ಜನೋಪಯೋಗಿ ಯೋಜನೆಗಾಗಿ ಬಿಜೆಪಿ ಬೆಂಬಲಿಸಿ

| Published : Apr 30 2024, 02:11 AM IST

ಸಾರಾಂಶ

ಅಭಿವೃದ್ಧಿ ಪರ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿಗೆ ಮತ ನೀಡುವ ಮೂಲಕ ದೇಶದಲ್ಲಿ ಮತ್ತೊಮ್ಮೆ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ತರಲು ದುಡಿಯೋಣ

ಮುಂಡರಗಿ: ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಕೌಶಲ್ಯಾಭಿವೃದ್ಧಿ ಯೋಜನೆಯಡಿಯಲ್ಲಿ ಸಮಾಜದ ಅತ್ಯಂತ ಕೆಳವರ್ಗದ ಕುಶಲಕರ್ಮಿಗಳಿಗೆ ಪರಿಣಿತಿ ಇರುವ ವೃತ್ತಿಯಲ್ಲಿ ಉದ್ಯಮ ಪ್ರಾರಂಭಿಸಲು ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯಲ್ಲಿ ಕೇಂದ್ರ ಸರ್ಕಾರದಿಂದ ₹13 ಸಾವಿರ ಕೋಟಿ ಅನುದಾನ ನೀಡದೆ ಎಂದು ಬಿಜೆಪಿ ಮುಖಂಡ ಆನಂದಗೌಡ ಪಾಟೀಲ ಹೇಳಿದರು.

ಅವರು ಸೋಮವಾರ ಬೆಳಗ್ಗೆ ದುರ್ಗಾದೇವಿ ನಗರ, ಲಕ್ಷ್ಮಿಚಲಪತಿ ನಗರ, ಅಂಬೇಡ್ಕರ್ ನಗರ, ಗೊಂದಳಿ ಓಣಿಗಳಲ್ಲಿ ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಪರ ಮನೆ ಮನೆಗೆ ತೆರಳಿ ಮತಯಾಚಿಸಿ ಮಾತನಾಡಿದರು.

ಬೀದಿಬದಿ ವ್ಯಾಪಾರಸ್ಥರನ್ನು ಖಾಸಗಿ ಲೇವಾದೇವಿದಾರರ ಕಪಿಮುಷ್ಠಿಯಿಂದ ರಕ್ಷಿಸಲು ಪರಿಚಯಿಸಿದ ಪ್ರಧಾನಮಂತ್ರಿ ಸ್ವನಿಧಿ ಯೋಜನೆಯಿಂದ ₹34.45 ಲಕ್ಷ ಬೀದಿ ವ್ಯಾಪಾರಸ್ಥರಿಗೆ ಜಾಮೀನುರಹಿತ ಸಾಲ ವಿತರಿಸಲಾಗಿದೆ. ಇಂತಹ ಇನ್ನಷ್ಟು ಜನೋಪಯೋಗಿ ಯೋಜನೆ ಜಾರಿಗೆ ತರಲು ಬಿಜೆಪಿ ಸರ್ಕಾರ ಮತ್ತೊಮ್ಮೆ ಅಧಿಕಾರಕ್ಕೆ ಬರಲು ಎಲ್ಲರೂ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿಗೆ ಮತ ನೀಡುವ ಮೂಲಕ ನರೇಂದ್ರ ಮೋದಿಯವರನ್ನು ಮತ್ತೆ ಪ್ರಧಾನಮಂತ್ರಿಯನ್ನಾಗಿ ಮಾಡೋಣ ಎಂದರು.

ಗ್ರಾಪಂ ಮಾಜಿ ಸದಸ್ಯ ದೇವು ಹಡಪದ ಮಾತನಾಡಿ, ಕಳೆದ 10 ವರ್ಷದ ಅವಧಿಯಲ್ಲಿ ಪ್ರಧಾನಮಂತ್ರಿ ಜೀವನ್ ಸುರಕ್ಷಾ ಯೋಜನೆಯಡಿ 20.75 ಕೋಟಿ ಫಲಾನುಭವಿಗಳು ಪ್ರಯೋಜನ ಪಡೆದುಕೊಂಡಿದ್ದಾರೆ.ಪ್ರಧಾನಮಂತ್ರಿ ಜೀವನ್ ಜ್ಯೋತಿ ವೀವವಿಮಾ ಯೋಜನೆಯಡಿಯಲ್ಲಿ 13.53 ಕೋಟಿ ಫಲಾನುಭವಿಗಳು ಪ್ರಯೋಜನೆ ಪಡೆದುಕೊಂಡಿದ್ದಾರೆ. ಸ್ವಚ್ಛ ಭಾರತ ಮಿಷನ್ ಯೋಜನೆಯಡಿಯಲ್ಲಿ 11.72 ಕೋಟಿ ಶೌಚಾಲಯಗಳ ನಿರ್ಮಾಣ ಮಾಡಲಾಗಿದೆ. ಅಭಿವೃದ್ಧಿ ಪರ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿಗೆ ಮತ ನೀಡುವ ಮೂಲಕ ದೇಶದಲ್ಲಿ ಮತ್ತೊಮ್ಮೆ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ತರಲು ದುಡಿಯೋಣ ಎಂದರು.

ಈ ಸಂದರ್ಭದಲ್ಲಿ ಎಸ್.ಎಸ್. ಗಡ್ಡದ, ಈಶ್ವರಗೌಡ ಪಾಟೀಲ, ವೀರಣ್ಣ ತುಪ್ಪದ, ಪ್ರಶಾಂತ ಗುಡದಪ್ಪನವರ, ಆರ್.ಎಂ. ತಪ್ಪಡಿ, ಶ್ರೀನಿವಾಸ ಅಬ್ಬೀಗೇರಿ, ಶಂಕರ ಉಳ್ಳಾಗಡ್ಡಿ, ಶಂಕರಗೌಡ ಪಾಟೀಲ, ವಿರೇಶ ಸಜ್ಜನರ, ಅಂದಪ್ಪ ಕುರುಡಗಿ, ವೀರೇಂದ್ರ ಅಂಗಡಿ, ರವಿಗೌಡ ಪಾಟೀಲ, ಮಂಜುನಾಥ ದೊಡ್ಡಮನಿ, ಧ್ರುವಕುಮಾರ ಹೂಗಾರ, ಸುರೇಶ ಬಂಡಿವಡ್ಡರ, ಯಲ್ಲಪ್ಪ ಗಣಾಚಾರಿ, ಮಂಜು ಭಜಂತ್ರಿ, ಶಿವು ನಾಡಗೌಡ್ರ, ಶಿದ್ದು ದೇಸಾಯಿ, ಬಸವರಾಜ ಅಂಕದ, ಮಂಜು ಮುಧೋಳ, ಪವಿತ್ರಾ ಕಲ್ಲಕುಟಗರ್, ಪುಷ್ಪಾ ಉಕ್ಕಲಿ, ಅರುಣಾ ಪಾಟೀಲ, ಮಂಜುಳಾ ಹಮ್ಮಿಗಿಮಠ, ರಾಧಾ ಬಾರಕೇರ, ವೀನಾ ಬೂದಿಹಾಳ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.