ಷಿಯಾದರು.
ಕನ್ನಡ ಹಾಡಿಗೆ ಫಿದಾಮುಂಗಾರು ಮಳೆ ಚಿತ್ರದ ಕುಣಿದು ಕುಣಿದು ಬಾರೇ ಹಾಗೂ ಜೋಗಿ ಚಿತ್ರದ ಚಿಕು ಬುಕ್ ರೈಲು ನಿಲ್ಲೋದಿಲ್ಲ ಎಲ್ಲೂ, ರಾ ರಾ ರಾಕಮ್ಮ ಹಾಡು ಹಾಡುತ್ತಲೇ ಇಡೀ ಮೈದಾನದಲ್ಲಿ ನೆರೆದಿದ್ದ ಪ್ರೇಕ್ಷಕರು ತಾವು ಕೂಡ ಧ್ವನಿಗೂಡಿಸಿ ಶಿಳ್ಳೆ ಕೇಕೆ ಹಾಕಿ ಕುಣಿದು ಕುಪ್ಪಳಿಸಿದರು.
ಕಿಕ್ಕಿರಿದು ತುಂಬಿದ ಮೈದಾನಯುವ ದಸರಾ ಅಂತಿಮ ದಿನ ಮೈದಾನ ಕಿಕ್ಕಿರಿದು ತುಂಬಿತ್ತು. ಸುನಿಧಿ ಚೌಹಾಣ್ ಗಾಯನಕ್ಕೆ ಎಲ್ಲರೂ ಕುಣಿದು ಶಿಳ್ಳೆ ಚಪ್ಪಾಳೆ ತಟ್ಟುವ ಮೂಲಕ ಅಭಿನಂದಿಸಿದರು ಕಾರ್ಯಕ್ರಮ ಮುಗಿಯುವವರೆಗೂ ಮೈದಾನ ತುಂಬಿ ತುಳುಕಿತ್ತು.