ಸಾರಾಂಶ
ಈದ್‌ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ ಸುಂಟಿಕೊಪ್ಪ ಠಾಣಾ ವ್ಯಾಪ್ತಿಯ ಮಸೀದಿ ಮುಖಂಡರಸೌಹಾರ್ದ ಪೂರ್ವಭಾವಿ ಸಭೆ ನಡೆಯಿತು.
ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ
ಈದ್‌ಮಿಲಾದ್ ಹಬ್ಬದ ಹಿನ್ನಲೆಯಲ್ಲಿ ಸುಂಟಿಕೊಪ್ಪ ಠಾಣಾ ವ್ಯಾಪ್ತಿಯ ಮಸೀದಿ ಮುಖಂಡರನ್ನು ಸೌಹಾರ್ದ ಪೂರ್ವಭಾವಿ ಸಭೆಯನ್ನು ಕುಶಾಲನಗರ ವೃತ್ತ ನಿರೀಕ್ಷಕ ದಿನೇಶ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.ಬುಧವಾರ ಸಂಜೆ ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಆಯೋಜಿಸಲಾದ ಈದ್‌ಮಿಲಾದ್ ಪೂರ್ವಭಾವಿ ಸಭೆಯಲ್ಲಿ ಠಾಣಾ ವ್ಯಾಪ್ತಿಗೆ ಒಳಗೊಂಡ ಮಸೀದಿಗಳ ಮುಖಂಡರು ಸಮ್ಮುಖದಲ್ಲಿ ಈದ್‌ಮಿಲಾದ್ ಆಚರಣೆಯ ಪೂರ್ವಭಾವಿ ಸಭೆಯನ್ನು ಸೂಕ್ತವಾದ ಸಲಹೆ ಸೂಚನೆಗಳನ್ನು ನೀಡಿದರು. ಆಚರಣೆಯು ಇತರರಿಗೆ ಕಿರಿ ಕಿರಿ ತೊದರೆಯಾಗದಂತೆ ಆಯೋಜಕರು ಎಚ್ಚರವಹಿಸಬೇಕು. ಅಹಿತಕರ ಘಟನೆಗಳು ಘಟಿಸದಂತೆ ಆಯೋಜಕರು ಮತ್ತು ಮುಖಂಡರು ಎಚ್ಚರವಹಿಸಬೇಕು. ಸಡಗರ ಸಂಭ್ರಮದಿಂದ ಆಚರಿಸಿಕೊಳ್ಳುವಂತೆ ವೃತ್ತ ನಿರೀಕ್ಷಕ ದಿನೇಶ್ ಕುಮಾರ್ ತಿಳಿಸಿದರು. ಸಭೆಯಲ್ಲಿ ಸುಂಟಿಕೊಪ್ಪ ಪೊಲೀಸ್ ಠಾಣಾಧಿಕಾರಿ ಮೋಹನ್ ರಾಜ್ ಅಧಿಕೃತ ಸಲಹೆ ಸೂಚನೆ ಮತ್ತು ಮಾರ್ಗಸೂಚಿಗಳನ್ನು ನೀಡಿದರು. ಈ ಸಂದರ್ಭ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪಿ.ಎಂ.ಲತೀಫ್ ಸೇರಿದಂತೆ ವಿವಿಧ ಭಾಗಗಳಿಂದ ಆಗಮಿಸಿದ್ದ ಮಸೀದಿಗಳ ಮುಖಂಡರು ಹಾಗೂ ಮೌಲವಿಗಳು ಪಾಲ್ಗೊಂಡಿದ್ದರು.