ಸಾರಾಂಶ
ಸುಂಟಿಕೊಪ್ಪ ಗ್ರೇಡ್ 1 ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಲವು ಬಡಾವಣೆಗಳಲ್ಲಿ ಕೊಳವೆ ಬಾವಿಗಳ ಮೋಟಾರ್ ದುರಸ್ತಿ ಹಾಗೂ ಮುಖ್ಯ ಪೈಪ್ ಲೈನ್‌ಗಳು ಒಡೆದ ಪರಿಣಾಮ ನೀರಿನ ಸಬರಾಜಿನಲ್ಲಿ ವ್ಯತ್ಯಯವಾಗಿ ಬಡಾವಣೆಯ ಜನರು ಸಂಕಷ್ಟಕ್ಕೀಡಾಗಿದ್ದರು. ಇದ್ದನ್ನು ಮನಗಂಡ ಗ್ರಾ.ಪಂ. ಆಡಳಿತ ಮಂಡಳಿ, ಟ್ಯಾಂಕರ್ ಮೂಲಕ ಕುಡಿಯುವ ನೀರು ಸಬರಾಜಿನ ವ್ಯವಸ್ತೆ ಕಲ್ಪಿಸಿದೆ.
ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ
ಸುಂಟಿಕೊಪ್ಪ ಗ್ರೇಡ್ 1 ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಲವು ಬಡಾವಣೆಗಳಲ್ಲಿ ಕೊಳವೆ ಬಾವಿಗಳ ಮೋಟಾರ್ ದುರಸ್ತಿ ಹಾಗೂ ಮುಖ್ಯ ಪೈಪ್ ಲೈನ್‌ಗಳು ಒಡೆದ ಪರಿಣಾಮ ನೀರಿನ ಸಬರಾಜಿನಲ್ಲಿ ವ್ಯತ್ಯಯವಾಗಿ ಬಡಾವಣೆಯ ಜನರು ಸಂಕಷ್ಟಕ್ಕೀಡಾಗಿದ್ದರು. ಇದ್ದನ್ನು ಮನಗಂಡ ಗ್ರಾ.ಪಂ. ಆಡಳಿತ ಮಂಡಳಿ, ಟ್ಯಾಂಕರ್ ಮೂಲಕ ಕುಡಿಯುವ ನೀರು ಸಬರಾಜಿನ ವ್ಯವಸ್ತೆ ಕಲ್ಪಿಸಿದೆ.ಕೊಳವೆ ಬಾವಿಗಳ ಮೋಟಾರ್‌ಗಳು ದುರಸ್ತಿ ಹಾಗೂ ಮುಖ್ಯ ಪೈಪ್‌ಲೈನ್‌ಗಳು ಒಡೆದು ಹೋದ ಪರಿಣಾಮ ಸುಂಟಿಕೊಪ್ಪ ಗ್ರೇಡ್ 1 ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಲವು ಬಡಾವಣೆಗಳಲ್ಲಿ ಕಳೆದ 4-5 ದಿನಗಳಿಂದ ನೀರಿನ ಸಮಸ್ಯೆ ಉದ್ಭವಿಸಿದೆ. ಈ ಪ್ರದೇಶದ ಜನರ ಬವಣೆಯನ್ನು ಅರಿತುಕೊಂಡ ಗ್ರಾ.ಪಂ. ಅಧ್ಯಕ್ಷ ಪಿ.ಆರ್.ಸುನಿಲ್ ಕುಮಾರ್ ಹಾಗೂ ಆಡಳಿತ ಮಂಡಳಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳೊಂದಿಗೆ ಚರ್ಚಿಸಿ, ಖಾಸಗಿ ತೋಟಗಳ ನೀರಿನ ಟ್ಯಾಂಕರ್ ಪಡೆದು ಸಂಕಷ್ಟಕ್ಕೀಡಾದ ಮನೆಗಳಿಗೆ ನೀರು ಸಬರಾಜು ಮಾಡುವ ಮೂಲಕ ಸಮಸ್ಯೆ ಪರಿಹಾರ ಕ್ರಮಕ್ಕೆ ಕೈಗೊಂಡರು.ಬೇಸಿಗೆಯ ಈ ಸಂದರ್ಭದಲ್ಲಿ ಪ್ರಾಥಮಿಕ ಅವಶ್ಯಕತೆಯಾದ ನೀರಿನ ಪೂರೈಕೆಯನ್ನು ಮಾಡಿದ ಗ್ರಾ.ಪಂ. ಅಧ್ಯಕ್ಷ, ಆಡಳಿತ ಮಂಡಳಿ, ಸಿಬ್ಬಂದಿಗೆ ಗ್ರಾಮಸ್ಥರು ಕೃತಜ್ಞತೆ ಸಲ್ಲಿಸಿದ್ದಾರೆ.
;Resize=(128,128))
;Resize=(128,128))
;Resize=(128,128))
;Resize=(128,128))