ಸುಂಟಿಕೊಪ್ಪ ಮಾಸಿಕ ಗ್ರಾಮಸಭೆ: ಪಿಡಿಒ ವಿರುದ್ಧ ಸದಸ್ಯರ ಸಭಾತ್ಯಾಗ

| Published : Oct 31 2024, 12:57 AM IST / Updated: Oct 31 2024, 12:58 AM IST

ಸುಂಟಿಕೊಪ್ಪ ಮಾಸಿಕ ಗ್ರಾಮಸಭೆ: ಪಿಡಿಒ ವಿರುದ್ಧ ಸದಸ್ಯರ ಸಭಾತ್ಯಾಗ
Share this Article
  • FB
  • TW
  • Linkdin
  • Email

ಸಾರಾಂಶ

ಸುಂಟಿಕೊಪ್ಪ ಗ್ರೇಡ್ 1 ಗ್ರಾಮ ಪಂಚಾಯಿತಿ ಮಾಸಿಕ ಸಾಮಾನ್ಯ ಸಭೆ ಪಂಚಾಯಿತಿ ಅಧ್ಯಕ್ಷ ಪಿ.ಆರ್.ಸುನಿಲ್‌ಕುಮಾರ್ ಅಧ್ಯಕ್ಷತೆಯಲ್ಲಿ ಬುಧವಾರ ನಡೆಯಿತು. ಅಧಿಕಾರಿ ಅನುಮತಿ ಪತ್ರ ನೀಡಿರುವ ವಿಚಾರದ ಬಗ್ಗೆ ಪ್ರಶ್ನಿಸಿ ಗ್ರಾಮಸ್ಥರು ಸಭೆ ಬಹಿಷ್ಕರಿಸಿದ ಬೆಳವಣಿಗೆ ನಡೆಯಿತು.

ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ

ಸುಂಟಿಕೊಪ್ಪ ಗ್ರೇಡ್ 1 ಗ್ರಾಮ ಪಂಚಾಯಿತಿ ಮಾಸಿಕ ಸಾಮಾನ್ಯ ಸಭೆ ಪಂಚಾಯಿತಿ ಅಧ್ಯಕ್ಷ ಪಿ.ಆರ್.ಸುನಿಲ್‌ಕುಮಾರ್ ಅಧ್ಯಕ್ಷತೆಯಲ್ಲಿ ಬುಧವಾರ ನಡೆಯಿತು. ಅಧಿಕಾರಿ ಅನುಮತಿ ಪತ್ರ ನೀಡಿರುವ ವಿಚಾರದ ಬಗ್ಗೆ ಪ್ರಶ್ನಿಸಿ ಗ್ರಾಮಸ್ಥರು ಸಭೆ ಬಹಿಷ್ಕರಿಸಿದ ಬೆಳವಣಿಗೆ ನಡೆಯಿತು.

ಬುಧವಾರ ಪೂರ್ವಾಹ್ನ 10.30ಕ್ಕೆ ಸಭೆ ಆರಂಭಗೊಂಡಿತು. ಇತರ ವಿಚಾರಗಳ ಚರ್ಚೆಯ ಸಂದರ್ಭ ಸದಸ್ಯ ಜಿನಾಸುದ್ದೀನ್ ಸುಂಟಿಕೊಪ್ಪ ಅಯ್ಯಪ್ಪಸ್ವಾಮಿ ದೇವಸ್ಥಾನದ ಬಳಿ ಖಾಸಗಿ ಆಸ್ಪತ್ರೆ ಕಾರ್ಯಚರಿಸುತ್ತಿದೆ. ಈ ಆಸ್ಪತ್ರೆಗೆ ಪಂಚಾಯಿತಿ ವತಿಯಿಂದ ನೀಡಲಾಗುವ ನಿರಾಕ್ಷೇಪಣಾ ಪತ್ರದ ದಾಖಲಾತಿ ಪ್ರಶ್ನಿಸಿದರು.

ಕಡತವನ್ನು ಸಭೆಗೆ ನೀಡುವಂತೆ ಕೋರಿದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಆದೇಶ ನೀಡಲಾಗಿಲ್ಲ ಎಂದಿದ್ದು, ಕಡತ ಒದಗಿಸಲು ನಿರಾಕರಿಸಿದರು.

ಅಧಿಕಾರಿಯ ನಡೆ ಆಕ್ಷೇಪಿಸಿ ಜೀನಾಸುದ್ದಿನ್, ಉಪಾಧ್ಯಕ್ಷೆ ಶಿವಮ್ಮ ಸೇರಿದಂತೆ ಕೆಲವು ಸದಸ್ಯರು ಸಭಾತ್ಯಾಗ ಮೂಲಕ ಹೊರ ನಡೆದರು. ಪಂಚಾಯಿತಿ ಮುಂಭಾಗದಲ್ಲಿ ಧರಣಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯ ಕಾರ್ಯವೈಖರಿಯ ವಿರುದ್ಧ ಘೋಷಣೆ ಕೂಗಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ.ಆರ್.ಸುನಿಲ್‌ಕುಮಾರ್ ಅಸಮಾನಧಾನಿತ ಸದಸ್ಯರನ್ನು ಮನವೊಲಿಸಲು ಎಷ್ಟೇ ಪ್ರಯತ್ನಿಸಿದರೂ ಸದಸ್ಯರು ಅಧ್ಯಕ್ಷರಿಗೆ ಸಹಮತ ವ್ಯಕ್ತಪಡಿಸದೆ ಸಭೆ ಮುಂದೂಡುವಂತಾಯಿತು.

ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಶಿವಮ್ಮ ಮಹೇಶ್, ಜೀನಾಸುದ್ದೀನ್, ಶಬ್ಬೀರ್, ಸೋಮನಾಥ್, ಆಲಿಕುಟ್ಟಿ, ರಫೀಕ್‌ಖಾನ್, ನಾಗರತ್ನ, ಮಂಗಳಮ್ಮ, ಅಸೀನ ಹಾಗೂ ರೇಷ್ಮ ಸಭಾತ್ಯಾಗ ಮಾಡಿದರು.