ಅತಿಥಿ ಉಪನ್ಯಾಸಕರ ಹೋರಾಟಕ್ಕೆ ಬೆಂಬಲ

| Published : Dec 23 2023, 01:46 AM IST

ಸಾರಾಂಶ

ಸರ್ಕಾರ ಆದಷ್ಟು ಶೀಘ್ರ ಅತಿಥಿ ಉಪನ್ಯಾಸಕರ ಬೇಡಿಕೆ ಈಡೇರಿಸಲು ಸೂಕ್ತ ಕ್ರಮ ಜರುಗಿಸಬೇಕು ಎಂದು ವಿವಿಧ ಸಂಘಟನೆಗಳ ಪದಾಧಿಕಾರಿಗಳು ಆಗ್ರಹಿಸಿದರು.

ರಾಣಿಬೆನ್ನೂರು: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮುಷ್ಕರ ನಡೆಸುತ್ತಿರುವ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅತಿಥಿ ಉಪನ್ಯಾಸಕರ ಹೋರಾಟ ಬೆಂಬಲಿಸಿ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ಇಲ್ಲಿನ ಕೆಇಬಿ ವಿನಾಯಕ ದೇವಸ್ಥಾನದ ಬಳಿಯಿಂದ ಮೆರವಣಿಗೆಯಲ್ಲಿ ಹೊರಟ ಪ್ರತಿಭಟನಾಕಾರರು ಬಸ್‌ನಿಲ್ದಾಣದವರೆಗೆ ತೆರಳಿ ತಹಸೀಲ್ದಾರ ಎಚ್.ಎನ್. ಶಿರಹಟ್ಟಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಅತಿಥಿ ಉಪನ್ಯಾಸಕರು ಸೇವಾ ಕಾಯಂಮಾತಿ ಮತ್ತು ಸೇವಾ ಭದ್ರತೆಗೆ ಆಗ್ರಹಿಸಿ ಕಳೆದ 30 ದಿನಗಳಿಂದ ಹೋರಾಟ ನಡೆಸುತ್ತಿದ್ದಾರೆ. ಆದರೆ ಸರ್ಕಾರ ಇದುವರೆಗೂ ಅದರ ಬಗ್ಗೆ ಯಾವುದೇ ಕ್ರಮ ಕೈಗೊಳ್ಳಲು ಮುಂದಾಗುತ್ತಿಲ್ಲ. ಆದ್ದರಿಂದ ಸರ್ಕಾರ ಆದಷ್ಟು ಶೀಘ್ರ ಅತಿಥಿ ಉಪನ್ಯಾಸಕರ ಬೇಡಿಕೆ ಈಡೇರಿಸಲು ಸೂಕ್ತ ಕ್ರಮ ಜರುಗಿಸಬೇಕು ಎಂದು ವಿವಿಧ ಸಂಘಟನೆಗಳ ಪದಾಧಿಕಾರಿಗಳು ಆಗ್ರಹಿಸಿದರು.

ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಕಾರ್ಯದರ್ಶಿ ರವೀಂದ್ರಗೌಡ ಪಾಟೀಲ, ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ನಿತ್ಯಾನಂದ ಕುಂದಾಪುರ, ಕನ್ನಡ ಜಾಗೃತಿ ವೇದಿಕೆಯ ಮಂಜುನಾಥ ದುಗ್ಗತ್ತಿ, ಫಕ್ಕೀರೇಶ ರಂಗರಡ್ಡಿ, ವಕೀಲರ ಸಂಘದ ಅಧ್ಯಕ್ಷ ಬುರಡಿಕಟ್ಟಿ, ಅತಿಥಿ ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಪ್ರಶಾಂತ ಬೆನ್ನೂರ, ಸ್ಥಳೀಯ ಅಧ್ಯಕ್ಷ ಡಾ. ಗೋವಿಂದಪ್ಪ ಜಿ, ಉಪನ್ಯಾಸಕರುಗಳಾದ ಕೆ.ಎಂ. ಮರಡಿಬಣಕಾರ, ಡಾ. ಎಸ್.ಎಲ್. ಕರ್ಲವಾಡ, ಎಂ.ಐ. ಸೊನ್ನದ, ಶಿಲ್ಪಾ ಹಲಗಣ್ಣನವರ, ಶಿಲ್ಪಾ ಹಾವನೂರ, ಶ್ರೀನಿವಾಸ ನಲವಾಗಲ, ಸತೀಶ ಜ್ಯೋತಿ, ಆನಂದ ಕಡ್ಲೆಪ್ಪನವರ, ಶಿರೂರ, ಕೇಶವ ಹಳ್ಳಿಗುಡಿ, ಮಾಧುರಿ, ವಿಮಾಲಾಕರ, ಕವಿತಾ ಮಾದೇನಹಳ್ಳಿ, ಶ್ವೇತಾಜೆ, ಉಮೇಶ ಸಾದರ ಪ್ರತಿಭಟನೆಯಲ್ಲಿದ್ದರು.