ಡೇರೆ ಅಭಿವೃದ್ಧಿಗೆ ಗುಣಮಟ್ಟದ ಹಾಲು ಪೂರೈಸಿ

| Published : Sep 27 2024, 01:25 AM IST

ಸಾರಾಂಶ

ಅಬ್ಬಣಿ ಹಾಲು ಉತ್ಪಾದಕರ ಸಹಕಾರ ಸಂಘ ೨೦೨೩-೨೪ನೇ ಸಾಲಿನಲ್ಲಿ ೧,೦೪,೨೩,೮೪೦ ರು. ಹಾಲು ಖರೀದಿ ಮಾಡಿದ್ದು, ೧೨,೪೯,೭೨೪ ರು. ವ್ಯಾಪಾರದೊಂದಿಗೆ ೫,೮೦, ೫೧೪ ರು. ನಿವ್ವಳ ಲಾಭ ಗಳಿಸಿದೆ. ಹಾಲು ಉತ್ಪಾದಕರಿಗೆ ದೀಪಾವಳಿಗೆ ಮುನ್ನ ಬೋನಸ್‌ ನೀಡಲಾಗುವುದು

ಕನ್ನಡಪ್ರಭ ವಾರ್ತೆ ಕೋಲಾರ

ಯಾವುದೇ ಹಾಲು ಉತ್ಪಾದಕರ ಸಂಘ ಅಭಿವೃದ್ಧಿಯಾಗಬೇಕೆಂದರೆ, ಹಾಲು ಉತ್ಪಾದಕರು ಗುಣಮಟ್ಟದ ಹಾಲು ಸರಬರಾಜು ಮಾಡಬೇಕು. ಸಂಘದ ಅಭಿವೃದ್ಧಿಗೆ ಹಾಲು ಉತ್ಪಾದಕರೇ ಶಕ್ತಿ ಎಂದು ಅಬ್ಬಣಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ವಿ.ಕೃಷ್ಣಪ್ಪ ಹೇಳಿದರು.

ತಾಲೂಕಿನ ಅಬ್ಬಣಿ ಹಾಲು ಉತ್ಪಾದಕರ ಸಹಕಾರ ಸಂಘ ನಿಯಮಿತದ ೨೦೨೩-೨೪ನೇ ಸಾಲಿನ ವಾರ್ಷಿಕ ಸರ್ವಸದಸ್ಯರ ಸಭೆಯಲ್ಲಿ ಅವರು ಮಾತನಾಡಿದರು.

ಡೇರಿಗೆ 5.80 ಲಕ್ಷ ರು. ಲಾಭ:

ಅಬ್ಬಣಿ ಹಾಲು ಉತ್ಪಾದಕರ ಸಹಕಾರ ಸಂಘ ೨೦೨೩-೨೪ನೇ ಸಾಲಿನಲ್ಲಿ ೧,೦೪,೨೩,೮೪೦ ರು. ಹಾಲು ಖರೀದಿ ಮಾಡಿದ್ದು, ೧೨,೪೯,೭೨೪ ರು. ವ್ಯಾಪಾರದೊಂದಿಗೆ ೫,೮೦, ೫೧೪ ರು. ನಿವ್ವಳ ಲಾಭ ಗಳಿಸಿದೆ. ನಿವ್ವಳ ಲಾಭಾಂಶದಲ್ಲಿ ೨೦೨೩-೨೪ನೇ ಸಾಲಿನಲ್ಲಿ ಹಾಲು ಸರಬರಾಜು ಮಾಡಿದ ಹಾಲು ಉತ್ಪಾದಕ ರೈತರಿಗೆ ಶೇ.೨.೬೪ರಷ್ಟು ಬೋನಸನ್ನು ದೀಪಾವಳಿಗೆ ಹಬ್ಬಕ್ಕೆ ಮುಂಚಿತವಾಗಿ ನೀಡಲಾಗುವುದು ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು.

ಇದೇ ಸಂದರ್ಭದಲ್ಲಿ ಹಾಲಿನ ಕ್ಯಾನಗಳನ್ನು ವಿತರಿಸಲಾಯಿತು. ಸಂಘದ ಉಪಾಧ್ಯಕ್ಷ ಎಂ.ಬಿ.ಶ್ರೀರಾಮ್, ವಿಸ್ತರಣಾಧಿಕಾರಿ ನಾಗಪ್ಪ,, ಕೆ.ಎಂ.ಎಫ್. ಕೃಷಿ ಅಧಿಕಾರಿ ಕರಿಸಿದ್ಧಪ್ಪ, ಮುಖ್ಯ ಕಾರ್ಯನಿರ್ವಾಹಕ ಪ್ರದೀಪ್.ಎನ್, ನಿರ್ದೇಶಕರಾದ ನಾಗರಾಜ್.ವಿ, ವೆಂಕಟೇಶಪ್ಪ.ಎಸ್, ನಾರಾಯಣಸ್ವಾಮಿ, ಟಿ.ಕೆ.ನಾಗರಾಜ್, ನಾರಾಯಣಸ್ವಾಮಿ, ಕೃಷ್ಣಪ್ಪ.ಎಂ, ಎ.ಪಿ. ನಾರಾಯಣಸ್ವಾಮಿ, ಮಂಜುನಾಥ.ಎ.ವಿ., ಸುನಂದಮ್ಮ, ಸುಮಿತ್ರಮ್ಮ, ಸರ್ಕಾರಿ ನಾಮ ನಿರ್ದೇಶಕಿ ಚಂದ್ರಕಲಾ ಶಂಕರ್. ಹಾಲು ಪರೀಕ್ಷಕ ಕೆ.ನಾರಾಯಣಸ್ವಾಮಿ, ಕೃತಕ ಗರ್ಭಧಾರಣ ಕಾರ್ಯಕರ್ತ ಟಿ.ನಾರಾಯಣಸ್ವಾಮಿ, ಕಚೇರಿ ಸಹಾಯಕ ಎಂ.ಗೋಪಾಲ್ ಇದ್ದರು.