ಸಾರಾಂಶ
ಕೇರಳದ ಚಂಡೆಯೊಂದಿಗೆ ಮಾವೆಲಿ ವೇ಼ಷದಾರಿಯೊಂದಿಗೆ ಮಲಯಾಳಿ ಬಾಂಧವರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಘೋಷಯಾತ್ರೆಯನ್ನು ನಡೆಸಿದರು.
ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ
ಸುಂಟಿಕೊಪ್ಪ ಮಲಯಾಳಿ ಸಮಾಜದಿಂದ 18ನೇ ವರ್ಷದ ಓಣಂ ಆಚರಣೆ ಪ್ರಯುಕ್ತ ಕೇರಳದ ಚಂಡೆಯೊಂದಿಗೆ ಮಾವೆಲಿ ವೇಷಧಾರಿಯೊಂದಿಗೆ ಮಲಯಾಳಿ ಭಾಂದವರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಘೋಷಯಾತ್ರೆಯನ್ನು ನಡೆಸಿದರು.ಸೋಮವಾರದಂದು ಮಲಯಾಳಿ ಸಮಾಜದ ವತಿಯಿಂದ 18ನೇ ಓಣಂ ಆಚರಣೆ ಅಂಗವಾಗಿ ಮಲಯಾಳಿ ಬಾಂಧವರು ಕೇರಳ ಶೈಲಿಯಲ್ಲಿ ಮಹಿಳೆಯರು ಬಿಳಿಬಣ್ಣದ ಪಟ್‌ಸೀರೆ, ಪುರುಷರು ಬಿಳಿ ಪಂಚೆ ಮತ್ತು ಬಿಳಿಶರ್ಟ್ ಧರಿಸಿ ಮೆರವಣಿಗೆಯಲ್ಲಿ ಮಂಜನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಿಂದ ಆರಂಭಗೊಂಡ ಘೋಷಯಾತ್ರೆಯು ವಾಮನ, ಮಾವೆಲಿ ಚಕ್ರವರ್ತಿ, ಕತ್ತಕಳ್ಳಿ, ಮೋಹಿನಿ, ತಿರುವಾದಿರ, ಹುಲಿವೇಷ ಹಾಗೂ ಆನೆಯ ಕಲಾಕೃತಿಯ ಮೆರವಣಿಯೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿ ಮಂಜನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪಕ್ಕೆ ಹಿಂತಿರುಗುವ ಮೂಲಕ ಸಮಾಪ್ತಿಗೊಂಡಿತು. ಈ ಸಂದರ್ಭ ಅಧ್ಯಕ್ಷ ರಮೇಶ್‌ಪಿಳ್ಳೆ, ಉಪಾಧ್ಯಕ್ಷರಾದ ವಾಸುದೇವ, ಟಿ.ಕೆ.ಹರೀಶ್ , ಪ್ರಧಾನ ಕಾರ್ಯದರ್ಶಿ ಕೆ.ಎಸ್.ಅನಿಲ್, ಖಜಾಂಚಿ ಅನೀಶ್ ಕೆ., ಸಹ ಕಾರ್ಯದರ್ಶಿಗಳಾಗಿ ಗಿರೀಶ್ ಮತ್ತು ಜಿ.ಪಿ.ಅನಿಲ್ ಕುಮಾರ್, ಸಂಘಟನಾ ಕಾರ್ಯದರ್ಶಿಗಳಾದ ಕೆ. ರಾಜೇಶ್ ಮತ್ತು ವಿ. ಕೆ. ರಾಜು, ಕ್ರೀಡಾ ಕಾರ್ಯದರ್ಶಿ ಗಳಾಗಿ ಪಿ. ಸಿ. ಸುರೇಶ್ ಮತ್ತು ಬಿಜು ಪಿ. ಆರ್., ಗೌರವ ಅಧ್ಯಕ್ಷರಾಗಿ ಭಾಸ್ಕರನ್ ಮತ್ತು ವೇಲಾಯುಧನ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ.ಆರ್.ಸುನಿಲ್‌ಕುಮಾರ್, ಸದಸ್ಯರಾದ ಶಾಂತಿ, ಮಾಜಿ ಅಧ್ಯಕ್ಷರಾದ ಪಿ.ಆರ್.ಸುಕುಮಾರ್, ವಿ.ಎ.ಸಂತೋಷ್, ಪಿ.ಸಿ.ಮೋಹನ್ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಮಕ್ಕಳು, ಯುವಕ, ಯುವತಿಯರು, ಮಹಿಳೆಯರು ಹಾಗೂ ಪುರುಷರು ಇದ್ದರು.;Resize=(128,128))
;Resize=(128,128))
;Resize=(128,128))
;Resize=(128,128))