ಕಾಂಗ್ರೆಸ್ ಅಭ್ಯರ್ಥಿ ಬೆಂಬಲಿಸಿ: ಶಾಸಕ ತುರ್ವಿಹಾಳ

| Published : May 27 2024, 01:05 AM IST

ಕಾಂಗ್ರೆಸ್ ಅಭ್ಯರ್ಥಿ ಬೆಂಬಲಿಸಿ: ಶಾಸಕ ತುರ್ವಿಹಾಳ
Share this Article
  • FB
  • TW
  • Linkdin
  • Email

ಸಾರಾಂಶ

ತುರ್ವಿಹಾಳ ಪಟ್ಟಣದ ನಡೆದ ಉಪನ್ಯಾಸಕ ಹಾಗೂ ಪದವೀಧರರ ಪುರ್ವಭಾವಿ ಸಭೆಯಲ್ಲಿ ಶಾಸಕ ಆರ್‌.ಬಸನಗೌಡ ತುರ್ವಿಹಾಳ ಮಾತನಾಡಿದರು.

ಕನ್ನಡಪ್ರಭ ವಾರ್ತೆ ತುರ್ವಿಹಾಳ

ಪಟ್ಟಣದ ಪದವೀಧರರು ಜೂ.3ರಂದು ನಡೆಯುವ ಈಶಾನ್ಯ ಪದವೀಧರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಚಂದ್ರಶೇಖರ ಪಾಟೀಲ್‌ಗೆ ಬೆಂಬಲಿಸಬೇಕೆಂದು ಶಾಸಕ ಆರ್.ಬಸನಗೌಡ ತುರ್ವಿಹಾಳ ಹೇಳಿದರು.

ಪಟ್ಟಣದ ಎಂ.ಡಿ. ಫಾರೂಖ್ ಸಾಬ್ ಖಾಜಿ ನಿವಾಸದಲ್ಲಿ ಭಾನುವಾರ ನಡೆದ ಉಪನ್ಯಾಸಕ ಹಾಗೂ ಪದವೀಧರರ ಪುರ್ವಭಾವಿ ಸಭೆಯಲ್ಲಿ ಮಾತನಾಡಿ, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಅತಿಥಿ ಶಿಕ್ಷಕರ ವೇತನ ಹೆಚ್ಚಿಸಿದೆ. ಶಿಕ್ಷಕರ ವರ್ಗಾವಣೆ ಮಾಡಲು ಸಹಕಾರ ನೀಡಿದ್ದು, ಕಲ್ಯಾಣ ಕರ್ನಾಟಕ ಖಾಸಗಿ ಸಂಸ್ಥೆ ಹಾಗೂ ಶಿಕ್ಷಕರ ಶ್ರೇಯೋಭಿವೃದ್ಧಿಗೆ ಶ್ರಮಿಸಿದೆ. ಹೀಗೆ ಹಲವು ಕಾರ್ಯಕ್ರಮ ನಿಡಿದ್ದು, ಮುಂಬರುವ ಈಶಾನ್ಯ ಪದವೀಧರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಪದವೀಧರರು ಮತ ನಿಡುವಂತೆ ಮನವಿ ಮಾಡಿದರು.

ನಂತರ ಪಪಂ ಸದಸ್ಯ ಬಾಪುಗೌಡ ದೇವರಮನಿ ಮಾತನಾಡಿ, ಸಾರ್ವತ್ರಿಕ ಚುನಾವಣೆಗಿಂತ ಈ ಚುನಾವಣೆ ಬಿನ್ನವಾಗಿದೆ. ಪದವೀಧರ ಕ್ಷೇತ್ರದ ಮತದಾರರು ಪ್ರಜ್ಞಾವಂತರಾಗಿದ್ದು, ಕಾಂಗ್ರೆಸ್ ಪಕ್ಷದ ಸಿದ್ಧಾಂತ ಅರ್ಥೈಸಿಕೋಂಡು ಮತದಾನ ಮಾಡವ ಮೂಲಕ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಿ ಎಂದರು.

ಬಸವ ಚೇತನ ಕಾಲೇಜಿನ ಪ್ರಾಚಾರ್ಯ ವಿರುಪಾಕ್ಷಪ್ಪ ಗಚ್ಚಿಮನಿ ಮಾತನಾಡಿದರು.

ಈ ವೇಳೆ ಕೆಪಿಸಿಸಿ ಅಲ್ಪಸಂಖ್ಯಾತ ಘಟಕ ರಾಜ್ಯ ಪ್ರ.ಕಾರ್ಯದರ್ಶಿ ಎಮ್.ಡಿ.ಫಾರೂಖ ಸಾಬ್, ಶರಣಪ್ಪ ಹೊಸಗೌಡ್ರು, ಡಿ.ಶಂಕರಗೌಡ, ಯಲ್ಲಪ್ಪ ಭೋವಿ,ಪಕೀರಪ್ಪ ಭಂಗಿ, ಮರಿಯಪ್ಪ ಶಿಕ್ಷಕರು, ಸೋಮನಾಥ ಮಾಟೂರು, ಅರವಿಂದ ರೇಡ್ಡಿ, ಶರಣಪ್ಪ ಉದ್ಬಾಳ, ಸರ್ಕಾರಿ ಶಿಕ್ಷಕರ ಸಂಘದ ಅಧ್ಯಕ್ಷ ಕಳಕಪ್ಪ ಗಡೇದ, ಪದವೀಧರರು ಹಾಗೂ ಇನ್ನಿತರರು ಇದ್ದರು.