ಸಾರಾಂಶ
ಗದಗ ತಾಲೂಕಿನ ಹೊಸಳ್ಳಿ ಗ್ರಾಮದಲ್ಲಿ ಗದಗ-ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪರ ನರಗುಂದ ಶಾಸಕ ಸಿ.ಸಿ. ಪಾಟೀಲ ಮತಯಾಚಿಸಿದರು.
ಕನ್ನಡಪ್ರಭ ವಾರ್ತೆ ಗದಗ
ಕಳೆದ ೧೦ ವರ್ಷಗಳಲ್ಲಿ ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಆಡಳಿತದಲ್ಲಿ ದೇಶ ಸಾಕಷ್ಟು ಅಭಿವೃದ್ಧಿ ಹೊಂದಿದೆ. ಇನ್ನೂ ಹೆಚ್ಚಿನ ಅಭಿವೃದ್ಧಿ ಮಾಡಲು ಪ್ರಧಾನಿ ಮೋದಿ ಅವರಿಗೆ ಮತ್ತೊಂದು ಅವಕಾಶವನ್ನು ಬಸವರಾಜ ಬೊಮ್ಮಾಯಿ ಅವರಿಗೆ ಮತ ಹಾಕುವ ಮೂಲಕ ನೀಡಬೇಕು ಎಂದು ನರಗುಂದ ಶಾಸಕ ಸಿ.ಸಿ. ಪಾಟೀಲ ಮತದಾರರಲ್ಲಿ ಮನವಿ ಮಾಡಿದರು.ತಾಲೂಕಿನ ಹೊಸಳ್ಳಿ ಗ್ರಾಮದಲ್ಲಿ ಗದಗ-ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪರ ಅವರು ಮತ ಯಾಚಿಸುತ್ತ, ಪ್ರಧಾನಿ ಜಗತ್ತು ಕಂಡ ಸರ್ವಶ್ರೇಷ್ಟ ನಾಯಕ. ಅವರಿಂದ ಮಾತ್ರ ಅಭಿವೃದ್ಧಿ ಸಾಧ್ಯ ಎಂದರು.
ವಿಪ ಸದಸ್ಯ ಎಸ್.ವಿ. ಸಂಕನೂರ, ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಜು ಕುರಡಗಿ, ದ್ಯಾಮಣ್ಣ ನೀಲಗುಂದ, ಭದ್ರೇಶ ಕುಸ್ಲಾಪುರ, ನಗರಸಭೆ ಅಧ್ಯಕ್ಷೆ ಉಷಾ ದಾಸರ, ಬೂದಪ್ಪ ಹಳ್ಳಿ, ಎಚ್.ಸಿ. ಮಂಜುನಾಥಸ್ವಾಮಿ, ಅಶೋಕ ಸಂಕಣ್ಣವರ, ಸಿದ್ದಪ್ಪ ಪಲ್ಲೇದ, ಸಿದ್ದಪ್ಪ ಈರಗಾರ, ರಾಮಪ್ಪ ಬಾಣದ, ಹೊನ್ನಪ್ಪ ಹಳ್ಳಿ, ಶಿವಕುಮಾರ ಬ್ಯಾಹಟ್ಟಿ, ಅಜ್ಜಪ್ಪ ಈರಗಾರ, ಶೋಭಾ ಅಂಗಡಿ, ಅಶೋಕ ಅಂಗಡಿ, ಶಿವಪ್ಪ ಅಂಗಡಿ, ಸುಭಾಸ ಈರಗಾರ ಹಾಗೂ ಪ್ರಮುಖರು ಇದ್ದರು.ಬಿಜೆಪಿ ೪೦೦ ಗುರಿ ತಲುಪಲು ಆಶೀರ್ವದಿಸಿ
ಕನ್ನಡಪ್ರಭ ವಾರ್ತೆ ಗದಗ
ಭಾರತ ದೇಶ ಮತ್ತು ಭಾರತೀಯರನ್ನು ರಕ್ಷಣೆ ಮಾಡುವ ಬಿಜೆಪಿ ಬೆಂಬಲಿಸುವ ಮೂಲಕ ದೇಶದಲ್ಲಿ ಮತ್ತೊಮ್ಮೆ ನರೇಂದ್ರ ಮೋದಿ ಪ್ರಧಾನಿ ಆಗಬೇಕಿದೆ ಎಂದು ಬಿಜೆಪಿ ಜಿಲ್ಲಾ ಎಸ್‌ಸಿ ಮೋರ್ಚಾ ಅಧ್ಯಕ್ಷ ಮಂಜುನಾಥ ಶಿವಪ್ಪ ಮುಳಗುಂದ ಹೇಳಿದರು.ನಗರದಲ್ಲಿ ಶನಿವಾರ ಬಿಜೆಪಿ ಸಂಸ್ಥಾಪನಾ ದಿನಾಚರಣೆಯ ಸಂದರ್ಭದಲ್ಲಿ ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ ಮಾತನಾಡಿದರು.ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ೪೦೦ ಸ್ಥಾನಗಳನ್ನು ಗೆಲ್ಲುವ ಗುರಿ ನಿಗದಿ ಮಾಡಿದೆ. ಹಾವೇರಿ ಲೋಕಸಭಾ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಅತ್ಯಧಿಕ ಮತಗಳಿಂದ ಗೆಲ್ಲಿಸುವ ಮೂಲಕ ಸಂಸತ್ತಿಗೆ ಆಯ್ಕೆ ಮಾಡುವ ಜವಾಬ್ದಾರಿ ಹಾವೇರಿ ಮತ್ತು ಗದಗ ಕ್ಷೇತ್ರದ ಜನತೆಯದಾಗಿದೆ. ಕೇಂದ್ರದಲ್ಲಿ ಬಿಜೆಪಿ ಬಹುಮತ ಸರ್ಕಾರ ರಚನೆ ಆಗುವಂತೆ ಆಶೀರ್ವದಿಸಿ ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ಯಲ್ಪಪ್ಪ ಕಾಂಬಳೇಕರ, ಅಶೋಕ ಮುಳಗುಂದ, ಶರಣಪ್ಪ ಚುರ್ಚಪ್ಪನವರ, ದೇವೇಂದ್ರಪ್ಪ ಗೋಟೂರ, ದತ್ತು ಖೋಡೆ, ಬಸವಂತಪ್ಪ ಕರ್ಜಗಿ, ಲಕ್ಷ್ಮಣ ದೊಡ್ಡಮನಿ, ಬೂದಪ್ಪ ಹುಣಶೀಮರದ, ಶಿವು ಪೂಜಾರ ಸೇರಿದಂತೆ ಹಲವಾರು ಕಾರ್ಯಕರ್ತರಿದ್ದರು.