ಸಾರಾಂಶ
ಆನವಟ್ಟಿ: ರೈತರ ಸಮಸ್ಯೆಗಳನ್ನು ಬಗೆಹರಿಸಲಾಗುವುದು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಸಿದ್ದರಾಮಯ್ಯ ಅಬ್ಬರದ ಪ್ರಚಾರ ಮಾಡಿ, ಮತ ಪಡೆದು ಈಗ ಸರ್ಕಾರ ರಚನೆ ಮಾಡಿ 150 ದಿನ ಆದರೂ ಸಮರ್ಪಕ ವಿದ್ಯುತ್ ಪೂರೈತ್ತಿಲ್ಲ ಎಂದು ರೈತ ಸಂಘದ ಮುಖಂಡ ಮುಂಜುನಾಥ ಗೌಡ ಸರ್ಕಾರದ ವಿರುದ್ಧ ಹರಿಹಾಯ್ದರು.
ಸೋಮವಾರ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಆಶ್ರಯದಲ್ಲಿ ಆನವಟ್ಟಿಯ ಚೌಡಮ್ಮ ವೃತ್ತದಿಂದ ಮೆಸ್ಕಾಂವರೆಗೆ ಸರ್ಕಾರದ ವಿರುದ್ಧ ಘೋಷಣೆ ಹಾಕುತ್ತಾ, ಸಾಂಕೇತಿಕವಾಗಿ ರೈತರು ಮೆಸ್ಕಾಂ ಮುತ್ತಿಗೆ ಹಾಕಿ, ನಡೆಸಿದ ಪ್ರತಿಭಟನಾ ಸಭೆಯಲ್ಲಿ ಅವರು ಮಾಡಿದರು.2 ಎಕರೆ ಭೂಮಿಯಲ್ಲಿ ಬೆಳೆ ಬೆಳೆಯಲು ರೈತರಿಗೆ ₹5 ಲಕ್ಷ ಹಣ ಬೇಕು. ನಮಗೆ ಸರ್ಕಾರದ ಸವಲತ್ತುಗಳು ಬೇಡ, ಬೆಳೆದ ಫಸಲಿಗೆ ತಕ್ಕ ಬೆಲೆ ನಿಗದಿ ಮಾಡಬೇಕು. ಮಾಜಿ ಸಿಎಂ ಎಸ್.ಬಂಗಾರಪ್ಪ ಅವಧಿಯಲ್ಲಿ ರೈತರಿಗೆ ಉಚಿತ ವಿದ್ಯುತ್ ನೀಡಿದರು. ಆದರೆ ಈಗಿನ ಸರ್ಕಾರ ನಾವೇ ₹1.50 ಲಕ್ಷ ಕೊಟ್ಟು ಕೊರೆಸಿರುವ ಕೊಳವೆಬಾವಿಗೆ ವಿದ್ಯುತ್ ಸಪರ್ಕ ಪಡೆಯಲು ಮೆಸ್ಕಾಂ ₹50 ಸಾವಿರ ಹಣ ಕಟ್ಟಬೇಕು. ಟಿಸಿ ಸುಟ್ಟು ಹೊದರೇ 72 ತಾಸಿನಲ್ಲಿ ರೈತರಿಗೆ ಟಿಸಿ ನೀಡಬೇಕು. ಅದರಲ್ಲೂ ಹಣದ ದಂದೆ ನಡೆಯುತ್ತಿದೆ. ಅಕ್ರಮ ಸಕ್ರಮ ಎಂಬ ಹೆಸರಿನಲ್ಲಿ ರೈತರಿಗೆ ಅನ್ಯಾಯವಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿದ್ಯುತ್ ತಂತಿ ಹಾದುಹೋಗಿರುವ ಮಾರ್ಗಗಳ ನಿರ್ವಹಣೆ ಮೆಸ್ಕಾಂ ಮಾಡುತ್ತಿಲ್ಲ. ಇಲ್ಲಸಲ್ಲದ ಸಾಬೂಬು ಹೇಳಿ ನಿರಂತರ ವಿದ್ಯುತ್ ಸ್ಥಗಿತ ಮಾಡುತ್ತಾರೆ ಎಂದು ರೈತರು ಆರೋಪಿಸಿದರು.ಹಗಲಿನಲ್ಲೇ 8 ತಾಸು ರೈತರಿಗೆ ವಿದ್ಯುತ್ ನೀಡಬೇಕು. ದಿನದ 24 ಗಂಟೆ ಲೈನ್‌ಮ್ಯಾನ್ ಅವರ ಸೇವೆ ರೈತರಿಗೆ ಸಿದ್ಧವಿರಬೇಕು. ಪದೇಪದೆ ವಿದ್ಯುತ್ ಸ್ಥಗಿತವಾದರೇ ಹಾಗೂ ಸರಿಯಾದ ಸಮಯಕ್ಕೆ ಟಿಸಿಗಳನ್ನು ಆಳವಡಿಸದೇ ಇದ್ದರೇ ಮುಂದಿನ ದಿನಗಳಲ್ಲಿ ಮೆಸ್ಕಾಂಗೆ ಬೀಗ ಹಾಕಿ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ರೈತ ಮುಖಂಡರಾದ ಉಮೇಶ್ ಗೌಡ, ಶಿವಣ್ಣ ಹುಣಸಳ್ಳಿ ಇತರರು ಇದ್ದರು.- - --ಕೆಪಿ6ಎಎನ್‌ಟಿ1ಇಪಿ: ಪ್ರತಿಭಟನೆಯಲ್ಲಿ ರೈತ ಮುಖಂಡ ಮಂಜುನಾಥ ಗೌಡ ಮಾತನಾಡಿದರು.